ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಮಕ್ಕಳೊಂದಿಗೆ ಜಗಳವಾಡಿ ಅವರನ್ನು ರೂಮಿನಲ್ಲಿ ಕೂಡಿಹಾಕಿ ತಾಯಿ ನೇಣಿಗೆ ಶರಣಾಗಿರುವ ಘಟನೆ ಇಂದು ಬೆಳಗ್ಗೆ ಶಾಂತಿನಗರದಲ್ಲಿ (ರಾಗಿಗುಡ್ಡ) ನಡೆದಿದೆ.

ಅಲ್ಲಿನ ಶನೇಶ್ಚರ ದೇವಾಲಯ ಬಳಿಯ ಮನೆಯಲ್ಲಿ ವಾಸವಾಗಿದ್ದ ನಿರ್ಮಲ ಎಂಬ 39 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ನಿರ್ಮಲ ಅಶೋಕ ಸಂಜೀವಿನಿಲ್ಲಿ ಕೆಲಸ ಮಾಡುತ್ತಾ ಇಬ್ಬರು ಮಕ್ಕಳನ್ನು ಸಾಕುತ್ತಿದ್ದರೆನ್ನಲಾಗಿದೆ. ಪತಿಯ ಬಗ್ಗೆ ನಿಖರ ಮಾಹಿತಿ ಇಲ್ಲ.

9ನೇ ತರಗತಿಯ ಮಗಳು ಹಾಗೂ 7ನೇ ತರಗತಿಯ ಮಗನನ್ನು ಹೊಂದಿದ್ದ ನಿರ್ಮಲ ಇಂದು ಬೆಳಗ್ಗೆ ಮನೆಯಲ್ಲಿ ಮಕ್ಕಳೊಂದಿಗೆ ಯಾವುದೋ ವಿಚಾರಕ್ಕೆ ಜಗಳಮಾಡಿದ್ದರೆನ್ನಲಾಗಿದೆ. ನಂತರ ಆ ಮಕ್ಕಳನ್ನು ರೂಮಿನಲ್ಲಿ ಕೂಡಿಹಾಕಿ ನಡುಮನೆಯ ಫ್ಯಾನಿಗೆ ಹಗ್ಗದಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿರ್ಲಕ್ಷ್ಯದ ಗ್ರಾಮಾಂತರ ಪಿಎಸ್‌ಐ
ಬೆಳಗ್ಗೆ 9ಗಂಟೆಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ವರದಿ ಬೆಳಕಿಗೆ ಬಂದಾಗ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಂದಿದ್ದಾರೆ. ಆದರೆ ನೇಣಿಗೆ ಶರಣಾಗಿರುವ ದೇಹವನ್ನು ಇಳಿಸಲು ಆಗಮಿಸಬೇಕಾಗಿದ್ದ ಗ್ರಾಮಾಂತರ ಪಿಎಸ್‌ಐ ಮದ್ಯಾಹ್ನ 12ಗಂಟೆಯಾದರೂ ಬಂದೇ..ಬಂದೇ ಎನ್ನುತ್ತಲೇ ಸಮಯ ದೂಡುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















