ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸಂಕಷ್ಟದ ಸಮಯದಲ್ಲಿ ಭಗವಂತ ಎಲ್ಲರನ್ನೂ ಆಶೀರ್ವದಿಸಿ ಕಾಯುತ್ತಾರೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಕೆ ಈ ಕಾಂತೇಶ್ ಹೇಳಿದರು.
ಅಖಿಲ ಭಾರತ ಕ್ರೈಸ್ತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಇಂದು ನಗರದ ರಾಗಿಗುಡ್ಡದಲ್ಲಿ ಆರ್ಥಿಕವಾಗಿ ಹಿಂದುಳಿದ ಕ್ರೈಸ್ತರಿಗೆ ಫುಡ್ ಕಿಟ್ ಹಂಚುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಾನಿಗಳು ಎಲ್ಲಾ ಸಮಾಜದಲ್ಲೂ ಇದ್ದಾರೆ. ಇವರನ್ನು ಸಮಾಜವು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಗಿಗುಡ್ಡ ಸಂತ ಅಂಟೋನಿ ಚರ್ಚ್‌ನ ಗುರುಗಳಾದ ಫಾದರ್ ಬಿಜು ಥಾಮಸ್, ಚರ್ಚ್ ಕಾರ್ಯದರ್ಶಿ ಸೆಬಸ್ಟಿಯನ್, ಬಿಜೆಪಿ ಮುಖಂಡ ಕಾಚೀನಕಟ್ಟೆ ಸತ್ಯನಾರಾಯಣ, ಅಖಿಲ ಭಾರತ ಕ್ರೈಸ್ತ ಸಮಾಜದ ರಾಜ್ಯಾಧ್ಯಕ್ಷ ವಿನ್ಸೆಂಟ್ ರೊಡ್ರಿಗಸ್, ಕ್ಲೇಮೆಂಟ್ ರಾಯನ್, ರೋಸಾಲಿನ್ ಫೆರ್ನಾಂಡಿಸ್, ಅರ್ನೆಸ್ಟ್ ಪ್ಯಾಟ್ರಿಕ್ಸ್, ರೀನಾ ಪ್ಯಾಟ್ರಿಕ್, ಕಿರಣ್ ಫೆರ್ನಾಂಡಿಸ್, ಲೂರ್ದುನಾದನ್ ಸುಸೈನಾದಾನ್, ರಾಕೇಶ್ ಡಿಸೋಜಾ, ಜೋಸೆಫ್ ಟೆಲ್ಲಿಸ್, ಮೇರಿ ಡಿಸೋಜಾ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post