ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಜುಲೈ ತಿಂಗಳಿನಲ್ಲಿ ಎರಡು ವಾಗಗಳ ಕಾಲ ಎಡೆಬಿಡದೆ ಮಳೆ ಸುರಿದ ಬೆನ್ನಲ್ಲೇ, ಆಗಸ್ಟ್ ಮೊದಲ ಹಾಗೂ ಎರಡನೆಯ ವಾರದವರೆಗೂ ವಾಡಿಕೆಗಿಂತಲೂ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಈ ಕುರಿತಂತೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಟಿಸಿದ್ದು, ಆಗಸ್ಟ್ 12ರವರೆಗೂ ಮಲೆನಾಡು ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ವಾಡಿಕೆಗಿಂತಲೂ ಶೇ.10ರಷ್ಟು ಕಡಿಮೆ ಮಳೆಯಾಗುವ ಸಾಧ್ಯತೆ ವ್ಯಕ್ತವಾಗಿದೆ ಎಂದು ಹೇಳಿದೆ.
ಕೆಎಸ್‌ಎನ್‌ಡಿಎಮ್‌ಸಿ ಪ್ರಕಾರ ಜುಲೈನಲ್ಲಿ ರಾಜ್ಯದಾದ್ಯಂತ 480ಮಿಮಿ ಮಳೆಯಾಗಿದ್ದು, ಸಾಮಾನ್ಯವಾಗಿ ಇದರ ಪ್ರಮಾಣ 454 ಮಿಮೀ ಆಗಿದೆ. ಪ್ರಸ್ತುತ ಶೇ.6ರಷ್ಟು ಆಧಿಕ ಮಳೆಯಾಗಿದೆ. ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಈಗಾಗಲೇ ಕ್ರಮವಾಗಿ ಶೇ. 55 ಮತ್ತು ಶೇ.35ರಷ್ಟು ಹೆಚ್ಚಿನ ಮಳೆಯಾಗಿದೆ.
ದಕ್ಷಿಣ ಕರ್ನಾಟಕದ ಜಿಲ್ಲೆಗಳ ಸರಾಸರಿ ಪ್ರಮಾಣ 139ಮಿಮೀ ಆಗಿದ್ದರೆ, ಈಬಾರಿ 216ಮಿಮೀ ಆಗಿದೆ. ಅದೇರೀತಿ ಉತ್ತರ ಕರ್ನಾಟಕದ ಜಿಲ್ಲೆಗಳ ಸರಾಸರಿ ಮಳೆ ಪ್ರಮಾಣ 212 ಮಿಮೀ ಆಗಿದ್ದರೆ, ಈಬಾರಿ 287ಮಿಮೀ ಮಳೆ ಆಗಿದೆ ಎಂದು ವರದಿ ಹೇಳಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post