ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ರಾಜ್ಯದಲ್ಲಿ ಎಲ್ಲ ರಂಗದಲ್ಲೂ ವಿಫಲವಾಗಿರುವ ಬಿಜೆಪಿ ಸರ್ಕಾರ ಕೊರೋನಾ ವೈರಸ್’ಗಿಂತಲೂ ಅಪಾಯಕಾರಿ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ. ಗಿರೀಶ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಚಿವರಾದ ಕೆ.ಎಸ್. ಈಶ್ವರಪ್ಪನವರು ನಿನ್ನೆ ದಿನ ಕೊಟ್ಟಂತಹ ಹೇಳಿಕೆಯು ಬಾಲಿಶ ಹೇಳಿಕೆ ಆಗಿದೆ. ಈಶ್ವರಪ್ಪ ರವರು ಹೇಳಿದ್ದು ಸತ್ಯ ಇವರ ಬಳಿ ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಲ್ಲ. ಆದರೆ ಪ್ರಿಂಟಾದ ನೋಟುಗಳನ್ನು ಎಣಿಸುವ ಮಿಷನನ್ನು ತಮ್ಮ ಮನೆಯಲ್ಲಿ ಇಟ್ಟು ಕೊಂಡಿದ್ದಾರೆ ಎಂದು ದೂರಿದರು.
ರಾಜ್ಯದ ಜನ ಹಾಗೂ ವಿರೋಧಪಕ್ಷಗಳು ಸಂವಿಧಾನವಾಗಿ ತಾವು ಕಟ್ಟಿದಂತಹ ತೆರಿಗೆ ಹಣವನ್ನು ಪರಿಹಾರ ಕೇಳುವುದು ತಪ್ಪೇ. ಈಗಾಗಲೇ ದೇಶದಲ್ಲಿ ರಾಷ್ಟ್ರೀಯ ವಿಪತ್ತು ಪರಿಸ್ಥಿತಿ ಉಂಟಾಗಿದ್ದು ಸರ್ಕಾರದ ಸಚಿವರು, ಶಾಸಕರುಗಳು ಸಂಸದರುಗಳು ಬಾಲಿಶತನದ ಹೇಳಿಕೆಗಳನ್ನು ನೀಡುತ್ತಾ ಅವೈಜ್ಞಾನಿಕ ನಿಯಮದಂತೆ ಲಾಕ್ ಡೌನ್ ಮಾಡುತ್ತಾ ಶ್ರೀಸಾಮಾನ್ಯನ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಟೀಕಿಸಿದ್ದಾರೆ.
ರಾಜ್ಯದ ಗೆದ್ದಂತಹ ಬಿಜೆಪಿ ಸಂಸದರು ರಾಜ್ಯಕ್ಕೆ ಬರಬೇಕಾದಂತಹ ಕೇಂದ್ರ ಸರ್ಕಾರದ ಪರಿಹಾರವನ್ನು ಕೇಳಿದೆ ತಮ್ಮ ಬಾಯಿಗೆ ಬೀಗ ಜಡಿದು ಲಾಕ್ಡೌನ್ ಮನಃಸ್ಥಿತಿಯಲ್ಲಿ ಇರುವುದನ್ನು ಕಂಡರೆ ಇದು ಬೀಗ ಜಡಿದ ಲಾಕ್ಡೌನ್ ಬಿಜೆಪಿ ಸರ್ಕಾರ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕೊರೋನಾ ವೈರಸ್ ಗಿಂತ ಈ ಬಿಜೆಪಿ ಎಂಬ ವೈರಸ್ ಸರ್ಕಾರ ಅತಿ ಹೆಚ್ಚು ಅಪಾಯಕಾರಿಯಾಗಿದೆ ಎಂದರು.
ವಿರೋಧಪಕ್ಷವಾಗಿ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ರಾಜ್ಯದ ಜನರ ಹಿತದೃಷ್ಟಿಯಿಂದ ಸರ್ಕಾರಕ್ಕೆ ಸಲಹೆ ನೀಡಿದರು. ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿರುವ ಸಚಿವ ಈಶ್ವರಪ್ಪನವರು ಈ ಹಿಂದೆ ಧರ್ಮ- ಜಾತಿ, ಹೊಡಿ, ಬಡಿ, ಕಡಿ ಸಂಸ್ಕೃತಿಯ ಹೇಳಿಕೆಗಳನ್ನು ನೀಡುತ್ತಾ ಗೆದ್ದು , ಶಾಸಕ – ಮಂತ್ರಿ ಆಗಿರುವುದು ಈಶ್ವರಪ್ಪರಿಗೆ ನೆನಪಿಲ್ಲವೇ. ಇಂದು ವಿರೋಧಪಕ್ಷಗಳು ಮಾಡುತ್ತಿರುವ ಟೀಕೆಗಳಿಗೆ, ಸಲಹೆಗಳಿಗೆ ಸಮರ್ಥವಾಗಿ ಆಡಳಿತ ನಡೆಸುವುದನ್ನು ಬಿಟ್ಟು ಇಂತಹ ಬಾಲಿಶ ಹೇಳಿಕೆ ನೀಡುತ್ತಿರುವುದನ್ನು ನೋಡಿದರೆ ಇವರು ಅಧಿಕಾರ ನಡೆಸಲು ಅಸಮರ್ಥರು. ಕೂಡಲೇ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಬಾಯಿಗೆ ಬೀಗ ಹಾಕುವ ಮುಖಾಂತರ ಜೀವನಪರ್ಯಂತ ಇವರು ಲಾಕ್ಡೌನ್ ಆಗುವುದು. ಈ ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶಿಸಿ ಜನವಿರೋಧಿ ಬಿಜೆಪಿ ಸರ್ಕಾರ ವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post