ಕಲ್ಪ ಮೀಡಿಯಾ ಹೌಸ್
ಆನಂದಪುರ: ತಮ್ಮ ಜೀವನದ ಕೊನೆ ಕ್ಷಣದವರೆಗೂ ತಾವು ಸಮಾಜ ಸೇವೆ ಮಾಡಲು ಸಿದ್ಧ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಲ್ಲಿನ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಹಾರ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಸರ್ಕಾರ ಅತೀ ಹೆಚ್ಚಿನ ಗಮನ ಕೊಡಬೇಕಿತ್ತು, ಆದರೆ ಒತ್ತು ನೀಡಿಲ್ಲ. ಆದ್ದರಿಂದ ಹಲವರು ನೊಂದಿದ್ದಾರೆ, ಕಷ್ಟದಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸಮಾಜದಲ್ಲಿ ಇನ್ನೂ ಕಡುಬಡವರಿದ್ದಾರೆ. ಅಂತಹವರನ್ನು ಗುರುತಿಸುವ ಕಾರ್ಯ ನಡೆಯಬೇಕು. ಕೊರೋನಾದ ಫ್ರಂಟ್ಲೈನ್ ವರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕ್ಷೌರಿಕರು, ಆಟೋ ಚಾಲಕರು, ಪತ್ರಿಕಾ ವಿತರಕರು, ಹಮಾಲರು ಇವರನ್ನು ಗುರುತಿಸಿ ಆಹಾರದ ಕಿಟ್ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಕೊರೋನಾ ನಮ್ಮ ದೇಶಕ್ಕೆ ಬರಬಾರದು ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದ್ಯಸರಾದ ಅನಿತಾ ಕುಮಾರಿ, ಮಾಜಿ ತಾಪಂ ಸದಸ್ಯರಾದ ಸೋಮಶೇಖರ್ ಲ್ಯಾವಿಗೆರೆ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಬೇಳೂರು, ನಗರಸಭೆ ವಿರೋಧಪಕ್ಷ ನಾಯಕರಾದ ಗಣಪತಿ ಮಂಡಗಳಲೆ, ಒಬಿಸಿ ಅಧ್ಯಕ್ಷರಾದ ಸಂತೋಷ ಸದ್ಗುರು, ಪಣಿ, ಯುವ ನಾಯಕರಾದ ರಮಾನಂದ ಪ್ರೇಮ್ ಕುಮಾರ್, ಉಮೇಶ್, ಆನಂದ ಐಗಿನಬೈಲ್, ರಹಮತ್ತುಲ್ಲಾ, ಪ್ರಕಾಶ್, ಮುರುಘಾಮಠ ರಾಜಣ್ಣ, ಸೋಮೇಶ ಇನ್ನಿತರ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post