No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
  • Advertise With Us
  • Grievances
  • About Us
  • Contact Us
Sunday, August 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಸಚಿನ್ ಪಾರ್ಶ್ವನಾಥ್

ತಾವೇ ಬರೆದ ಸಂವಿಧಾನಕ್ಕೆ ತಾವೇ ತಲೆಬಾಗಿದ ಮಹಾನ್ ಆದರ್ಶವಾದಿ ಅಂಬೇಡ್ಕರ್

kalpa News by kalpa News
April 14, 2021
in ಸಚಿನ್ ಪಾರ್ಶ್ವನಾಥ್
0
ತಾವೇ ಬರೆದ ಸಂವಿಧಾನಕ್ಕೆ ತಾವೇ ತಲೆಬಾಗಿದ ಮಹಾನ್ ಆದರ್ಶವಾದಿ ಅಂಬೇಡ್ಕರ್
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಅದು 1954 ರ ಚುನಾವಣೆ ಸಮಯ. ಒಂದು ಕೋಣೆಯಲ್ಲಿ ಬಹು ಮುಖ್ಯ ವಿಷಯದ ಚರ್ಚೆ ನಡೆಯುತ್ತಿದೆ. ಒಂದು ವರ್ಗದ ಪ್ರಮುಖ ಮುಖಂಡರು ಸೇರಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಸಮುದಾಯದ ಮತಗಳೇ ನಿರ್ಣಾಯಕ. ಮತ್ತು ಕಳೆದ ಬಾರಿಯಂತೆ ನಾವು ಸೋಲಬಾರದು. ನಮ್ಮ ನಾಯಕರು ಇನ್ನಿಲ್ಲದಂತೆ ನಮ್ಮ ಏಳಿಗೆಗೆ ಶ್ರಮಿಸಿದವರು. ನಾವು ಎರಡನೇ ಮತವನ್ನು ಚಲಾಯಿಸಿದೇ ಆದರೆ ಅವಶ್ಯವಾಗಿ ನಮ್ಮ ಎದುರಾಳಿಗೆ ಹಾಕಬೇಕು. ಹಾಗಾಗಿ ನಮ್ಮ ಎರಡನೇ ಮತವನ್ನು ಚಲಾಯಿಸುವುದು ಬೇಡ ಎಂಬ ನಿರ್ಣಯಕ್ಕೆ ಬಂದರು. ಇನ್ನೇನು ನಿರ್ಣಯ ಎಲ್ಲರ ಒಪ್ಪಿಗೆ ಆಗಿ ಏಳಬೇಕು, ಬಾಗಿಲು ತೆರೆದ ಸದ್ದು. ಆ ಸಭೆಗೆ ಅನಿರೀಕ್ಷಿತವಾಗಿ ಆ ನಾಯಕ ಬಂದೇ ಬಿಟ್ಟರು. ‘ಏನು, ಯಾವುದರ ಚರ್ಚೆ ಆಗುತ್ತಿದೆ ಇಲ್ಲಿ?’ ಬೇರೆ ದಾರಿ ಇರಲಿಲ್ಲ, ಹೇಳಲೇಬೇಕಿತ್ತು. ‘ಬೇರೆ ಏನಿಲ್ಲ, ನಮ್ಮ ಸುದೀರ್ಘ ಪರಿಶ್ರಮದ ನಂತರವೂ ಹಿಂದಿನ ಚುನಾವಣೆಯಲ್ಲಿ ನಾವು ಸೋಲಬೇಕಾಯಿತು. ಅದಕ್ಕೆ ಮತ್ತೊಂದು ಕಾರಣವೂ ಇತ್ತು. ನಮ್ಮ ಎರಡನೇ ಮತ. ಯಾಕೆಂದರೆ ನಮ್ಮ ಎರಡನೇ ಮತಗಳು ಅವರಿಗೆ ಹೋದರೂ ಅವರ ಪಕ್ಷದ ಕಾರ್ಯಕರ್ತರು ನಮಗೆ ಅವರ ಎರಡನೇ ಮತಗಳ ಎಂದಿಗೂ ಹಾಕುವುದಿಲ್ಲ. ಇದರಿಂದ ನಮ್ಮ ಸೋಲು ಖಚಿತ. ಸಮಾಜದ ಅಭಿವೃದ್ಧಿಗೆ ನಿಮ್ಮ ಅಗತ್ಯತೆ ಇದೆ ನಮಗೆ. ಹಾಗಾಗಿ ಈ ಬಾರಿ ನಾವು ಯಾರೂ ಎರಡನೇ ಮತವನ್ನು ಚಲಾಯಿಸಬಾರದು ಎಂಬ ನಿರ್ಣಯ ಕೈಗೊಂಡೆವು. ಅದರ ಚರ್ಚೆ ನಡೆಯುತ್ತಿತ್ತು ಅಷ್ಟೆ.’ ಇದನ್ನು ಕೇಳಿ ಒಳಗೆ ಬಂದ ಆ ಮಹಾನ್ ನಾಯಕ ಉದ್ರಿಕ್ತನಾದ. ‘ನಾನು ಸೋಲನ್ನು ಎದುರಿಸಲು ಸಿದ್ಧನಿದ್ದೇನೆ, ಆದರೆ ನಿಮ್ಮ ಎರಡನೆಯ ಮತವನ್ನು ಮತದಾನ ಮಾಡದೆ ಇರಲು ನಾನು ನಿಮಗೆ ಬಿಡುವುದಿಲ್ಲ. ನಾನು ಭಾರತ ಸಂವಿಧಾನವನ್ನು ಸಿದ್ಧಪಡಿಸಿದ್ದೇನೆ. ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಬೇಜವಾಬ್ದಾರಿಯುತ ಹೆಜ್ಜೆಯನ್ನು ನಾನು ಒಪ್ಪಲು ಸಾಧ್ಯವೇ ಇಲ್ಲ.’ ಎಂದ ಆ ನಾಯಕ ಸ್ಪಷ್ಟ ದನಿಯಲ್ಲಿ. ನಿಮಗೆ ಇದು ಯಾರ ಬಗ್ಗೆ ಹೇಳಿರುವುದು ಎಂದು ಅರಿವು ಆಗಿರಬಹುದು. ಹೌದು ಆತ ಮತ್ಯಾರು ಅಲ್ಲ ಭಾರತದ ಮರೆಯಲಾಗದ ಮಹಾನ್ ನಾಯಕ ಬಾಬಾ ಸಾಹೇಬ್ ಅಂಬೇಡ್ಕರ್. ತನ್ನ ಸೋಲು ಲೆಕ್ಕಿಸದೇ ನ್ಯಾಯ ಮತ್ತು ತಾವೇ ಬರೆದ ಸಂವಿಧಾನಕ್ಕೆ ತಲೆ ಬಾಗಿದ ಮಹಾನ್ ವ್ಯಕ್ತಿತ್ವ. ಈ ಘಟನೆ ನಡೆದಿದ್ದು 1954 ರಲ್ಲಿ. ಮಹಾರಾಷ್ಟ್ರದ ಭಂಡಾರ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಬಾಬಾ ಸಾಹೇಬ ರಿಗೆ ಎದುರಾಳಿ ಅಶೋಕ್ ಮೆಹ್ತಾ ಇಂದ ತೀವ್ರ ಸ್ಪರ್ಧೆ ಎದುರಾಗಿತ್ತು. ಅದಲ್ಲದೆ ಹಿಂದಿನ ಚುನಾವಣೆಯಲ್ಲಿ ಬಾಬಾ ಸಾಹೇಬರು ಸೋತಿದ್ದರು. ಹಾಗಿದ್ದಾಗ ಸಭೆ ನಡೆಸಿದ ಪರಿಶಿಷ್ಟ ಜಾತಿ ಒಕ್ಕೂಟ ಅಶೋಕ್ ಮೆಹ್ತಾಗೆ ತಮ್ಮ ಎರಡನೇ ಮತವನ್ನು ಚಲಾಯಿಸಿದ ಪಕ್ಷದಲ್ಲಿ ಬಾಬಾ ಸಾಹೇಬರು ಈ ಬಾರಿಯೂ ಸೋಲುತ್ತಾರೆ ಎಂದು ಅರಿತು ಎರಡನೇ ಮತವನ್ನು ಚಲಾಯಿಸದೇ ಇರಲು ನಿರ್ಧಾರ ಮಾಡುತ್ತಾರೆ. ಆದರೆ ಅಂಬೇಡ್ಕರ್ ಅದಕ್ಕೆ ಅವಕಾಶ ನೀಡಲಿಲ್ಲ. ಹೀಗಿತ್ತು ಬಾಬಾ ಸಾಹೇಬರ ಬದುಕು. ಅವರಿಗೆ ಸೋಲಿನ ಅಂಜಿಕೆ ಇರಲಿಲ್ಲ. 1946 ರ ಚುನಾವಣೆ ಸೋತಾಗ ಅವರು ಹೇಳಿದ ಮಾತು ಇನ್ನೂ ಹಸಿರಾಗಿದೆ “ನಾನು ಈ ಸೋಲಿನ ಮನಸ್ಥಿತಿಯನ್ನು ಹಂಚಿಕೊಳ್ಳುವುದಿಲ್ಲ. ಚುನಾವಣೆಯಲ್ಲಿ ಸ್ಥಾನಗಳನ್ನು ಗೆಲ್ಲುವುದು ಒಕ್ಕೂಟದ ಆದರ್ಶವಲ್ಲ. ಒಕ್ಕೂಟಕ್ಕೆ ಸ್ಥಾನಗಳನ್ನು ಗೆಲ್ಲುವುದು ಒಕ್ಕೂಟದ ಅಂತ್ಯಕ್ಕೆ ನಾಂದಿ ಹಾಡಲಿದೆ ಎಂದು ನನ್ನ ನಂಬಿಕೆ. ಅದು ಜನರಿಗೆ ಸೇವೆಗಾಗಿ ಸ್ಥಾಪಿತವಾಗಿರುವುದು, ಸಮಾಜದ ಅಭ್ಯುದಯವೇ ನಮ್ಮ ಒಕ್ಕೂಟದ ನಿಜವಾದ ಅಂತ್ಯ.” ಇದು ಅವರ ಮನಸ್ಥಿತಿ.
ಜಗತ್ತೇ ಹಾಗೆ ತನ್ನ ನಾಯಕನನ್ನು ಆರಿಸುವಾಗ ಯಾರೋ ಚಿನ್ನದ ಚಮಚೆ ಯ ಕೂಸನ್ನು ಆರಿಸುವುದಿಲ್ಲ. ನಮ್ಮಂತೆ ಬದುಕಿದ ನಮ್ಮೊಂದನೆ ನೊಂದ ನಮ್ಮಗಾಗಿ ನಲಿದ ಒಂದು ಚೇತನವನ್ನು ಸ್ಥಿತ ಪ್ರಜ್ಞೆಯಿಂದ ಅರಿಸುವರು. ಅದರೆ ಅಂದು ಹಾಗೆ ಆಗಲಿಲ್ಲ. ಸ್ವಾತಂತ್ರ್ಯದ ನಂತರ ಮೊದಲ ಸರ್ಕಾರ ಏನೋ ನಿರ್ಮಾಣವಾಗಿ ಕಾರ್ಯ ನಿರ್ವಹಿಸಿತು. ಆದರೆ ಶ್ಯಾಮ್ ಪ್ರಸಾದ್ ಮುಖರ್ಜಿ, ಜೆ ಪಿ ನಾರಾಯಣ್, ಬಾಬಾ ಸಾಹೇಬರ ಸೇರಿ ಹಲವರ ಅಭಿಪ್ರಾಯ ಬೇರೆಯದೇ ಆಗಿತ್ತು. ಅವರಿಗೆ ಈ ಬಲಿದಾನದ ಅರ್ಥ ಯಾರದೋ ಕುಟುಂಬದ ಅಡಿಯಾಳು ಆಗುವ ಸೂಚನೆ ಸಿಕ್ಕಿಬಿಟ್ಟಿತು. ಭಾರತದ ಮಣ್ಣಿನ ಗುಣವೇ ಹಾಗೆ. ಯಾವಾಗೆಲ್ಲ ನಾವು ನೊಂದು ದೇವರ ಕೂಗಿಟ್ಟೆವೋ ನಮಗಾಗಿ ಅವರು ಜನುಮ ಎತ್ತಿದ್ದಾರೆ. ಹಾಗಾದಾಗ ಅವರೆಲ್ಲರೂ ಸ್ವತಂತ್ರವಾಗಿ ತಮ್ಮ ಪಕ್ಷಗಳನ್ನು ಏನೋ ಕಟ್ಟಿಕೊಂಡರು. ಅದರೆ ಕಾಲ ಮಿಂಚಿ ಹೋಗಿತ್ತು. ಜನ ಜಿದ್ದಿಗೆ ಬಿದ್ದಂತೆ ಅನುಕಂಪದ ಅಲೆಗೆ ಓಗೊಟ್ಟು ಮತ ಚಲಾಯಿಸಿದರು. ಜನರಿಗೆ ಅಂದು ಅದು ಒಂದು ಪಕ್ಷವಾಗಿ ಕಂಡಿರಲಿಲ್ಲ. ಈ ದೇಶದ ಪಾರಮಾರ್ಥಿಕ ಪರಿಹಾರವಾಗಿ ಕಂಡಿತ್ತು. ಹಾಗಾಗಿ ಬಾಬಾ ಸಾಹೇಬರು ಚುನಾವಣೆಯಲ್ಲಿ ಸೋಲು ಕಂಡರು.

ವಿಚಿತ್ರ ನೋಡಿ, ಬಾಬಾ ಸಾಹೇಬರು 1954 ರಲ್ಲೇ ಹೇಳಿದರು ಇಂದಿಗೆ ಸವರ್ಣೀಯರು ಮತ್ತು ದಲಿತರ ನಡುವಿನ ಗೋಡೆ ಇಂದಿಗೆ ಮುರಿದು ಬಿತ್ತು ಎಂದು. ಹಾಗಾದರೆ ಅದರ ಮೇಲೂ ಆ ಗೋಡೆಯನ್ನು ಉಳಿಸಿದವರು ಯಾರು? ಉತ್ತರ ಎಲ್ಲರಿಗೂ ಗೊತ್ತು.

“Thespread and growth of the Caste system is too gigantic a task to be achieved by the power or cunning of an individual or of a class. Similar in argument is the theory that the Brahmins created the Caste. After what I have said regarding Manu, I need hardly say anything more, except to point out that it is incorrect in thought and malicious in intent. The Brahmins may have been guilty of many things, and I dare say they were, but the imposing of the caste system on the non-Brahmin population was beyond their mettle.”

” ಜಾತಿ ವ್ಯವಸ್ಥೆಯ ಹರಡುವಿಕೆ ಮತ್ತು ಬೆಳವಣಿಗೆಯು ಒಬ್ಬ ವ್ಯಕ್ತಿಯ ಅಥವಾ ವರ್ಗದ ಶಕ್ತಿ ಅಥವಾ ಕುತಂತ್ರದಿಂದ ಸಾಧಿಸಬೇಕಾದ ಕಾರ್ಯವು ತುಂಬಾ ದೈತ್ಯಾಕಾರದ ಕೆಲಸವಾಗಿದೆ. ವಾದದಲ್ಲಿ ಹೋಲುತ್ತದೆ ಬ್ರಾಹ್ಮಣರು ಜಾತಿಯನ್ನು ಸೃಷ್ಟಿಸಿದರು ಎಂಬ ಸಿದ್ಧಾಂತ. ಮನುವಿನ ಬಗ್ಗೆ ನಾನು ಹೇಳಿದ ನಂತರ, ಆಲೋಚನೆಯಲ್ಲಿ ತಪ್ಪಾಗಿದೆ ಮತ್ತು ಉದ್ದೇಶದಿಂದ ದುರುದ್ದೇಶಪೂರಿತವಾಗಿದೆ ಎಂದು ಸೂಚಿಸುವುದನ್ನು ಹೊರತುಪಡಿಸಿ, ನಾನು ಹೆಚ್ಚು ಏನನ್ನೂ ಹೇಳಬೇಕಾಗಿಲ್ಲ. ಬ್ರಾಹ್ಮಣರು ಅನೇಕ ವಿಷಯಗಳಲ್ಲಿ ತಪ್ಪಿತಸ್ಥರಾಗಿರಬಹುದು, ಮತ್ತು ಅವರು ಎಂದು ನಾನು ಹೇಳುತ್ತೇನೆ, ಆದರೆ ಬ್ರಾಹ್ಮಣೇತರ ಜನಸಂಖ್ಯೆಯ ಮೇಲೆ ಜಾತಿ ವ್ಯವಸ್ಥೆಯನ್ನು ಹೇರುವುದು ಅವರ ಸಾಮರ್ಥ್ಯವನ್ನು ಮೀರಿದೆ.” ಇದು ಭಾರತದಲ್ಲಿ ಇದ್ದ ಜಾತಿ ಪದ್ಧತಿ ಕುರಿತು ಬಾಬಾ ಸಾಹೇಬರ ಅಭಿಪ್ರಾಯ. ಮತ್ತು ಇನ್ನೊಂದು ಅಂಶವೆಂದರೆ ಸಂಸ್ಕೃತವನ್ನು ಭಾರತದ ರಾಷ್ಟ್ರೀಯ ಭಾಷೆ ಮಾಡುವ ಯೋಜನೆಯನ್ನು ಎಲ್ ಕೆ ಮೈತ್ರಾ ಅವರು ತಂದಾಗ ಅಂಬೇಡ್ಕರ್ ಅವರು ಅದನ್ನು ಬೆಂಬಲಿಸಿದ್ದರು. ಯಾರೋ ಯಾಕೆ ನೀವು ಬೇರೆ ಯಾವುದೇ ಧರ್ಮದ ಬದಲು ಬೌದ್ಧ ಧರ್ಮ ಆರಿಸಿಕೊಂಡದ್ದು ಎಂದಾಗ ಅವರ ಉತ್ತರ ಸರಳವಾಗಿತ್ತು ನನಗೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ತುಂಬಾ ನಂಬಿಕೆ ಹಾಗೂ ಗೌರವ. ನನ್ನ ದೇಶದ ಪರಂಪರೆಯ ಕಂಪು ಹೊತ್ತ ಯಾವುದೇ ಧರ್ಮವಿರಲಿ ನನಗೆ ಒಪ್ಪಿಗೆ. ಆದ್ದರಿಂದ ಸನಾತನ ಬೌದ್ಧ ಧರ್ಮ ಆರಿಸಿಕೊಂಡದ್ದು ಎಂದು.
ಇಷ್ಟೆಲ್ಲಾ ಹೇಳಿ ದತ್ತೋಪಂಥರ ಮತ್ತು ಅಂಬೇಡ್ಕರರ ಬಾಂಧವ್ಯದ ಕುರಿತು ಹೇಳದಿದ್ದರೆ ಹೇಗೆ? ಪರಿಶಿಷ್ಟ ಜಾತಿ ಒಕ್ಕೂಟದ ಕಾರ್ಯದರ್ಶಿಯಾಗಿ ಬ್ರಾಹ್ಮಣ ಸಮಾಜದ ಠೇಂಗಡಿಜೀಯವರ ಅಂಬೇಡ್ಕರ್ ಅವರು ನೇಮಿಸಿದರು. ಆಗ ಒಕ್ಕೂಟದ ಒಳಗೆ ಗುಸು ಗುಸು. ಮೊದಲೇ ಹಿಂದೂ ಧರ್ಮ ಮತ್ತು ದಲಿತರ ನಡುವೆ ಗೋಡೆ ಕಟ್ಟಲಾಗಿತ್ತು. ಅಂತಹುದರಲ್ಲಿ ಒಬ್ಬ ಬ್ರಾಹ್ಮಣನ ತಂದು ನಮ್ಮ ಒಕ್ಕೂಟದ ಪದವಿ ನೀಡುವುದೇ? ಯಾರೋ ಒಂದಿಷ್ಟು ಧೈರ್ಯ ಮಾಡಿ ಬಂದು ಕೇಳಿಯೇ ಬಿಟ್ಟರು. ಆಗ ಬಾಬಾ ಸಾಹೇಬರು ನೀಡಿದ ಉತ್ತರ ಅಮೋಘ; “ದತ್ತೋಪಂತರಿಗಿಂತ ಮಹಾನ್ ದಲಿತನ ನೀವು ತಂದು ನಿಲ್ಲಿಸಿದರೆ ನಾನು ಅವರಿಗೆ ಈ ಹುದ್ದೆ ನೀಡುತ್ತೇನೆ.” ಬಂದವರ ಬಾಯಿ ಕಟ್ಟಿ ಹೋಗಿತ್ತು. ಇದೊಂದೇ ಅಲ್ಲ, ಬಾಬಾ ಸಾಹೇಬರು ಎರಡನೇ ಬಾರಿ ಚುನಾವಣೆಗೆ ನಿಂತಾಗ ಬೆನ್ನಿಗೆ ನಿಂತು ಪ್ರಚಾರ ಮಾಡಿದವರು ದತ್ತೋಪಂಥರು. ಆಗ ಅಂಬೇಡ್ಕರ್ ಜೀ ಹೇಳಿದ ಮಾತು ಅದ್ಭುತ; ಸವರ್ಣೀಯರು ಮತ್ತು ದಲಿತರ ನಡುವಿನ ಗೋಡೆ ಇಂದಿಗೆ ಮುರಿದು ಬಿತ್ತು. ದತ್ತೋಪಂತರ ಪ್ರಭಾವದಿಂದ ತನ್ನ ಸಮುದಾಯದೊಂದಿಗೆ ಸಮಾಜದ ಅಭಿವೃದ್ಧಿಗೆ ಅಂಬೇಡ್ಕರ್ ತಮ್ಮ ಪ್ರಯತ್ನಗಳ ಮಾಡುತ್ತಿದ್ದರು ಎನ್ನಲಾಗಿದೆ. ಮೊದಲೇ ಹೇಳಿದಂತೆ ಭಾರತದ ಮೊದಲ ಚುನಾವಣೆ ಹೊತ್ತಿಗೆ ದತ್ತೋಪಂತರು, ಜೆಪಿ ನಾರಾಯಣ್, ಅಂಬೇಡ್ಕರ್, ಜೆ ಬಿ ಕೃಪಲಾನಿ, ರಾಮ್ ಮನೋಹರ್ ಲೋಹಿಯಾ ಸೇರಿದಂತ ಹಲವರಿಗೆ ಪ್ರಜಾಪ್ರಭುತ್ವದ ಬಂಡಿ ದಿಕ್ಕು ತಪ್ಪಿದೆ ಎಂದು ಅರಿವಾಗುತ್ತದೆ. ಚುನಾವಣೆಗೆ ತಮ್ಮದೇ ಆದಂತಹ ಪಕ್ಷಗಳ ಸ್ಥಾಪಿಸಿ ತನ್ಮೂಲಕ ಮತದಾನಕ್ಕೆ ಧುಮುಕಿದರು. ಅಂತಹ ಸಂದರ್ಭದ ಒಂದು ಘಟನೆ. ಭಾರತೀಯ ಜನ ಸಂಘ, ಪರಿಶಿಷ್ಟ ಜಾತಿ ಒಕ್ಕೂಟ ಮತ್ತು ಸಮಾಜವಾದಿ ಪಕ್ಷ ಸೇರಿ ಒಂದು ಮೈತ್ರಿ ಮಾಡಿಕೊಂಡು 1952 ರ ಚುನಾವಣೆ ಎದುರಿಸಿದವು. ಅದರೆ ವಿದರ್ಭದ ಕೆಲವು ಕ್ಷೇತ್ರಗಳಲ್ಲಿ ಮತಪೆಟ್ಟಿಗೆಗಳ ಬದಲಾಯಿಸುತ್ತಿರುವುದು ಗಮನಕ್ಕೆ ಬಂದು ಚುನಾವಣಾ ಆಯೋಗಕ್ಕೆ ದೂರು ಈ ಮೈತ್ರಿ ಪಕ್ಷಗಳು ದೂರು ನೀಡಿದವು. ವಿಷಯ ಬಾಬಾ ಸಾಹೇಬರ ತಲುಪುವುದು ಕೊಂಚ ತಡವಾದರೂ ಅವರು ಬಂದು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅನುವಾದರು. ಈ ಘಟನೆಯ ನಂತರ ಬಾಬಾ ಸಾಹೇಬರು ಮತ್ತು ದತ್ತೋಪಂತರ ನಡುವಿನ ಸಂಬಂಧ ಮತ್ತಷ್ಟು ಆಳವಾಯಿತು. ಬಹುಶಃ ಈ ಬಾಂಧವ್ಯದ ಕುರಿತು ಬೇರೆಲ್ಲೂ ಸಿಗದ ಮಾಹಿತಿ ಸ್ವತಃ ದತ್ತೋಪಂಥರೆ ಬರೆದ ಸಾಮಾಜಿಕ ಕ್ರಾಂತಿ ಸೂರ್ಯ (ಅನುವಾದಿತ) ಕೃತಿಯಲ್ಲಿ ಸಿಗುತ್ತದೆ.

1956 ರಲ್ಲಿ ಬೌದ್ಧಧರ್ಮದ ದೀಕ್ಷೆ ಪಡೆಯುವ ಕೆಲವು ದಿನಗಳ ಮೊದಲು, ದತ್ತೊಂಪಂಥರು ಬಾಬಾಸಾಹೇಬರೊಂದಿಗೆ ಬೌದ್ಧಧರ್ಮದ ಆಯ್ಕೆ ಬಗ್ಗೆ ಸುದೀರ್ಘ ಚರ್ಚೆಯನ್ನು ನಡೆಸಿದರು. ಆ ಹೊತ್ತಿಗೆ ಅಂತಹ ಸ್ವಾತಂತ್ರ್ಯ ಇದ್ದುದು ದತ್ತೋಪಂಥರಿಗೆ ಮಾತ್ರ ಅನ್ನಿಸುತ್ತದೆ. “ಅವರ ದೀಕ್ಷೆಗೆ ಕೆಲವು ದಿನಗಳ ಮೊದಲು ನಾನು ಅವರಿಗೆ ಹೇಳಿದ್ದೇನೆಂದರೆ ‘ಹಳೆಯ ದಿನಗಳಲ್ಲಿ ಕೆಲವು ದೌರ್ಜನ್ಯಗಳು ನಡೆದಿವೆ, ನಿಮ್ಮ ಪ್ರಕಾರ ನಮ್ಮಂತಹ ಕೆಲ ಯುವಕರು ಹೊಸ ಸಾಮಾಜಿಕ ಹಾದಿ ಆರಿಸಿಕೊಳ್ಳುವ ಮೂಲಕ ಹಳೆಯ ತಪ್ಪುಗಳ ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲವೇ?’ ಬಾಬಾಸಾಹೇಬ್, ‘ನಿಮ್ಮ ಮಾತಿನ ಅರ್ಥ ಆರ್ಎಸ್ಎಸ್?’ ಏಕೆಂದರೆ ನಾನು ಆರ್‌ಎಸ್‌ಎಸ್ ಪ್ರಚಾರಕ ಎಂದು ಅವರಿಗೆ ತಿಳಿದಿತ್ತು. ಅವರು, ‘ನಾನು ಇದನ್ನು ಯೋಚಿಸಿಲ್ಲ ಎಂದು ನೀವು ಭಾವಿಸುತ್ತೀರಾ?’ ನಾನು, ‘ನಾನು ಅದನ್ನು ಹೇಗೆ ಹೇಳಬಲ್ಲೆ? ನೀವು ಅದರ ಬಗ್ಗೆ ಯೋಚಿಸಿರಬೇಕು. ‘ ನಂತರ ಅವರು ಕೇಳಿದರು ‘ಸಂಘ ಯಾವಾಗ ರೂಪುಗೊಂಡಿತು? ಎಷ್ಟು ವರ್ಷಗಳು ಕಳೆದಿವೆ? ‘ ನಾನು, ‘ಸಂಘವು 1925 ರಲ್ಲಿ ರೂಪುಗೊಂಡಿತು. ಈಗ 27-28 ವರ್ಷಗಳು ಕಳೆದಿವೆ.’ ಅವರು, ‘ನನಗೆ ಅದು ತಿಳಿದಿದೆ. ಆದರೆ ಒಂದು ವಿಷಯ, ನಿಮ್ಮ ಒಟ್ಟು ಸದಸ್ಯರ ಸಂಖ್ಯೆ? ‘ ನಾನು ‘ಈ ಕ್ಷಣದಲ್ಲಿ ಹೇಳಲು ಸಾಧ್ಯವಿಲ್ಲ’ ಎಂದೆ. ಅವರು, ‘ಪತ್ರಿಕಾಗೋಷ್ಠಿಯಂತೆ ಉತ್ತರಿಸಬೇಡಿ. ಸರಿಯಾಗಿ ಯೋಚಿಸಿ ಹೇಳಿ.’ ‘ನನಗೆ ನಿಜವಾಗಿಯೂ ಗೊತ್ತಿಲ್ಲ’ ಎಂದು ನಾನು ಮತ್ತೆ ಹೇಳಿದೆ. ಆಗ ಅವರು, ‘ನಿಮ್ಮ ಸಂಖ್ಯೆ ಸುಮಾರು 27-28 ಲಕ್ಷ ಎಂದು ಭಾವಿಸೋಣ. ಅಂದರೆ ಇವರನ್ನು ನಿಮ್ಮೊಂದಿಗೆ ಕರೆತರಲು ನೀವು 27-28 ವರ್ಷಗಳನ್ನು ತೆಗೆದುಕೊಂಡಿದ್ದೀರಿ. ಇಡೀ ಸಮಾಜವನ್ನು ಒಂದುಗೂಡಿಸಲು ನೀವು ಎಷ್ಟು ಸಮಯ ತೆಗೆದುಕೊಳ್ಳುತ್ತೀರಿ?’ ನನಗೆ ಏನೂ ಹೇಳಲು ಅವಕಾಶ ಕೊಡದೆ ಅವರು ಮುಂದುವರಿಸಿದರು, ‘ಏನನ್ನೂ ಹೇಳಬೇಡಿ. ಅಂಕಗಣಿತ ಮತ್ತು ಜ್ಯಾಮಿತೀಯ ಬೆಳವಣಿಗೆಗಳು ಒಟ್ಟಿಗೆ ನಡೆಯುವುದಿಲ್ಲ ಎಂದು ನನಗೆ ತಿಳಿದಿದೆ. ಇದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ಪರಿಸ್ಥಿತಿ ಕಾಯುತ್ತದೆಯೇ? ಇಲ್ಲ. ಮತ್ತು ನಾನು ಮೌನವಾಗಿ ಕುಳಿತುಕೊಳ್ಳಬೇಕು. ನನ್ನ ಮುಂದಿರುವ ಪ್ರಶ್ನೆ ಏನೆಂದರೆ, ನಾನು ಸಾಯುವ ಮುನ್ನ ಸಮಾಜಕ್ಕೆ ನಿರ್ದೇಶನ ನೀಡಬೇಕು; ಏಕೆಂದರೆ ಈ ಸಮಾಜವು ಇಲ್ಲಿಯವರೆಗೆ ಶೋಷಣೆಗೆ ಬಲಿಯಾಗಿದೆ. ಜನರಲ್ಲಿ ಜಾಗೃತಿ ಇದೆ ಮತ್ತು ಅವರ ಮನಸ್ಸಿನಲ್ಲಿ ಸ್ವಲ್ಪ ದುಃಖ ಮತ್ತು ಕಿರಿಕಿರಿ ಇರುವುದು ಸಹಜ; ಮತ್ತು ಅಂತಹ ಸಮಾಜವು ಕಮ್ಯುನಿಸಂಗೆ ವೇಗವಾಗಿ ಬಲಿಯಾಗುತ್ತದೆ. ಇದು ಕಮ್ಯುನಿಸಂನ ಗುಂಡಿಗೆ ಸುಲಭ ತುತ್ತು. ಪರಿಶಿಷ್ಟ ಜಾತಿ ಸಮಾಜವು ಕಮ್ಯುನಿಸಂನ ಈಡಾಗಬೇಕೆಂದು ನಾನು ಬಯಸುವುದಿಲ್ಲ. ಆದ್ದರಿಂದ ಅವರಿಗೆ ನಿರ್ದೇಶನ ನೀಡುವುದು ರಾಷ್ಟ್ರೀಯ ಹಿತಾಸಕ್ತಿಯಾಗಿದೆ. ನೀವು ಸಂಘದವರು ರಾಷ್ಟ್ರೀಯ ದೃಷ್ಟಿಕೋನದಿಂದ ಕೆಲಸ ಮಾಡುತ್ತಿದ್ದೀರಿ. ಆದರೆ ಪರಿಶಿಷ್ಟ ಜಾತಿ ಮತ್ತು ಕಮ್ಯುನಿಸಂ ನಡುವೆ ನಾನು ಅಂಬೇಡ್ಕರ್ ತಡೆಗೋಡೆ ಹಾಗೂ ಜಾತಿ ಹಿಂದೂಗಳು ಮತ್ತು ಕಮ್ಯುನಿಸಂ ನಡುವೆ ಗೋಲ್ವಾಲ್ಕರ್ ತಡೆಗೋಡೆ ಎಂಬುದನ್ನು ನೆನಪಿನಲ್ಲಿಡಿ. ಇದು ಸರಿಯಲ್ಲವೇ’ ಎಂದು ಕೇಳಿದರು. ‘ಅದಕ್ಕಾಗಿಯೇ ನಾನು ಅವರಿಗೆ ನಿರ್ದೇಶನ ನೀಡಲು ವಿಫಲವಾದರೆ, ಸಮಾಜದ ಒಂದು ದೊಡ್ಡ ಭಾಗವು ಕಮ್ಯುನಿಸಂ ಕಡೆಗೆ ಆಕರ್ಷಿಸುತ್ತದೆ. ನಂತರ ಅವರನ್ನು ಮತ್ತೆ ರಾಷ್ಟ್ರೀಯ ಮುಖ್ಯವಾಹಿನಿಗೆ ತರುವುದು ನಿಮಗೆ ಸುಲಭವಲ್ಲ; ಏಕೆಂದರೆ ಪ್ರಶ್ನೆ ನೀವು ಹೇಳುತ್ತಿರುವುದು ಸರಿಯಲ್ಲ ಅಥವಾ ಇಲ್ಲ. ನೀವೆಲ್ಲರೂ ಮೇಲ್ಜಾತಿಯ ಜನರು, ನಮ್ಮ ಸಮಾಜವು ನಿಮ್ಮ ಮಾತನ್ನು ಕೇಳುವುದಿಲ್ಲ. ಅದಕ್ಕಾಗಿಯೇ ನಾನು ಸಾಯುವ ಮುನ್ನ ಈ ವ್ಯವಸ್ಥೆಯನ್ನು ಮಾಡಿದ್ದೇನೆ’ ಎಂದರು.”
ಬೌದ್ಧ ಧರ್ಮದ ಕಡೆ ಆಸಕ್ತಿ ಹೊಂದಿದ್ದ ಬಾಬಾ ಸಾಹೇಬರ ಮನವೊಲಿಸಿ ಆರ್ ಎಸ್ ಎಸ್ ಕೂಡ ಒಂದು ಆಯ್ಕೆ ಎಂದು ಹೇಳುವ ಪ್ರಯತ್ನ ದತ್ತೋಪಂತರದ್ದಾಗಿತ್ತು. ಆದರೆ ಆರೆಸಸ್ ಜನರ ತಲುಪುವ ಹೊತ್ತಿಗೆ ಬ್ರಾಹ್ಮಣಿಕೆಯ ಹೆಸರು ಹೇಳಿ ಕಮ್ಯುನಿಸಂ ಬಹಳ ವೇಗವಾಗಿ ಹಿಂದುಳಿದ ವರ್ಗಗಳ ಮುತ್ತಿಬಿಡುತ್ತದೆ. ಅದರಿಂದ ಮತ್ತೆ ಸಮುದಾಯದ ಜನರ ಮತ್ತೆ ಮುನ್ನೆಲೆಗೆ ತರಲು ಕಷ್ಟ ಆಗುತ್ತದೆ ಎಂಬುದು ಬಾಬಾ ಸಾಹೇಬರ ನಂಬಿಕೆ ಆಗಿತ್ತು. ಸಂಘದ ಬೆಳೆಯುವ ವೇಗ ಕಡಿಮೆ ಎಂಬುದು ಅಂಬೇಡ್ಕರ್ ಅಭಿಪ್ರಾಯ ಆಗಿತ್ತು ಮತ್ತು ಇದನ್ನು ಮೋರೋಪಂತ್ ಜೀ ಅವರೊಂದಿಗೆ ಹೇಳಿದ್ದರು ಕೂಡ. ಕಮ್ಯುನಿಸಂ ಹಾಗೂ ಶೋಷಿತರ ನಡುವೆ ತಾವು ತಡೆಗೋಡೆಯಾಗಿ ನಿಲ್ಲಬೇಕು ಮತ್ತು ಭಾರತೀಯತೆ ಮೆರೆಯಬೇಕು ಎಂಬುದು ಅವರ ಆಶಯ ಆಗಿತ್ತು. ಭಾರತೀಯ ಸಂಸ್ಕೃತಿ ಬಗ್ಗೆ ಅಂಬೇಡ್ಕರ್ ಅವರು ಗರ್ವದಿಂದ ಹೇಳಿದ ಮಾತು ನಮ್ಮ ಪದ್ಧತಿಗಳಲ್ಲಿ ನ್ಯೂನತೆ ಇರಬಹುದು ಆದರೆ ಅದನ್ನು ಯಾವಾಗಲೂ ಸರಿ ಪಡಿಸುತ್ತಲೆ ಬರುತ್ತಿದ್ದೇವೆ ಮತ್ತು ಮುಂದೆಯೂ ಇದೇರೀತಿ ಮರುನಿರ್ಮಾಣ ಕಾರ್ಯ ನಡೆಯುತ್ತಲೇ ಇರುತ್ತದೆ. ಹಾಗಾಗಿ ಈ ಪರಂಪರೆ ಇಂದಿಗೂ ಅನಂತವಾಗಿ ಮುಂದುವರಿದಿದೆ ಎಂದು. ಅನ್ಯ ವಿದೇಶಿ ಧರ್ಮಗಳಲ್ಲಿ ತಮ್ಮ ತಪ್ಪುಗಳ ಅವರು ಒಪ್ಪಿಕೊಳ್ಳಲು ತಯಾರಿಲ್ಲ ಇನ್ನು ಸರಿ ಪಡಿಸಿಕೊಳ್ಳುವುದು ದೂರದ ಮಾತು ಎನ್ನುವುದು ಅವರ ಅಭಿಪ್ರಾಯ ಆಗಿತ್ತು. ಬಾಬಾ ಸಾಹೇಬರು ಬಗ್ಗೆ ಮತ್ತೊಂದು ಗಮನಾರ್ಹ ವಿಚಾರ ಅವರು ಅಂದೇ ಧರ್ಮಾಧಾರಿತ ದೇಶ ವಿಗಂಡನೆಗೆ ಒಪ್ಪಿದ್ದರು. ಮತ್ತು ಅಂತಹ ಒಂದು ಕಾರ್ಯ ನಡೆಯದೇ ಇದ್ದರೆ ಮುಂದೆ ಆಗುವ ಅನಾಹುತಗಳ ಬಗ್ಗೆ ಅವರು ಅರಿತಿದ್ದರು.
ದತ್ತೋಪಂತರೇ ಹೇಳುವಂತೆ 1935ರಲ್ಲಿ ಅನ್ಯ ಧರ್ಮಕ್ಕೆ ಹೊರಳುವ ನಿರ್ಧಾರ ಕೈಗೊಂಡರೂ 1956 ರಲ್ಲಿ ಅವರು ದೀಕ್ಷೆ ತೆಗೆದುಕೊಂಡಿದ್ದು. ಈ 21-22 ವರ್ಷಗಳು ಅವರು ಸಮಾಜವನ್ನು ತಿದ್ದುವ ಕೆಲಸವನ್ನು ಬಹಳವಾಗಿ ಮಾಡಿದರು. ಇನ್ನೇನು ಜೀವನದ ಅಂತ್ಯ ಕಾಲದಲ್ಲಿ ಅವರು ಬೌದ್ಧ ಧರ್ಮಕ್ಕೆ ಹೊರಳಿದರು. ಇದು ಒಂದು ಗಮನಿಸಲೇಬೇಕಾದ ಅಂಶ.

ಇನ್ನು ಸಂಘದ ವಿಚಾರಕ್ಕೆ ಬರುವುದಾದರೆ 1935 ರಿಂದ ಹಿಡಿದು ಮುಂದಿನ ಹಲವು ವರ್ಷಗಳ ತನಕ ಹಲವಾರು ಬಾರಿ ಅವರು ಸಂಘದ ಚರ್ಚೆಗಳಲ್ಲಿ ಭಾಗವಹಿಸಿದರು. ಅಲ್ಲದೆ ಮಹಾತ್ಮ ಗಾಂಧಿ ಹತ್ಯೆ ನಂತರ ಸಂಘದ ಮೇಲೆ ವಿನಾಕಾರಣ ಹೇರಲಾಗಿದ್ದ ನಿಷೇಧವನ್ನು ತೆರವು ಮಾಡಲು ಅಂಬೇಡ್ಕರ್ ಪ್ರಯತ್ನವೂ ಇತ್ತು.
ಅಂಬೇಡ್ಕರ್ ಜೀವನದಲ್ಲಿ ಮತ್ತೆ ಮತ್ತೆ ನೆನಪಾಗುವ ಸಾಲುಗಳು ದಲಿತರಲ್ಲಿ ಕಾಣಿಸಿಕೊಳ್ಳುತ್ತಿರುವ ಜಾಗೃತಿ, ಒಂದಿಷ್ಟು ಕೋಪ, ಆವೇಶಗಳು ಸುಲಭದಲ್ಲಿ ಕಮ್ಯುನಿಸಂನ ತೋಪಿಗೆ ಸಿಡಿಮದ್ದಾಗುತ್ತದೆ ಎಂಬ ಅರಿವಿನಿಂದ ನನ್ನ ಶೆಡ್ಯುಲ್ಡ್‌ ಕ್ಯಾಸ್ಟ್‌ ಸಮಾಜ ಕಮ್ಯುನಿಸಂಗೆ ತುತ್ತಾಗುವುದು ನನಗಿಷ್ಟವಿಲ್ಲ. ಹೀಗಾಗಿ ಅದಕ್ಕೊಂದು ದಾರಿ ತೋರಿಸಬೇಕಾದುದು ರಾಷ್ಟ್ರದ ಹಿತದೃಷ್ಟಿಯಿಂದ ಅಗತ್ಯವೆನಿಸಿದೆ. ಸಮಾಜ ಕಮ್ಯುನಿಸಂ ಕಡೆಗೆ ತಿರುಗಿದಲ್ಲಿ ಅವರನ್ನು ಮುಂದೆ ಪುನಃ ರಾಷ್ಟ್ರೀಯ ಪ್ರವಾಹದಲ್ಲಿ ಸೇರಿಸುವುದು ಸಾಧ್ಯವಾಗದು. ಪರಿಶಿಷ್ಟ ವರ್ಗದವರು ಮತ್ತು ಕಮ್ಯುನಿಸಂ ನಡುವೆ ಅಂಬೇಡ್ಕರ್‌ ಅಡ್ಡಗೋಡೆ ಎಂದಿದ್ದರು(ಸಾಮಾಜಿಕ ಕ್ರಾಂತಿ ಸೂರ್ಯ: ಡಾ. ಅಂಬೇಡ್ಕರ್‌, ದತ್ತೋಪಂಥ ಠೇಂಗಡಿ). ಹೀಗಿದ್ದ ಅವರ ವೈಚಾರಕತೆ ಮುಂದೆ ಅವರ ನಂತರ ಬೇರೆ ಹಾದಿ ಹಿಡಿಯಿತು. ಅವರು ಏನನ್ನೂ ಬಯಸದೆ ಇದ್ದರೋ ಅದೇ ಆಯಿತು. ಪಾಕಿಸ್ತಾನ್ ಆರ್ ಪಾರ್ಟಿಶನ್ ಆಫ್ ಇಂಡಿಯಾ, ಸಾಮಾಜಿಕ ಕ್ರಾಂತಿ ಸೂರ್ಯ, ಮುಚ್ಚಿಟ್ಟ ದಲಿತ ಚರಿತ್ರೆ ಇನ್ನೂ ಮುಂತಾದ ಕೃತಿಗಳು ನಮಗೆ ನೈಜ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತವೆ. ನಮ್ಮ ಸೋ ಕಾಲ್ಡ್ ಇತಿಹಾಸಕಾರರು ಚೆರ್ರಿ ಪಿಕ್ಕಿಂಗ್ ಮಾಡುವ ಮೂಲಕ ಅಂಬೇಡ್ಕರ್ ಜೀವನದ ಮೊದಲರ್ಧ ಮಾತ್ರವನ್ನು ಹೇಳಿ ಉಳಿದ್ದಿದ್ದು ಹೇಳಲೇ ಇಲ್ಲ. ಇಂದು ಅವರ ಜನುಮ ದಿನ. ಒಬ್ಬ ಮಹಾನ್ ಚೇತನ ಇನ್ನಿಲ್ಲದಂತೆ ಒಂದು ಸಮಾಜ ಕಟ್ಟಲು ದುಡಿದ. ಆ ವ್ಯಕ್ತಿಯ ಅನಂತ ಶ್ರಮದ ಫಲವಾಗಿ ಪ್ರಜಾಪ್ರಭುತ್ವದ ಅನ್ವರ್ಥವಾಗಿ ಭಾರತ ಬೆಳೆದು ನಿಂತಿದೆ. ಕಲಿಯುಗದ ಭಾರತದ ಸಾಕ್ಷಾತ್ ಭೀಮನಾಗಿಯೇ ಅವರ ಜೀವನ ಉನ್ನತ ರೀತಿಯಲ್ಲಿ ಸಾಗಿತು. ಅವರ ಬದುಕು ಇಂದಿಗೂ ಸ್ತುತ್ಯಾರ್ಹ. ಜೈ ಬಾಬಾ ಸಾಹೇಬ್ ಅಂಬೇಡ್ಕರ್.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Article by Sachin ParshwanathArticle for Ambedkar JayanthiConstitutionElectionKannada News WebsiteLatest News Kannadaಅಂಬೇಡ್ಕರ್ಚುನಾವಣೆಸಂವಿಧಾನ
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕೊರೋನಾ 2ನೆಯ ಅಲೆ: ಶಿವಮೊಗ್ಗದಲ್ಲಿ 100ರ ಗಡಿ ದಾಟಿದ ಪಾಸಿಟಿವ್ ಸಂಖ್ಯೆ

Next Post

ಕೊಟ್ಟಿಗೆಯ ಅಟ್ಟದಲ್ಲಿದ್ದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಕಿರಣ್…

kalpa News

kalpa News

Next Post
ಕೊಟ್ಟಿಗೆಯ ಅಟ್ಟದಲ್ಲಿದ್ದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಕಿರಣ್…

ಕೊಟ್ಟಿಗೆಯ ಅಟ್ಟದಲ್ಲಿದ್ದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಕಿರಣ್...

Leave a Reply Cancel reply

Your email address will not be published. Required fields are marked *

No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL