ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುಮಾರು 40 ವರ್ಷ ಸೇವೆ ಸಲ್ಲಿಸಿ, ಇತ್ತೀಚಿಗೆ ನಿಧನ ಹೊಂದಿದ ವಾಜಿದ್ ಸಾಹೇಬ್ ಅವರ ಮನೆಗೆ ಜಿಲ್ಲಾ ಯುವ ಕಾಂಗ್ರೆಸ್ ಸದಸ್ಯರು ಹಾಗೂ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಭೇಟಿ ನೀಡಿ ಸಾಂತ್ವನ ಭೇಟಿ ಸಾಂತ್ವನ ಹೇಳಿದರು.
ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ದಿವಂಗತ ವಾಜಿದ್ ಸಾಹೇಬ್ ಅವರ ಕುಟುಂಬಸ್ಥರಿಗೆ ದಿನಸಿ ಸಾಮಗ್ರಿಗಳು ಮತ್ತು ಧನ ಸಹಾಯ ಮಾಡಲಾಯಿತು.
ನಂತರ ಮಾತನಾಡಿದ ಮಿಥುನ್ ರೈ, ವಾಜಿದ್ ಸಾಹೇಬ್ ಅವರು ಪಕ್ಷಕ್ಕೆ 40 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದು, ಪಕ್ಷದ ಕಚೇರಿಗೆ ಬಂದಂತಹ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಅವರ ಸೇವೆ ಇಂತಹ ಸಂದರ್ಭದಲ್ಲಿ ಸ್ಮರಣೀಯವಾದದ್ದು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಪ್ರವೀಣ್ ಕುಮಾರ್ , ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ. ಗಿರೀಶ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ. ಲೋಕೇಶ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಎಸ್ ಕುಮರೇಶ್, ಗ್ರಾಮಾಂತರ ಅಧ್ಯಕ್ಷ ಈಟಿ ನಿತಿನ್, ಭದ್ರಾವತಿ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ್ ಕುಮಾರ್ , ಭದ್ರಾವತಿ ಗ್ರಾಮಾಂತರ ಅಧ್ಯಕ್ಷ ಆಫ್ತಬ್, ಶಿಕಾರಿಪುರ ಪುರಸಭಾ ಸದಸ್ಯ ಮಯೂರ್ ದರ್ಶನ್, ಭದ್ರಾವತಿ ನಗರಸಭಾ ಸದಸ್ಯ ಶ್ರೇಯಸ್ (ಚಿಟ್ಟೆ), ಪದಾಧಿಕಾರಿಗಳಾದ ಉಮೇಶ್ ಬಾಳೆಗುಂಡಿ, ಅರುಣ್ ನವುಲೆ, ಇರ್ಫಾನ್, ಸಚಿನ್ ಸಿಂದೆ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post