ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ವರ್ಷ ಮುಂಗಾರಿನ ಅಬ್ಬರ ಹೆಚ್ಚಾಗಿದ್ದು, ಮಲೆನಾಡಿನ ಜೀವನಾಡಿ ತುಂಗಾ ನದಿ ತುಂಬಿ, ಮಂಟಪ ಮುಳುಗಲು ಇನ್ನು ಕೇವಲ 2 ಅಡಿ ಮಾತ್ರ ಬಾಕಿ ಇದೆ.
ಗಾಜನೂರು ತುಂಗಾ ಜಲಾನಯನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಅಣೆಕಟ್ಟೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಸದ್ಯ ಜಲಾಶಯಕ್ಕೆ 34700 ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದು, 34700 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಪರಿಣಾಮವಾಗಿ ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ಪುರಾತನ ಪ್ರಸಿದ್ದ ಕೋರ್ಪಳಯ್ಯನ ಛತ್ರದ ಬಳಿಯಿರುವ ಮಂಟಪ ಮುಳುಗಲು ಇನ್ನು 2 ಅಡಿ ಮಾತ್ರ ಬಾಕಿಯಿದೆ.
ಯಾವ ಜಲಾಶಯದಲ್ಲಿ ಎಷ್ಟು ನೀರು?
ಲಿಂಗನಮಕ್ಕಿ: ಗರಿಷ್ಠ ಮಟ್ಟ- 1819 ಅಡಿ, ಇಂದಿನ ಮಟ್ಟ 1781.45 ಅಡಿ(ಕಳೆದ ವರ್ಷ ಇದೇ ದಿನ 1760.20 ಅಡಿಗಳಿತ್ತು)
ಭದ್ರಾ: ಗರಿಷ್ಠ ಮಟ್ಟ-186 ಅಡಿ, ಇಂದಿನ ಮಟ್ಟ 146.60(ಕಳೆದ ವರ್ಷ ಇದೇ ದಿನ 135 ಅಡಿಗಳಿತ್ತು)
ತುಂಗಾ: ಗರಿಷ್ಠ ಮಟ್ಟ-588.24, ಇಂದಿನ ಮಟ್ಟ 588.24(ಕಳೆದ ವರ್ಷ ಇದೇ ದಿನ 587.69 ಅಡಿಗಳಿತ್ತು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post