ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಆಯ್ದ ಕಲಾವಿದರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ವೃತ್ತಿ ನಿರತ ಜಾನಪದ ಕಲಾವಿದರಿಗೆ ಕೊರೋನ ಸಂಕಷ್ಟದಲ್ಲಿ ಆತ್ಮವಿಶ್ವಾಸ ತುಂಬವ ಸಲುವಾಗಿ ಹೊಸನಗರ ಶ್ರೀರಾಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ, ಪ್ರೊ. ಮಾರ್ಷಲ್ ಶರಾಮ್, ಡಾ. ಶಾಂತಾರಾಮ್ ಪ್ರಭುಗಳು, ಡಾ. ಶ್ರೀಪತಿಹಳಗುಂದ, ಗಣೇಶ್ ಮೂರ್ತಿ ನಾಗರಕೊಡಿಗೆ, ಭೈರಾಪುರ ಶಿವಪ್ಪ ಮೇಸ್ಟ್ರು, ತ. ಮ. ನರಸಿಂಹ, ಕೆ.ಜಿ. ನಾಗೇಶ್, ಅಶೋಕ ಗುಳೇದ, ಲಿಂಗಮೂರ್ತಿ, ಸುರೇಶ್ ಕುಮಾರ್, ಪಂಚಾಕ್ಷರಿ, ಎಚ್. ಆರ್. ಪ್ರಕಾಶ್, ಕಲಾವಿದರಾದ ಆಂಜನೇಯ ಜೋಗಿ, ಯಲ್ಲಪ್ಪ ಭಾಗವತ, ರತ್ನಮ್ಮ ಜೋಗತಿ, ಸತ್ಯನಾರಾಯಣ, ಗಣಪತಿ ಹರಿದ್ರಾವತಿ, ಚಂದ್ರಪ್ಪ ಹೊಸನಗರ, ನಾಗಪ್ಪ ಬಟ್ಟೇಮಲ್ಲಪ್ಪ, ಸುಧಾಕರ ಅವರು ಸೌಲಭ್ಯ ಪಡೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post