ಕಲ್ಪ ಮೀಡಿಯಾ ಹೌಸ್
ನವದೆಹಲಿ: ಜಾಗತಿಕ ಮಟ್ಟದಲ್ಲಿ ಚೀನಾಕ್ಕೆ ಹೊಡೆತ ಕೊಡುವ ನಿಟ್ಟಿನಲ್ಲಿ ಭಾರತ ಪ್ರಮುಖ ಹಂತದಲ್ಲಿ ಸಜ್ಜಾಗುತ್ತಿದ್ದು, ಇದಕ್ಕಾಗಿ ನೋಯ್ಡಾ ಟಾಯ್ಸ್ ಹಬ್ ಆಗಿ ಹೊರಹೊಮ್ಮಿಸಲು ಮುನ್ನಡಿಯಿಡುತ್ತಿದೆ.
ಹೌದು… ಚೀನಾದ ಬೆಳೆಯುತ್ತಿರುವ ಆಟಿಕೆ ಉದ್ಯಮಕ್ಕೆ ಸವಾಲೊಡ್ಡುವ ಸಾಮರ್ಥ್ಯವನ್ನು ಪ್ರದರ್ಶಿಸಲು ಭಾರತಲ್ಲಿ ನೋಯ್ಡಾವನ್ನು ಟಾಯ್ಸ್ ಹಬ್ ಆಗಿ ರೂಪಿಸಲು ಸಕಲ ಸಿದ್ದತೆಗಳು ನಡೆದಿವೆ.
ನೋಯ್ಡಾದ ಟಾಯ್ ಪಾರ್ಕ್‌ನಲ್ಲಿ ಒಟ್ಟು 134 ಬೃಹತ್ ಕೈಗಾರಿಕೋದ್ಯಮಿಗಳು ತಮ್ಮ ಕಾರ್ಖಾನೆಗಳನ್ನು ಸ್ಥಾಪಿಸಲು ಭೂಮಿಯನ್ನು 410.13 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದ್ದಾರೆ.
ಯಮುನಾ ಎಕ್ಸ್ಪ್ರೆಸ್ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ (YEIDA) ವಕ್ತಾರರ ಪ್ರಕಾರ, ಆಟಿಕೆ ಕಾರ್ಖಾನೆಗಳು 6,157 ಜನರಿಗೆ ಶಾಶ್ವತ ಉದ್ಯೋಗಗಳನ್ನು ನೀಡುತ್ತವೆ.
ಕಳೆದ ವರ್ಷ ಜಾಗತಿಕ ಆಟಿಕೆ ವ್ಯವಹಾರದಲ್ಲಿ ದೇಶದ ಪಾಲನ್ನು ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದನ್ನು ಸ್ಮರಿಸಬಹುದು.
ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಅವರು ನೋಯ್ಡಾದಲ್ಲಿ ಟಾಯ್ ಪಾರ್ಕ್ ನಿರ್ಮಿಸಲು ನಿರ್ಧರಿಸಿದ್ದರು. ಈ ಉದ್ಯಮವನ್ನು ಉತ್ತೇಜಿಸಲು (YEIDA) ಪ್ರದೇಶದ ಸೆಕ್ಟರ್ 33 ರಲ್ಲಿ 100 ಎಕರೆ ಭೂಮಿಯನ್ನು ಮೀಸಲಿಡಲಾಗಿತ್ತು.
ಟಾಯ್ ಪಾರ್ಕ್ ನಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ಪ್ರಮುಖ ರಾಷ್ಟ್ರೀಯ ಕಂಪನಿಗಳು: ಫನ್ ಟಟೂ ಟಾಯ್ಸ್ ಇಂಡಿಯಾ, ಫನ್ ರೈಡ್ ಟಾಯ್ಸ್ ಎಲ್ ಎಲ್ ಪಿ, ಸೂರ್ಪ ಶೂಸ್, ಆಯುಷ್ ಟಾಯ್ ಮಾರ್ಕೆಟಿಂಗ್, ಸನ್ ಲಾರ್ಡ್ ಅಪರೆಲ್ಸ್, ಭಾರತ್ ಪ್ಲಾಸ್ಟಿಕ್, ಜೈ ಶ್ರೀ ಕೃಷ್ಣ, ಗಣಪತಿ ಕ್ರಿಯೇಷನ್ಸ್ ಮತ್ತು ಆರ್.ಆರ್.ಎಸ್ ಟ್ರೇಡರ್ಸ್.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post