ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ನಗರದ ಹಲವು ಭಾಗಗಳಲ್ಲಿ ಆಹಾರದ ಅವಶ್ಯಕತೆ ಇರುವವರಿಗೆ “ಹಸಿದವರಿಗೆ ಅನ್ನ” ಎಂಬ ಕಾರ್ಯಕ್ರಮದಡಿ ಜನತಾ ಕರ್ಫ್ಯೂನ ೮ನೆಯ ದಿನ ಊಟದ ಪ್ಯಾಕೆಟ್ ಹಾಗೂ ನೀರಿನ ಬಾಟಲ್ ಗಳನ್ನು ಖಾಸಗಿ ಬಸ್ ನಿಲ್ದಾಣ , ರೈಲ್ವೆ ನಿಲ್ದಾಣ, ಮೆಗ್ಗಾನ್ ಆಸ್ಪತ್ರೆ, ಕೋಟೆ ರಸ್ತೆ ಹಾಗೂ ಹಲವು ಖಾಸಗಿ ಆಸ್ಪತ್ರೆಗಳ ಮುಂಭಾಗ ಆಹಾರದ ಅವಶ್ಯಕತೆ ಇರುವ ರೋಗಿಗಳ ಸಂಬಂಧಿಗಳಿಗೆ ಮಹಾನಗರ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಅವರ ನೇತೃತ್ವದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್‌ನ ಅಧ್ಯಕ್ಷ ಎಚ್.ಪಿ.ಗಿರೀಶ್, ಯುವ ಕಾಂಗ್ರೆಸ್‌ನ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಈ.ಟಿ ನಿತಿನ್, ಎಸ್. ಕುಮಾರೇಶ್, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ವೆಂಕಟೇಶ್ ಕಲ್ಲೂರ್, ಸುವಾಸ್, ನಿತೀಶ್, ಕ್ಲೇಮೆಂಟ್ ಇತರರು ಇದ್ದರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post