ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಇಂದಿನಿಂದ ಕಠಿಣ ಲಾಕ್‌ಡೌನ್ ಜಾರಿಯಲ್ಲಿದ್ದು, ಎಲ್ಲಾ ಚೆಕ್ ಪೋಸ್ಟ್‌ಗಳಲ್ಲಿ ಪೋಲಿಸರು ತೀವ್ರ ತಪಾಸಣೆ ನಡೆಸುತ್ತಿದ್ದುದು ಕಂಡು ಬಂದಿತು. ಪ್ರತಿಯೊಬ್ಬರ ಗುರುತಿನ ಚೀಟಿ ಪರಿಶೀಲನೆ ಮಾಡಿ ವಾಹನಗಳನ್ನು ಬಿಡುತ್ತಿದ್ದು. ಸರಿಯಾದ ಮಾಹಿತಿ ನೀಡದ ವಾಹನಗಳನ್ನು ಠಾಣೆಗೆ ಕಳಿಸಲಾಗುತ್ತಿತ್ತು.
8 ಗಂಟೆಗೆ ಸರಿಯಾಗಿ ವಿನೋಬನಗರದ ಶಿವಾಲಯದ ಬಳಿ ನಡೆಯುತ್ತಿದ್ದ ತರಕಾರಿ ಸಂತೆಯನ್ನು ಪೊಲೀಸರು ಬಂದ್ ಮಾಡುವಂತೆ ಸೂಚಿಸಿದರು. ದಿನಸಿ ಹಾಗೂ ತರಕಾರಿ ಅಂಗಡಿಗಳನ್ನೂ 8 ಗಂಟೆಗೆ ಬಂದ್ ಮಾಡಬೇಕೆಂದು ಜಿಲ್ಲಾಡಳಿತ ತಿಳಿಸಿದ್ದರೂ, ಸಮಯ ಮೀರಿದ ಮೇಲೂ ವ್ಯಾಪಾರ- ವಹಿವಾಟು ಮುಂದುವರೆದಿತ್ತು.

ಪಶ್ಚಿಮ ಸಂಚಾರಿ ನಿಯಂತ್ರಣ ಪೊಲೀಸ್ ಠಾಣೆಯಲ್ಲಿ ಮೂರು ಕಾರು ಸೇರಿದಂತೆ 25ಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಲಾಗಿದ್ದು, ಅನಗತ್ಯವಾಗಿ ಓಡಾಡುವರನ್ನೂ ಸಹ ಪೊಲೀಸರು ವಶಕ್ಕೆ ಪಡೆಯುತ್ತಿರುವ ದೃಶ್ಯ ಕಂಡುಬಂದಿತು.
ನಗರ ಪ್ರದೇಶದ ರಸ್ತೆಗಳಾದ ವಿನೋಬನಗರ, ಮಂಡ್ಲಿ, ವಿದ್ಯಾನಗರ, ಚಿಕ್ಕಲ್, ನವಿಲೆ, ಸೋಮಿನಕೊಪ್ಪ, ಸೂಳೆಬೈಲ್ ಸೇರಿದಂತೆ ಹಲವೆಡೆ ವಾಹನ ಸಂಚಾರ ಸಾಮಾನ್ಯವಾಗಿತ್ತು. ಕೋವಿಡ್ ತಡೆಯಲು ಸರ್ಕಾರ, ಪೋಲಿಸರು, ವೈದ್ಯರು, ಕೊರೋನಾ ವಾರಿಯರ್ಸ್‌ಗಳು ಹಗಲಿರುಳು ಶ್ರಮಿಸುತ್ತಿದ್ದರೂ ಜನರು ಅನಗತ್ಯವಾಗಿ ಓಡಾಡುತ್ತಿರುವುದಕ್ಕೆ ಕಡಿವಾಣ ಬೀಳದೆ ಇರುವುದು ವಿಷಾದನೀಯ ಸಂಗತಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















