ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜುಲೈ 3 ರಂದು ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಎಫ್-30ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ:
ಎಸ್.ವಿ.ಬಡಾವಣೆ ಸಿ ಮತ್ತು ಡಿ ಬ್ಲಾಕ್, ಹನುಮಂತನಗರ, ವೃದ್ದಾಶ್ರಮದ ಹಿಂಭಾಗ, ಜಡ್ಜ್ ಕ್ವಾಟ್ರಸ್, ಪಾಲಿಟೆಕ್ನಿಕ್ ಕಾಲೇಜು ಮತ್ತು ಎಎಫ್-8ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ನಗರದ ಹುಚ್ಚುರಾಯ ಕಾಲೋನಿ, ವೀರಣ್ಣ ಬಡಾವಣೆ, ಚೇತನ ಪಾರ್ಕ್ ಸುತ್ತಮುತ್ತ, ಮೋರ್‍ನ ಹತ್ತಿರ, ಲಕ್ಷ್ಮೀಪುರ, ಕೆಂಚಪ್ಪ ಬಡಾವಣೆ, ಕುವೆಂಪು ಬಡಾವಣೆ, ದಯಾನಂದ ಪ್ರಿಂಟರ್ಸ್, ಸೂಡಾ ಕಾಂಪ್ಲೆಕ್ಸ್, ಪೊಲೀಸ್ ಚೌಕಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಎಂದು ಮೆಸ್ಕಾಂ ನಗರ ಉಪವಿಭಾಗ 3 ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















