ಕಲ್ಪ ಮೀಡಿಯಾ ಹೌಸ್
ನವದೆಹಲಿ: ಇಡಿಯ ಆಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ತಾಲಿಬಾನ್ ಉಗ್ರರಿಗೆ ಚಳ್ಳೆಹಣ್ಣು ತಿನ್ನಿಸಿ ಭಾರತೀಯರನ್ನು ರಕ್ಷಣೆ ಮಾಡಿರುವ ಕೇಂದ್ರ ಸರ್ಕಾರದ ಚಾಣಾಕ್ಷತನಕ್ಕೆ ವಿಶ್ವದಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ತಾಲಿಬಾನ್ ಉಗ್ರರು ಕಾಬೂಲ್ ಸೇರಿದಂತೆ ಆಫ್ಘಾನಿಸ್ತಾನವನ್ನು ವಶಪಡಿಕೊಂಡ ನಂತರ ಅಲ್ಲಿದ್ದ ಭಾರತೀಯರ ರಕ್ಷಣೆ ಕೇಂದ್ರ ಸರ್ಕಾರಕ್ಕೆ ಅತ್ಯಂತ ಮುಖ್ಯವಾಗಿತ್ತು. ಹೀಗಾಗಿ ಅಮೇರಿಕಾದಲ್ಲಿರುವ ಭಾರತದ ರಕ್ಷಣಾ ಸಚಿವ ಜೈಶಂಕರ್ ಹಾಗೂ ಭಾರತದ ಭದ್ರತಾ ಸಲಹೆಗಾರ ಅಜೀತ್ ದೋವಲ್ ಅವರುಗಳು ಕುಳಿತ ಜಾಗದಿಂದಲೇ ಮಾಸ್ಟರ್ ಪ್ಲಾನ್ ಹೆಣೆದು ತಾಲಿಬಾನಿಗಳ ಕಪಿಮುಷ್ಟಿಯಿಂದ ಭಾರತೀಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಬೂಲ್‌ನಲ್ಲಿದ್ದ ಭಾರತೀಯರನ್ನು ಅಮೇರಿಕಾ ವಾಯುಸೇನೆಯ ನೆರವಿನೊಂದಿಗೆ ಏರ್‌ಲಿಫ್ಟ್ ಮಾಡಲಾಯಿತು. ಇದಕ್ಕೂ ಮೊದಲು ಕಾಬೂಲ್‌ನಲ್ಲಿ 15 ಚೆಕ್‌ಪೋಸ್ಟ್ ದಾಟಿ ಸ್ಥಳೀಯರ ನೆರವಿನೊಂದಿಗೆ ಅತ್ಯಂತ ಸುರಕ್ಷಿತವಾಗಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ಭಾರತೀಯರನ್ನು ಕರೆತರಲಾಯಿತು.
ಉಗ್ರರು ನಿರ್ಮಿಸಿಕೊಂಡಿದ್ದ ಚೆಕ್‌ಪೋಸ್ಟ್ ದಾಟುವುದು ಅತ್ಯಂತ ಕಠಿಣವಾದ ಕೆಲಸವಾಗಿತ್ತು. ಹೀಗಾಗಿ 14 ಬುಲೆಟ್ ಪ್ರೂಫ್ ವಾಹನದಲ್ಲಿ ಶಸ್ತ್ರದಾರಿಗಳಾಗಿದ್ದ ಐಟಿಬಿಪಿ ಯೋಧರ ನೇತೃತ್ವದಲ್ಲಿ ರಕ್ಷಣಾ ಕವಚ ನಿರ್ಮಿಸಲಾಯಿತು. ಈ ವಾಹನದ ಹಿಂದೆ ಹಾಗೂ ಮುಂದೆ ಸ್ಥಳೀಯರೇ ಇರುವಂತೆ ನೋಡಿಕೊಂಡು ಉಗ್ರರನ್ನು ಯಾಮಾರಿಸಲಾಯಿತು. ಈ ಮೂಲಕ ಅತ್ಯಂತ ಸುರಕ್ಷಿತವಾಗಿ ಏರ್‌ಪೋರ್ಟ್ ತಲುಪಿದ ಕೆಲವೇ ಕ್ಷಣಗಳಲ್ಲಿ ಎಲ್ಲರನ್ನು ಏರ್‌ಲಿಫ್ಟ್ ಮಾಡಲಾಯಿತು.
ಅಲ್ಲಿಂದ ಹೊರಟ ಸೇನಾವಿಮಾನಕ್ಕೆ ಅಮೇರಿಕಾ ಯೋಧರು ರಕ್ಷಣೆ ನೀಡಿದ್ದು, ಭಾರತೀಯರನ್ನು ದೆಹಲಿ ತಲುಪಿಸುವಲ್ಲಿನ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿತ್ತು. ತಾಲಿಬಾನಿಗಳ ಕಪಿಮುಷ್ಟಿಯಿಂದ ಜನರನ್ನು ರಕ್ಷಿಸುವುದು ಅತ್ಯಂತ ಸವಾಲಿನ ಕೆಲಸ ಇಂತಹ ಸಂದರ್ಭದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿರುವ ಭಾರತದ ತಂತ್ರಗಾರಿಕೆಯನ್ನು ವಿಶ್ವದ ಪ್ರಮುಖ ರಾಷ್ಟ್ರಗಳು ಶ್ಲಾಘಿಸಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post