ಕಲ್ಪ ಮೀಡಿಯಾ ಹೌಸ್
ಯಲ್ಲಾಪುರ: ವಿಶ್ವ ಹಾಲು ಅಭಿವೃದ್ಧಿ ದಿನದ ಅಂಗವಾಗಿ ಯಲ್ಲಾಪುರ ತಾಲ್ಲೂಕಿನ ಉಪಲೇಶ್ವರ ಹಾಲು ಉತ್ಪಾದಕರ ಸಂಘದಲ್ಲಿ ಜನಪ್ರಿಯ ಟ್ರಸ್ಟ್ ವತಿಯಿಂದ ಸದಸ್ಯರ ದನಕ್ಕೆ ಹಿಂಡಿ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ದತ್ತಾತ್ರೆಯ ಭಟ್ ಉಪಸ್ಥಿತರಿದ್ದು ನೀಡಿ ಶುಭ ಕೋರಿದರು.
ಜನಪ್ರಿಯ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಭಟ್ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘದಲ್ಲಿ ಹೆಚ್ಚಿನ ಹಾಲು ಉತ್ಪಾದನೆಗೆ ಗ್ರಾಮಸ್ಥರು ಶ್ರಮಿಸಬೇಕು ಎಂದು ಮನವಿ ಮಾಡಿ, ದೇಸಿ ಹಾಲಿನ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ನಾಗೇಶ್ ಭಟ್, ಮಹಲೇಶ್ವರ್ ಭಟ್ ಉಪಲೆಶ್ವರ, ನಾಗರಾಜ್ ಭಟ್, ರಾಮಕೃಷ್ಣ ಭಟ್, ಶಿವರಾಮ್ ಭಟ್, ಸಂಘದ ಕಾರ್ಯದರ್ಶಿ ಗಜಾನನ್ ಹೆಗಡೆ ಕನ್ಛನಹಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post