ಶಿವಮೊಗ್ಗ, ಸೆ.30: ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಮಂಗಳವಾರದೊಳಗೆ ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿ ಇಂದಿನ ತನ್ನ ಕಲಾಪವನ್ನು ಗುರುವಾರಕ್ಕೆ ಮುಂದೂಡಿದೆ.
ಇಂದು ಕಾವೇರಿ ಜಲವಿವಾದದ ಸಂಬಂಧ ಮುಂದುವರೆದ ವಿಚಾರಣೆಯ ವೇಳೆ ಕೇಂದ್ರಸರ್ಕಾರವು 3 ದಿನದ ಒಳಗಾಗಿ ಮಂಡಳಿಯನ್ನು ರಚಿಸಲು ತಾನು ಬದ್ದ ಎಂದು ಕೋರ್ಟಿಗೆ ತಿಳಿಸಿತ್ತು.
ಇದಕ್ಕೂ ಮುನ್ನ ಕರ್ನಾಟಕದ ಪರ ವಕೀಲ ಫಾಲಿ ಎಸ್. ನಾರಿಮನ್ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಟಿಪ್ಪಣಿಯನ್ನು ನ್ಯಾಯಾಧೀಶರಿಗೆ ಸಲ್ಲಿಸಿದರು. ಇದರ ಹೊರತಾಗಿ ತಾನು ಯಾವುದೇ ವಾದ ಮಾಡುವುದಿಲ್ಲ ವೆಂದು ತಿಳಿಸಿದರು.
ಈ ಸಮಯದಲ್ಲಿ ಮಾತನಾಡಿದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ, ಮಂಡಳಿ ರಚನೆಗೆ ೪ ವಾರಗಳ ಕಾಲಾವಕಾಶ ಇದೆ ಎಂದು ಹೇಳಿದರು.
ನಂತರ ನ್ಯಾಯಾಧೀಶರು ನಾಳೆ ಸಂಜೆಯೊಳಗೆ ವಿವಾದಕ್ಕೆ ಸಂಬಂಧಿಸಿದ ನಾಲ್ಕು ರಾಜ್ಯದವರು ನಿರ್ವಹಣಾ ಮಂಡಳಿಯಲ್ಲಿ ಸೇರುವ ತಮ್ಮ ರಾಜ್ಯದ ಪ್ರತಿನಿಧಿಗಳ ಪಟ್ಟಿಯನ್ನು ಸಲ್ಲಿಸಲು ಸೂಚಿಸಿದರು. ಇದಾದಬಳಿಕ ಅ.೬ಕ್ಕೆ ವಿಚಾರಣೆಯನ್ನು ಮುಂದೂಡಲಾಯಿತು.
ಈ ಸಂದರ್ಭದಲ್ಲಿ ತಮಿಳುನಾಡು ಪರ ವಕೀಲರಾದ ಶೇಖರ್ ನಫ್ಡೆ, ಉಮಾಪತಿ ಹಾಜರಿದ್ದರು.
Discussion about this post