ಕಲ್ಪ ಮೀಡಿಯಾ ಹೌಸ್
ಸೊರಬ : ಜನಪ್ರತಿನಿಧಿಗಳು ಸಾಮಾಜಿಕ ಕಾಳಜಿ ಹೊಂದಿ ಜನರ ರಕ್ಷಣೆ ಮಾಡಬೇಕೆ ಹೊರತು ದಬ್ಬಾಳಿಕೆ ಮಾಡಬಾರದು. ಕಾನಕೇರಿ ಬಡಾವಣೆಯ ಬಡವರನ್ನು ತೆರವು ಗೊಳಿಸಲು ಮುಂದಾದರೆ ಶಾಸಕರ ವಿರುದ್ಧ ಪ್ರತಿಭಟನೆ ಮಾಡಲು ಹಿಂಜರಿಯುವುದಿಲ್ಲಎಂದು ಜೆಡಿಎಸ್ ಆನವಟ್ಟಿ ಬ್ಲಾಕ್ ಅಧ್ಯಕ್ಷ ಬಾಸೂರು ಚಂದ್ರೇಗೌಡ ಎಚ್ಚರಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಖಂಡನಾ ಸಭೆಯಲ್ಲಿ ಮಾತನಾಡಿದ ಅವರು, ಕಾನಕೇರಿ ಬಡಾವಣೆಯಲ್ಲಿ 3 ಬಡವರು ನಿರ್ಮಿಸಿಕೊಂಡಿರುವ ಮನೆಗಳನ್ನು ತೆರವುಗೊಳಿಸಲು ಮುಂದಾಗಿರುವ ಶಾಸಕ ಕುಮಾರ್ ಬಂಗಾರಪ್ಪ ನಡೆ ಅಕ್ಷಮ್ಯ. ಈ ಹಿಂದೆಯೂ ಕಾನಕೇರಿ ನಿವಾಸಿಗಳನ್ನು ಶಾಸಕರು ಒಕ್ಕಲೆಬ್ಬಿಸಲು ಪ್ರಯತ್ನ ನಡೆಸಿದ್ದರು. ಅಂದು ಸ್ಥಳೀಯ ನಿವಾಸಿ ಗಳ ಜೊತೆ ಪ್ರತಿಭಟನೆ ಮಾಡಿದ್ದರಿಂದ ಒಕ್ಕಲೆಬ್ಬಿಸುವುದನ್ನು ಕೈಬಿಡಲಾಗಿತ್ತು. ಬಡವರಿಗೆ ಭೂಮಿ ಕೊಡಿಸಿದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರರಾಗಿ ಇಂತಹ ಕೃತ್ಯಕ್ಕೆ ಇಳಿದಿರುವುದು ಶಾಸಕರಿಗೆ ಶೋಭೆ ತರುವುದಿಲ್ಲ ಎಂದರು.
ಸೊರಬ ಬ್ಲಾಕ್ ಅಧ್ಯಕ್ಷ ಕೆ. ಅಜ್ಜಪ್ಪ ಕಾಸರಗುಪ್ಪೆ ಮಾತನಾಡಿ, ಮೂಲ ಸೌಕರ್ಯವನ್ನು ಹೊಂದಿರುವ ಬಡಾವಣೆಯಲ್ಲಿರುವ ಮನೆಗಳನ್ನು ಯಾವುದೇ ಆದೇಶವಿಲ್ಲದೆ ತೆರವುಗೊ ಳಿಸಿರುವುದನ್ನು ಪಕ್ಷ ಖಂಡಿಸುತ್ತಿದೆ. ಸರ್ಕಾರಿ ಕಿಟ್‌ಗಳನ್ನು ಕೊಡುವಲ್ಲಿ ಹಾಗೂ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರಪಾಲನೆಯಾಗುತ್ತಿಲ್ಲ, ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾ ಗಿದ್ದು, ತಹಶೀಲ್ದಾರ್ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎನ್. ಕುಮಾರ್ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್ ಸದೃಢವಾಗಿದೆ. ರಾಷ್ಟ್ರೀಯ ಪಕ್ಷಗಳು ಕೈಗೊಳ್ಳುತ್ತಿರುವ ಜನ ವಿರೋಧಿ ನಿರ್ಧಾರಗಳಿಂದ ಜನ ಬೇಸತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳತ್ತ ಒಲವು ನೀಡುತ್ತಿದ್ದಾರೆ ಎಂದರು.
ಸಭೆಯಲ್ಲಿ ಬಸವನಗೌಡ ಪಾಟೀಲ್ ಮಲ್ಲಾಪುರ, ಶಿವಪ್ಪ ದ್ವಾರಹಳ್ಳಿ, ಇ.ಎಚ್. ಮಂಜು ನಾಥ್, ಸುನೀಲ್ ಹಂಚಿನಮನೆ, ಪ್ರಕಾಶ್ ಕೆ. ತತ್ತೂರು, ಭಾರತೀ ಶೆಣೈ, ಮಾರುತಿ, ತಿಮ್ಮಪ್ಪ ರಾಮಗೊಂಡನಕೊಪ್ಪ, ನಾಗಮ್ಮ ಗುಡುವಿ, ಕೃಷ್ಣಮೂರ್ತಿ ಬಿಳವಾಣಿ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post