ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಸಿಲಿಕಾನ್‌ಸಿಟಿಯಲ್ಲಿ ನಿನ್ನೆ ಸಂಜೆ ಮಳೆಯ ಆರ್ಭಜ ಜೋರಾಗಿತ್ತು.

ಸಂಜೆ 6 ಗಂಟೆಗೆ ಆರಂಭವಾದ ಮಳೆ ಸತತ ಎರಡುವರೆ ಗಂಟೆಗಳ ಕಾಲ ಬಿಡದೆ ಸುರಿದ ಪರಿಣಾಮ ಕೆಲಸ ಮುಗಿಸಿ ಮನೆಗೆ ತೆರಳುವ ತವಕದಲ್ಲಿದ್ದ ಸಾರ್ವಜನಿಕರು ಮಳೆಯ ಅಬ್ಬರಕ್ಕೆ ತತ್ತರಿಸಿ ಹೋದರು.

ನಗರದ ರಾಜ ರಾಜೇಶ್ವರಿ ಕಮಾನು ಮುಂಭಾಗದ ರಸ್ತೆಯ ಮೇಲೆ ಮೋರಿ ನೀರು ಉಕ್ಕಿ ಹರಿದ ಪರಿಣಾಮ ಜನ ಜೀವನ ಅಸ್ತವ್ಯಸ್ತಗೊಂಡಿತು. ರಾಜಧಾನಿಯ ಮೈಸೂರು ರಸ್ತೆ, ನ್ಯಾಯಾಂಡ ಹಳ್ಳಿ, ಹೊಸ ಕೆರೆಹಳ್ಳಿ, ಜನತಾ ಬಜಾರ್, ಕತ್ರಿಗುಪ್ಪೆ, ಕಾಮಾಕ್ಯ, ಇಟ್ಟಮಡು, ಗುರುದತ್ತ ಬಡಾವಣೆ ಹಾಗೂ ಟಿ.ಜಿ.ಲೇಔಟ್ ಮತ್ತು ದತ್ತಾತ್ರೇಯ ದೇವಾಲಯಕ್ಕೆ ಹೋಗುವ ಮಾರ್ಗದ ಪ್ರಮುಖ ರಸ್ತೆಯಲ್ಲಿನ ಅಂಗಡಿಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















