ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸಹ್ಯಾದ್ರಿ ವಿಜ್ಞಾನ, ವಾಣಿಜ್ಯ ಕಲಾ ಕಾಲೇಜಿನ ಪ್ರಾಧ್ಯಾಪಕರ ವೃಂದದಿಂದ ಸಹ್ಯಾದ್ರಿ ಕಾಲೇಜಿನಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಕಾರ್ಮಿಕ ವರ್ಗದವರಿಗೆ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ನೆರವು ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲರಾದ ಡಾ. ವಾಗ್ದೇವಿ ಎಚ್.ಎಂ ಹಾಗೂ ಡಾ. ವೀಣಾ ಎಂ.ಕೆ., ಕೋವಿಡ್ ಸಂಕಷ್ಟ ಕಾಲದಲ್ಲಿಯೂ ಅವರ ಕರ್ತವ್ಯ ಪ್ರಜ್ಞೆಯನ್ನು ಶ್ಲಾಘಿಸಲಾಯಿತು. ಕಾಲೇಜನ ಆವರಣದ ಸ್ವಚ್ಚತೆ ಕಾಪಾಡುವಲ್ಲಿ ಉದ್ಯಾನವನದಲ್ಲಿ ಕೆಲಸ ಮಾಡುವವರು. ಕಾವಲು ಕಾಯುವ ಸೆಕ್ಯೂರಿಟಿ ಗಾರ್ಡ್ಸ್, ಸ್ವಚ್ಚತಾ ಸಿಬ್ಬಂದಿಗಳ ನಿರಂತರ ಸೇವಾ ಭಾವವನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ಸಿಂಡಿಕೇಟ್ ಸದಸ್ಯ ಸಂತೋಷ್ ಬಳ್ಳಕೆರೆ, ರಮೇಶ್ ಬಾಬು, ಎನ್.ಎಸ್.ಎಸ್. ಸಂಯೋಜನಾಧಿಕಾರಿಗಳಾದ ಡಾ.ನಾಗರಾಜ ಪರಿಸರ, ಹಿರಿಯ ಪ್ರಾಧ್ಯಾಪಕರಾದ ಡಾ.ರಾಜೇಶ್ವರಿ, ಡಾ. ಅನಿತಾ, ಡಾ.ಲತಾ ಕೆ.ಪಿ., ಡಾ.ರಮೇಶ್ ಸಿ.ಕೆ, ಡಾ. ಪರಮೇಶ್ ನಾಯಕ್, ಡಾ.ಶ್ಯಾಮ ಸುಂದರ್, ಡಾ. ಎಂ.ಎಸ್. ಲೋಹರ್, ಡಾ. ಶಿವಮೂರ್ತಿ ಎ., ಪ್ರೊ.ರಮೇಶ್ ಬಾಬು, ಎಸ್ಟೇಟ್ ಆಫೀಸರ್ ಡಾ. ಪ್ರಹ್ಲಾದಪ್ಪ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಡಾ. ಶುಭಾ ಮರವಂತೆ, ಡಾ. ವೆಂಕಟೇಶ್ ಎಂ., ಡಾ. ಹಾ.ಮ. ನಾಗಾರ್ಜುನ., ಎನ್.ಸಿ.ಸಿ.ಯ ಡಾ. ಸುಬ್ರಹ್ಮಣ್ಯ ಮೊದಲಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post