ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ದೇಶದ ಅತಿದೊಡ ಪುಸ್ತಕ ಮಳಿಗೆ ಎಂದೇ ಖ್ಯಾತವಾಗಿರುವ ಸಪ್ನ ಬುಕ್ ಹೌಸ್ ಮಾಲೀಕ ಸುರೇಶ್ ಸಿ. ಶಾ(84) ಅವರು ವಿಧಿವಶರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.
1966ರಲ್ಲಿ ಸಣ್ಣ ಮಟ್ಟದಲ್ಲಿ ಸಪ್ನ ಬುಕ್ ಹೌಸ್ ಆರಂಭಿಸಿದ ಸುರೇಶ್ ಶಾ ಅವರು ಸಂಸ್ಥೆಯನ್ನು ದೇಶದ ಅತಿದೊಡ್ಡ ಪುಸ್ತಕ ಮಳಿಗೆಯನ್ನಾಗಿ ಕಟ್ಟಿ ಬೆಳೆಸಿದ್ದರು. ಗಾಂಧಿನಗರ, ಜಯನಗರ, ಕೋರಮಂಗಲ, ಸದಾಶಿವನಗರ, ಮಂಗಳೂರು, ಮೈಸೂರು, ಸೇರಿದಂತೆ 19 ಶಾಖೆಗಳನ್ನು ಹೊಂದಿರುವ ಸಪ್ನ ಕನ್ನಡ ಪುಸ್ತಕಗಳನ್ನು ವ್ಯಾಪಕವಾಗಿ ಓದುಗರಿಗೆ ತಲುಪಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ.
ಶ್ರೀಯುತರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post