ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲೆಯ ಕೋವಿಡ್ ಪೀಡಿತ ಕುಟುಂಬಗಳ ಮಕ್ಕಳಿಗೆ ಆಪ್ತ ಸಮಾಲೋಚನೆ ನಡೆಸಲು ಮಕ್ಕಳ ಟೆಲಿಕೌನ್ಸಿಲಿಂಗ್ ಸೌಲಭ್ಯ ಆರಂಭಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಿ.ಜಿ.ಸುರೇಶ್ ತಿಳಿಸಿದ್ದಾರೆ.
ಮಕ್ಕಳ ಟೆಲಿಕೌನ್ಸಿಲಿಂಗ್ ಟೋಲ್ ಫ್ರೀ ಸಂಖ್ಯೆ 14499 ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಕಾರ್ಯ ನಿರ್ವಹಿಸಲಿದ್ದು, ಇದರ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಇದಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾದ, ಪರಿತ್ಯಕ್ತ, ದೌರ್ಜನ್ಯಕ್ಕೆ ಒಳಗಾದ ಮತ್ತು ಕುಟುಂಬದಿಂದ ಬೇರ್ಪಟ್ಟ ಮಕ್ಕಳ ನೆರವಿಗಾಗಿ ಆಪ್ತ ಸಮಾಲೋಚನೆ ನಡೆಸಲು ಸೌಲಭ್ಯ ಕಲ್ಪಿಸಲಾಗಿದೆ. ಇದಕ್ಕಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು 080-4718117, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಶಿವಮೊಗ್ಗ 08182-295709, ಗಾಯತ್ರಿ ಡಿ.ಎಸ್ ರಕ್ಷಣಾಧಿಕಾರಿ 9945164983, ಗಣೇಶ್ ಹೆಚ್ ರಕ್ಷಣಾಧಿಕಾರಿ 7760802707, ಪರೀಕ್ಷಿತ್ ಆಪ್ತ ಸಮಾಲೋಚಕರು 8310605988 ಕರೆ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post