ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್ ನಿಂದ ಎಜ್ಯುಕೇರ್ ಶಾಲಾ ಶಿಕ್ಷಕರಿಗೆ ಇಂದು ಬೆಳಿಗ್ಗೆ ಫುಡ್ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್ ನ ಎನ್.ಎಮ್ ಸಿಗ್ಬತ್ ಉಲ್ಲಾ ಮಾತನಾಡಿ, ಕಳೆದ ವಾರದಿಂದ ನಗರದ ಖಾಸಗಿ ವಲಯದಲ್ಲಿರುವ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ ಆಹಾರದ ಕಿಟ್ ನೀಡಿ ಗುರು-ಗೌರವ ಸಲ್ಲಿಸಲಾಗುತ್ತಿದೆ.
ಲಾಕ್‌ಡೌನ್ ನಿಂದಾಗಿ ಈ ವರ್ಗದ ಶಿಕ್ಷಕರನ್ನು ಕಡೆಗಣಿಸುವುದು ಸರಿಯಲ್ಲ, ಬಹುತೇಕ ಖಾಸಗಿ ಶಿಕ್ಷಕರು ಕಡಿಮೆ ಸಂಬಳ ತೆಗೆದುಕೊಂಡು ತಮ್ಮ ವೃತ್ತಿಯಲ್ಲಿದ್ದಾರೆ ಆದ್ದರಿಂದ ಸ್ಥಳೀಯ ಮಹಾನಗರ ಪಾಲಿಕೆಯು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ವಿತರಿಸಬೇಕೆಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಪ್ರಜಾಪ್ರಭುತ್ವದಲ್ಲಿ ಉತ್ತಮ ಸಮಾಜದ ಹೊಣೆಗಾರಿಕೆಯನ್ನು ಶಿಕ್ಷಕರು ಹೊತ್ತಿರುತ್ತಾರೆ, ಕಡಿಮೆ ಸಂಬಳವಿದ್ದರೂ ಅದರಲ್ಲೇ ಬದುಕನ್ನು ಕಂಡು ಕೊಂಡಿರುತ್ತಾರೆ, ಇದನ್ನು ಸರಕಾರ ಹಾಗೂ ಸ್ಥಳೀಯ ಮಹಾನಗರ ಪಾಲಿಕೆ ಪರಿಗಣಿಸಬೇಕು ಎಂದು ಹೇಳಿದರು.
ಪುಡ್ ಕಿಟ್ ವಿತರಣೆಯಲ್ಲಿ ಎಜ್ಯುಕೇರ್ ಶಾಲಾ ಮುಖ್ಯಸ್ಥರಾದ ಪ್ರಶಾಂತ್. ಪತ್ರಕರ್ತ ಗಾರಾ.ಶ್ರೀನಿವಾಸ್, ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್ ನ ಕಾರ್ಯದರ್ಶಿ ಹೆಚ್,ಎಸ್ ವಿಷ್ಣುಪ್ರಸಾದ್, ಮಲ್ನಾಡ್ ಪುಟ್ವೇರ್ ಮಾಲೀಕರಾದ ಇಮ್ರಾನ್ ಮಲ್ನಾಡ್, ಮುಸಾವಿರ್, ಸಲೀಂ, ಸಾಧೀಕ್ ಹಾಗೂ ಎಜ್ಯುಕೇರ್ ಶಾಲಾ ಶಿಕ್ಷಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post