No Result
View All Result
South Western Railway, Mysuru Division Hosts Inter Department Drama Competition
English Articles

South Western Railway, Mysuru Division Hosts Inter Department Drama Competition

by ಕಲ್ಪ ನ್ಯೂಸ್
May 16, 2026
0

Kalpa Media House  |  Bengaluru  | The South Western Railway, Mysuru Division, successfully organized the much-awaited Inter Department Drama Competition,...

Read moreDetails
PCCF Kumar Pushkar Warns Human Intolerance Fueling Biodiversity Crisis

PCCF Kumar Pushkar Warns Human Intolerance Fueling Biodiversity Crisis

May 15, 2026
Annual Disaster Management Mock Drill Conducted at Harihar Railway Station

Annual Disaster Management Mock Drill Conducted at Harihar Railway Station

May 14, 2026
AESL Launches Victory Batch at Rs 99 to support students appearing for RE-NEET

AESL Launches Victory Batch at Rs 99 to support students appearing for RE-NEET

May 13, 2026
Why The Hell Did You Make Manya Surve a Hero?: Sanjay Gupta Opens Up on Underworld Threats

Why The Hell Did You Make Manya Surve a Hero?: Sanjay Gupta Opens Up on Underworld Threats

May 13, 2026
  • Advertise With Us
  • Grievances
  • About Us
  • Contact Us
Saturday, May 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಮೈಸೂರು ದಸರಾ: ವಸ್ತು ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 5, 2016
in Army
0
Share on FacebookShare on TwitterShare on WhatsApp
ಮೈಸೂರು, ಅ.5: ಸಾಂಸ್ಕೃತಿಕ ನಗರಿ ಮೈಸೂರು ನವರಾತ್ರಿ ಅಂಗವಾಗಿ ಆಯೋಜಿಸುವ ಮಹಿಳಾ ದಸರಾ ಮತ್ತು ಪ್ರದರ್ಶನಕ್ಕೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಹಿಳಾ ದಸರಾದಲ್ಲಿ ಹಲವು ಬಗೆಯ ಮಳಿಗೆಗಳನ್ನು ತೆರೆಯಲಾಗಿದೆ. ಈ ಪ್ರದರ್ಶನದಲ್ಲಿ ಚನ್ನಪಟ್ಟಣ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಗುಲ್ಬರ್ಗ, ವಿಜಯಪುರ, ಹಾಸನ, ಚಿತ್ರದುರ್ಗ, ಕೊಡಗು ಹಾಗೂ ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಭಾಗವಹಿಸುವ ಮಹಿಳೆಯರು ತಾವೇ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.
ಚನ್ನಪಟ್ಟಣದ ಮರದ ಗೊಂಬೆ, ಉತ್ತರ ಕರ್ನಾಟಕದ ರೊಟ್ಟಿ ತಿನಿಸು, ಕೊಡಗಿನ ವಿವಿಧ ಬಗೆಯ ವೈನ್ಗಳು, ಮೈಸೂರಿನ ಕಲಾವಿದರೊಬ್ಬರು ತಾವೇ ಕೈಯಲ್ಲಿ ತಯಾರಿಸಿದ ಆಭರಣಗಳು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದ್ದು, ಝಗಮಗಿಸುವ ವಸ್ತುಗಳು ನೋಡುವುದಕ್ಕೆ ಕಣ್ಮನ ಸೆಳೆಯುತ್ತಿವೆ.
ಈ ನಡುವೆ ಬಾಯಿ ರುಚಿಗಾಗಿ ವಿವಿಧ ಎಣ್ಣೆಯ ತಿಂಡಿ-ತಿನಿಸು ಸೇರಿದಂತೆ ಸಿಹಿ ತಿಂಡಿಗಳು ಭರ್ಜರಿ ಮಾರಾಟವಾಗುತ್ತಿವೆ.
ಅಲ್ಲದೆ, ನೆಲಹಾಸುಗಳು ಸಹ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ನಗರದ ಜೆ.ಎಲ್. ಮೈದಾನದಲ್ಲಿ ನಡೆಯುತ್ತಿರುವ ಮಹಿಳಾ ದಸರಾ ವಸ್ತು ಪ್ರದರ್ಶನ ಮದುವಣಗಿತ್ತಿಯಂತೆ ಶೃಂಗಾರದಿಂದ ಕಂಗೊಳಿಸುತ್ತಿದ್ದು, ಹಲವು ಬಗೆಯ ಕಲಾಕೃತಿಗಳು, ಆಭರಣಗಳು ಹಾಗೂ ಕೈಮಗ್ಗದಿಂದ ತಯಾರಿಸಿದ ವಸ್ತುಗಳ ಮಾರಾಟವು ನಡೆಯುತ್ತಿದ್ದು, 25ಕ್ಕೂ ಹೆಚ್ಚು ಅಂಗಡಿಗಳನ್ನು ತೆರೆಯಲಾಗಿದೆ.
ವಾದ್ಯ ಮೇಳ: ನಾಡಹಬ್ಬ ದಸರಾ ಅಂಗವಾಗಿ 2 ಗಂಟೆಗಳ ಕಾಲ ಸಮೂಹ ವಾದ್ಯಮೇಳ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಮೈಸೂರು ಅರಮನೆ ಆವರಣದಲ್ಲಿ ನಾಳೆ ಸಂಜೆ 7 ರಿಂದ 9 ಗಂಟೆವರೆಗೆ ನಡೆಯಲಿರುವ ಸಮೂಹ ವಾದ್ಯಮೇಳದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಗೌರವ ವಂಚನೆ ಸ್ವೀಕರಿಸಲಿದ್ದಾರೆ.
ಸರ್ಕಾರ ಹಾಗೂ ಪೊಲೀಸ್ ಬ್ಯಾಂಡ್ಗಳ ಎಲ್ಲ ಸಮೂಹ ವಾದ್ಯಮೇಳ ಇದಾಗಿದ್ದು, ಸಾರ್ವಜನಿಕರಿಗೆ ರಸದೌತಣ ನೀಡಲಿದೆ.
ಎಲ್ಲ ಪೊಲೀಸ್ ಬ್ಯಾಂಡ್ ಗಳು ಒಂದೆಡೆ ಸೇರಿ ಸಮೂಹ ವಾದ್ಯ ಸಂಗೀತ ಸುಧೆ ಹರಿಸಲಿದೆ. ರಾಜ್ಯದ ವಿವಿಧೆಡೆ ಇರುವ ಪೊಲೀಸ್ ಬ್ಯಾಂಡ್ಗಳು ಸಹ ಇದರಲ್ಲಿ ಭಾಗವಹಿಸಿ ಮನರಂಜನೆ ನೀಡಲಿದೆ.

ಅಚ್ಚುಕಟ್ಟಾದ ದಸರಾ ವಸ್ತು ಪ್ರದರ್ಶನದ

ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಪ್ರತಿ ಬಾರಿಯೂ ಐತಿಹಾಸಿಕ ವಸ್ತು ಪ್ರದರ್ಶನದ ಬಗ್ಗೆ ಅವ್ಯವಸ್ಥೆ ಆರೋಪ ಕೇಳಿಬರುತ್ತಿತ್ತು. ಆರಂಂಭಕ್ಕೆ ಮುಂಚೆಯೇ ಮಳಿಗೆಯಿಲ್ಲದೆ ವಸ್ತು ಪ್ರದರ್ಶನ ಹೇಗೆ ಸಾಧ್ಯ ಎಂಬ ಕೂಗು ಇರುತ್ತಿತ್ತು. ಆದರೆ, ಈ ಬಾರಿ ದಸರಾ ಉತ್ಸವದಲ್ಲಿ ಎಲ್ಲ ಆರೋಪಗಳನ್ನೂ ಬದಿಗೊತ್ತಿ ಅದ್ಧೂರಿಯಾಗಿ, ಅಚ್ಚುಕಟ್ಟಾಗಿ ವಸ್ತುಪ್ರದರ್ಶನ ನಡೆಯುತ್ತಿದೆ.
ಪ್ರತಿವರ್ಷ ನಾಡಹಬ್ಬ ದಸರಾ ಉದ್ಘಾಟನೆ ದಿನದಂದು ವಸ್ತು ಪ್ರದರ್ಶನದಲ್ಲಿ  ಖಾಲಿ ಮಳಿಗೆಗಳು ಉದ್ಘಾಟನೆಯಾಗುತ್ತಿದ್ದವು. ಈ ಬಾರಿ ಸರ್ಕಾರಿ ಮಳಿಗೆಯೊಂದಿಗೆ ಖಾಸಗಿ ಮಳಿಗೆಗಳು ಕೂಡ ಉದ್ಘಾಟನೆಯಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಈವರೆಗೂ ದಸರಾ ಉತ್ಸವದ ಸಂದರ್ಭದಲ್ಲಿ ವಸ್ತು ಪ್ರದರ್ಶನದಲ್ಲಿ ಸರ್ಕಾರಿ  ಮಳಿಗೆಗಳು ಆರಂಭಗೊಳ್ಳದೆ ಸರ್ಕಾರಿ ಇಲಾಖೆಗಳು ಮಳಿಗೆ ತೆರೆಯಲು ಅನುದಾನ ಬಿಡುಗಡೆಯಾಗಿಲ್ಲ ಎಂದು ಕಾರಣ ನೀಡುತ್ತಿದ್ದರು. ಆದರೆ, ಈ ಬಾರಿ ಎಲ್ಲ ಸಮಸ್ಯೆಗಳೂ ಬಗೆಹರಿದಿದ್ದು, ಸರ್ಕಾರಿ ಮಳಿಗೆಗಳು ವಸ್ತು ಪ್ರದರ್ಶನದಲ್ಲಿ ಆರಂಭವಾಗಿವೆ. ಹಾಗಾಗಿ ವೆುಸೂರು ದಸರಾ ವಸ್ತು ಪ್ರದರ್ಶನಕ್ಕೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ವಸ್ತು ಪ್ರದರ್ಶನದಲ್ಲಿ ಗೃಹೋಪಯೋಗಿ ವಸ್ತುಗಳು ಹೆಚ್ಚು ಆಕರ್ಷಿತವಾಗಿದ್ದು, ಮಹಿಳಾ ಪ್ರವಾಸಿಗರನ್ನು ವಿಶೇಷವಾಗಿ ಸೆಳೆಯುತ್ತಿದೆ. ಈ ನಡುವೆ ವಿವಿಧ ಬಗೆಯ ತಿಂಡಿ-ತಿನಿಸುಗಳ ಮಾರಾಟ ಭರಾಟೆ ಜೋರಾಗಿ ನಡೆಯುತ್ತಿದೆ.
Share196Tweet123Send
Previous Post

ಹಾಸನಾಂಬೆ ದರ್ಶನಕ್ಕೆ ಪೂರ್ವ ತಯಾರಿ

Next Post

ಸೈನಿಕರ ಬಗ್ಗೆ ಕಾಂಗ್ರೆಸ್ ಉಡಾಫೆ; ಬಿಎಸ್ ವೈ ಕಿಡಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸೈನಿಕರ ಬಗ್ಗೆ ಕಾಂಗ್ರೆಸ್ ಉಡಾಫೆ; ಬಿಎಸ್ ವೈ ಕಿಡಿ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ನೈಋತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಅಂತರ್ ವಿಭಾಗ ನಾಟಕ ಸ್ಪರ್ಧೆ ಯಶಸ್ವಿ

ನೈಋತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಅಂತರ್ ವಿಭಾಗ ನಾಟಕ ಸ್ಪರ್ಧೆ ಯಶಸ್ವಿ

May 16, 2026
South Western Railway, Mysuru Division Hosts Inter Department Drama Competition

South Western Railway, Mysuru Division Hosts Inter Department Drama Competition

May 16, 2026
ನಾದಬ್ರಹ್ಮದ ಮಹೋತ್ಸವಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಆಹ್ವಾನ

ನಾದಬ್ರಹ್ಮದ ಮಹೋತ್ಸವಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಆಹ್ವಾನ

May 16, 2026
ಮೇ 17 ರಿಂದ ಅಧಿಕ ಮಾಸದ ಪ್ರವಚನ ಮಾಲಿಕೆ

ಮೇ 17 ರಿಂದ ಅಧಿಕ ಮಾಸದ ಪ್ರವಚನ ಮಾಲಿಕೆ

May 16, 2026
ಆಗುಂಬೆ | ವೃದ್ಧೆಯ ಕಟ್ಟಿಹಾಕಿ ರಾಬರಿ ಪ್ರಕರಣ | ನಾಲ್ವರು ಅಂದರ್, ಕದ್ದ ಮಾಲು ವಶಕ್ಕೆ

ಆಗುಂಬೆ | ವೃದ್ಧೆಯ ಕಟ್ಟಿಹಾಕಿ ರಾಬರಿ ಪ್ರಕರಣ | ನಾಲ್ವರು ಅಂದರ್, ಕದ್ದ ಮಾಲು ವಶಕ್ಕೆ

May 15, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL