ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಗಿರಿನಗರ 2ನೇ ಹಂತ ದಲ್ಲಿರುವ ಭಾಗವತ ಆಶ್ರಮದಲ್ಲಿ ಭಂಡಾರಕೇರಿ ಮಠಾಧೀಶರಾದ ಶ್ರೀವಿದ್ಯೇಶತೀರ್ಥ ಸ್ವಾಮೀಜಿ 42ನೇ ಚಾತುರ್ಮಾಸ್ಯ ವ್ರತ ಸ್ವೀಕಾರ ಮಾಡಿದರು.
ಬುಧವಾರ (ಟೀಕಾರಾಯರ ಪುಣ್ಯ ದಿನ) ಸಂಸ್ಥಾನ ಪೂಜೆ ನೆರವೇರಿಸಿದ ನಂತರ ಶ್ರೀ ವೇದವ್ಯಾಸರ ಪೂಜೆ, ವ್ಯಾಸ ಅಘ್ರ್ಯ ಸಮರ್ಪಿಸಿದ ಶ್ರೀಗಳು, ಚಾತುರ್ಮಾಸ ವ್ರತ ಸಂಕಲ್ಪವನ್ನು ಸ್ವೀಕರಿಸಿದರು.

ಈ ವ್ರತ ಕೇವಲ ಯತಿಗಳಿಗೆ ಮಾತ್ರವಲ್ಲದೇ ಎಲ್ಲ ವರ್ಣದವರಿಗೂ ಅನ್ವಯವಾಗುವಂಥದ್ದು. ಪ್ರತಿಯೊಬ್ಬರೂ 4 ತಿಂಗಳ ವ್ರತ ಆಚರಿಸಿ ಪುಣ್ಯ ಸಂಪಾದನೆ ಮಾಡಿಕೊಳ್ಳಬಹುದು ಎಂದರು.
ಭಾಗವತ ಆಶ್ರಮದಲ್ಲಿ 4 ತಿಂಗಳ ಕಾಲ ನಿತ್ಯ ಸಂಜೆ ವಿದ್ವಾಂಸರಿಂದ ಪ್ರವಚನ, ಪಂಡಿತರಿಗೆ ಸನ್ಮಾನ, ಸಂಗೀತ ಕಛೇರಿ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸ್ವಾಮೀಜಿ ಹೇಳಿದರು.
ವಿದ್ವಾನ್ ವಿಕಾಸ ಸವಾಯಿ ವ್ರತ ಸಂಕಲ್ಪ ದ ಮಂತ್ರ ಪಠಿಸಿದರು. ವೇದಗರ್ಭ ಶೇಷಗಿರಿ ಆಚಾರ್, ಕೇಶವ ದಾಸರು, ನಾಗೇಂದ್ರ ಆಚಾರ್ಯ, ಗೋಪಾಲಕೃಷ್ಣ, ವಿದುಷಿ ಶುಭಾ ಸಂತೋಷ್, ಸುಭದ್ರಾ ವೆಂಕಟೇಶ ಇತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post