ಕಲ್ಪ ಮೀಡಿಯಾ ಹೌಸ್
ಹೊಸಪೇಟೆ: ತನ್ನದು ಯಾವುದೇ ರೀತಿಯಲ್ಲೂ ತಪ್ಪಿಲ್ಲದಿದ್ದರೂ ವ್ಯಕ್ತಿಯೊಬ್ಬರ ಕಾಲು ಮುರಿದಿರುವ ಭೀಕರ ಘಟನೆ ನಗರದಲ್ಲಿ ನಡೆದಿದೆ.

ಆತ ತಮ್ಮವರ ಮದುವೆ ಸಂಭ್ರಮದಲ್ಲಿ ಇದ್ದ ಬಡಪಾಯಿ. ಸಂಬಂಧಿಯೊಬ್ಬರ ಮದುವೆಗೆ ಪರವಾನಿಗೆ ಪಡೆಯಲು ಹೊಸಪೇಟೆ ತಹಸಿಲ್ದಾರ್ ಆಫೀಸಿಗೆ ಇಬ್ಬರು ಬೈಕಲ್ಲಿ ಬಂದಿದ್ದಾರೆ.. ಕಚೇರಿ ಗೇಟ್ ಬಂದಾಗಿದ್ದರಿಂದ, ಗೇಟ್ ಹೊರಗಡೆಯೇ ಬೈಕ್ ನಿಲ್ಲಿಸಬೇಕಾಯಿತು. ಈ ಸಂದರ್ಭದಲ್ಲಿ ಬೈಕ್ ಚಲಾಯಿಸುವ ವ್ಯಕ್ತಿಗೆ ಬ್ಯಾಲೆನ್ಸ್ ಸಿಗದೇ ಬೈಕ್ ಸಮೇತ ಇಬ್ಬರೂ ನೆಲಕ್ಕುರುಳಿದರು. ಆಗ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಆಯ ತಪ್ಪಿ ತನ್ನ ಬಲಗಾಲನ್ನು ಬೈಕ್ ಹಿಂದಿನ ಗಾಲಿಯಲ್ಲಿ ಕಾಲಿಟ್ಟ. ಇದೇ ಸಂದರ್ಭದಲ್ಲಿ ಮುಂಬದಿಯ ಬೈಕ್ ಸವಾರನ ಕೈಯಲ್ಲಿದ್ದ ಎಕ್ಷಲೆಟ್ರ್ ರೈಸಾಯಿತು, ಆಗ ಹಿಂದಿನ ಗಾಲಿ ಜೋರಾಗಿ ತಿರುಗುತಿದ್ದಂತೆ ಹಿಂದೆ ಕುಳಿತ ವ್ಯಕ್ತಿಯ ಬಲಗಾಲು ತುಂಡಾಯಿತು ಒಂದು ಅನಾಹುತವೇ ನಡೆದುಹೋಯಿತು.

ನೋಡ ನೋಡುತಿದ್ದಂತೆ ನೆಲಕ್ಕೆ ಕುಸಿದ ವ್ಯಕ್ತಿ ಗೋಳಾಡತೊಡಗಿದೆ. ಎಂತಹ ದುರಂತ ಎಂದರೆ ಯಾವುದೇ ಅಪಘಾತವಲ್ಲ, ತಮ್ಮದಲ್ಲದ ತಪ್ಪಿಗೆ ಮನುಷ್ಯ ಹೇಗೆಲ್ಲ ನೋವು ಅನುಭವಿಸಬೇಕಾಗುತ್ತೆ ಎನ್ನುವುದಕ್ಕೆ ಈ ಘಟನೆ ಒಂದು ಉದಾಹರಣೆ.
ಸರಿಯಾಗಿ ಬಂದ ವ್ಯಕ್ತಿ ಕಣ್ಣು ಮುಚ್ಚಿ ಬಿಡುವಷ್ಟರಲ್ಲೇ ಕಾಲು ಮುರಿದುಕೊಂಡು ಆಸ್ಪತ್ರೆಗೆ ಹೋಗಬೇಕಾಯಿತು. ಏನೆಲ್ಲ ನೋವು ಕಷ್ಟಗಳನ್ನು ನಾವು ಎದುರಿಸಬೇಕೆಂದು ದೇವರು ನಿರ್ಧರಿಸೇ ಕಳಿಸಿರುತ್ತಾನೆ. ಅವುಗಳು ಎದುರಾಗಲು ಒಂದೊಂದು ಕಾರಣಗಳನ್ನು ಕೂಡ ಇಟ್ಟಿರುತ್ತಾನೆ ಎಂಬುದು ಸತ್ಯ.
(ವರದಿ: ಮುರುಳೀಧರ್ ನಾಡಿಗೇರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















