ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಸಹ ಮುಖ್ಯಮಂತ್ರಿ ಆಗಿದ್ದವರು ಹೀಗೆ ಮಾತನಾಡೋದು ಸರಿಯಲ್ಲ ಎಂದು ಸಚಿವ ಈಶ್ವರಪ್ಪ ಅವರು, ದುಡ್ಡು ಪ್ರಿಂಟ್ ಹಾಕ್ತೀವ ಎಂಬ ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದ್ದಾರೆ.
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ, ಒಬ್ಬೊಬ್ಬರಿಗೆ ಹತ್ತು ಸಾವಿರ ಕೊಡಿ ಎಂದು ಸಿದ್ಧರಾಮ್ಯನವರ ಹೇಳಿಕೆಗೆ ನಾವೇನು ದುಡ್ಡು ಪ್ರಿಂಟ್ ಹಾಕ್ತೀವ ಎಂದು ಪ್ರತಿಕ್ರಿಯೆ ನೀಡಿದ್ದರು.
ವಿರೋಧ ಪಕ್ಷದವರು ಅಂದ ತಕ್ಷಣ ಏನು ಬೇಕಾದರೂ ಮಾತನಾಡಬಹುದು ಎಂದಲ್ಲ. ಒಬ್ಬೊಬ್ಬರಿಗೆ ಹತ್ತು ಸಾವಿರ ಕೊಡಿ ಅಂತಾರೆ. ಅದು ಹೇಗೆ ಸಾಧ್ಯವಾಗತ್ತದೆ. ಸುಮ್ಮನೆ ಮಾತನಾಡಬಾರದು, ಸಿದ್ದರಾಮಯ್ಯ ಸಹ ಮುಖ್ಯಮಂತ್ರಿಯಾದವರು. ಹೀಗೆ ಮಾತನಾಡೋದು ಸರಿಯಲ್ಲ. ಇದಕ್ಕಾಗಿ ನಾನು ನೋಟ್ ಪ್ರಿಂಟ್ ಮಾಡಲ್ಲ ಅಂತ ಹೇಳಿದ್ದೇನೆ ಎಂದು ಸಮರ್ಥನೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post