ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ ” ನಮ್ಮನಾಡು” ದಿನಪತ್ರಿಕೆಯ ಸಂಪಾದಕರಾದ ಕೆ.ವಿ ಶಿವಕುಮಾರ್ ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿಫಾರಸ್ಸಿನ ಮೇರೆಗೆ ಕೆ.ವಿ ಶಿವಕುಮಾರ್ ಅವರನ್ನು ಮಾಧ್ಯಮ ಅಕಾಡೆಮಿಯಲ್ಲಿ ಸಂಘದ ಪ್ರಾತಿನಿಧಿಕ ಸದಸ್ಯರನ್ನಾಗಿ ನೇಮಕಗೊಳಿಸಲಾಗಿದೆ.
ಬಿ.ಕಾಂ. ಎಲ್ ಎಲ್ ಬಿ ಪದವೀಧರರಾದ ಕೆ.ವಿ ಶಿವಕುಮಾರ್ ಸಮಸಮಾಜ ನಿರ್ಮಾಣದ ಆಶಯಗಳೊಂದಿಗೆ ಮತ್ತು ಜನಪರದನಿಯಾಗಿ ಕಳೆದ ಎರಡು ದಶಕಗಳಿಂದ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕೆ. ವಿ ಶಿವಕುಮಾರ್ ಸಂಪಾದಕತ್ವದ ” ನಮ್ಮ ನಾಡು ” ಕನ್ನಡ ದಿನಪತ್ರಿಕೆಯ ವೃತ್ತಿಪರತೆಯನ್ನು ಗುರುತಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿಯು 2012 ರಲ್ಲಿ “ಆಂದೋಲನ ಪ್ರಶಸ್ತಿ” ನೀಡಿ ಗೌರವಿಸಿತ್ತು.
ಕಲ್ಪ ಮೀಡಿಯ ಹೌಸ್ ನ ಮುಖ್ಯ ಸಂಪಾದಕ ಅನಿರುದ್ಧ ವಸಿಷ್ಠ , ಪ್ರಧಾನ ಸಲಹಾ ಸಂಪಾದಕ ಡಾ.ಸುಧೀಂದ್ರ ಅವರು, ಕೆ. ವಿ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರು ಮತ್ತು ಕರ್ನಾಟಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿಯೂ ಶಿವಕುಮಾರ್ ಅವರು ಪತ್ರಕರ್ತರ ಮತ್ತು ಪತ್ರಿಕೆಗಳ ವೃತ್ತಿಪರ ಹಿತ ಕಾಪಾಡುವಲ್ಲಿ ಸಂಘಟನಾತ್ಮಕ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post