ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೊರೋನಾ ಆತಂಕದ ನಡುವೆಯೇ ನಡೆದ ಎಸ್’ಎಸ್’ಎಲ್’ಸಿ ಪರೀಕ್ಷೆಯಲ್ಲಿ ನಗರದ ಪ್ರತಿಷ್ಠಿತ ಸಾಂದೀಪಿನಿ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಭಾರದ್ವಾಜ್ ಒಟ್ಟು-623 (ಸಂಸ್ಕೃತ-125, ಇಂಗ್ಲಿಷ್, ಕನ್ನಡ, ಗಣಿತ, ಸಮಾಜ ವಿಜ್ಞಾನ-100, ವಿಜ್ಞಾನ-98) ಅಂಕ ಗಳಿಸಿದ್ದಾರೆ.
ಇನ್ನು, ಮನಸ್ವಿ.ಜೆ ಎಂಬ ವಿದ್ಯಾರ್ಥಿ ಒಟ್ಟು 623 ಅಂಕ (ಕನ್ನಡ- ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ-100, ಸಮಾಜ ವಿಜ್ಞಾನ-98) ಗಳಿಸಿದ್ದಾರೆ.
ಶಾಲೆಯ ಒಟ್ಟು 21 ವಿದ್ಯಾರ್ಥಿಗಳು 600+, 23 ವಿದ್ಯಾರ್ಥಿಗಳು 563+ ಅಂಕ ಪಡೆದಿದ್ದಾರೆ. ಹಾಗೆಯೇ ಸಂಸ್ಕೃತ -06, ಕನ್ನಡ ಪ್ರಥಮ ಭಾಷೆ-13, ಇಂಗ್ಲಿಷ್-18, ಹಿಂದಿ-14, ಕನ್ನಡ ತೃತೀಯ ಭಾಷೆ-05, ವಿಜ್ಞಾನ-08, ಸಮಾಜ ವಿಜ್ಞಾನದಲ್ಲಿ-05 ವಿದ್ಯಾರ್ಥಿಗಳೂ ಸಂಪೂರ್ಣ ಅಂಕಗಳನ್ನು ಪಡೆದಿದ್ದಾರೆ.
ಶಾಲೆಯ ಎಲ್ಲ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗ ಅಭಿನಂದಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post