ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ದೇಶದಾದ್ಯಂತದ ಕೋವಿಡ್‌ನ ಮುಂಜಾಗರೂಕತಾ ಕ್ರಮವಾಗಿ ಈ ಬಾರಿಯ 77ನೇ ವರ್ಷದ ಗಣಪತಿ ಉತ್ಸವವು ಸರಳವಾಗಿ ಆಚರಿಸಬೇಕೆಂದು ಸಮಿತಿಯು ತೀರ್ಮಾನಿಸಿದೆ ಎಂದು ಹಿಂದೂ ಮಹಾಸಭಾ ಅಂಗಸಂಸ್ಥೆಯಾದ ಹಿಂದೂ ಸಂಘಟನಾ ಮಹಾಮಂಡಳಿ ತಿಳಿಸಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಸೆಪ್ಟೆಂಬರ್ 10ರ ಶುಕ್ರವಾರ ಚೌತಿಯಂದು ಮಹಾಗಣಪತಿಯನ್ನು ಪ್ರತಿಷ್ಠಾಪಿಸಲಿದ್ದು, ಈ ಬಾರಿ ಗಣಪತಿ ಉತ್ಸವದ ಆಚರಣೆಯಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಸಮಿತಿಯಿಂದ ಚಂದಾ ಸಂಗ್ರಹವೂ ಇರುವುದಿಲ್ಲ. ನಗರದ ಜನತೆಯ ಹಿತದೃಷ್ಠಿಯಿಂದ ರಾಜಬೀದಿ ಉತ್ಸವವನ್ನು ರದ್ದುಪಡಿಸುವ ತೀರ್ಮಾನವನ್ನು ಸಮಿತಿ ತೆಗೆದುಕೊಂಡಿದ್ದು ಭಕ್ತಾದಿಗಳು, ಅಭಿಮಾನಿಗಳು ಸಹಕರಿಸಬೇಕಾಗಿ ಸಮಿತಿ ಕೋರಿದೆ.
ಎಂ.ಕೆ. ಸುರೇಶ್ ಕುಮಾರ್‌ರವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಸಭೆಯಲ್ಲಿ ಪದಾಧಿಕಾರಿಗಳಾದ ಶ್ರೀಧರರಾವ್ ಸರಾಫ್, ದತ್ತಾತ್ರೇಯರಾವ್ ಎಸ್.ಎಂ. ಹಾಗೂ ನಿರ್ದೇಶಕರುಗಳಾದ ರಾಜಶೇಖರ ಅಲಸೆ, ಎ.ಎನ್. ಸತ್ಯನಾರಾಯಣ, ಶ್ರೀಪಾದರಾವ್, ನಿರಂಜನ, ಚೇತನ್ ಎಸ್, ಎಂ.ಆರ್. ಪ್ರಕಾಶ್, ಹರಿಗೆ ಗೋಪಾಲಸ್ವಾಮಿ, ಚಂದ್ರಶೇಖರ(ರಾಜು) ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post