ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೆಎಸ್‌ಎಸ್‌ಐಡಿಸಿಯ ಉಪಾಧ್ಯಕ್ಷ ಎಸ್. ದತ್ತಾತ್ರಿ ಅವರು ನಗರದ 23ನೇ ವಾರ್ಡ್ ನ ಬೂತ್ ಸಂಖ್ಯೆ 122 ಹಾಗೂ ಬೂತ್ ಸಂಖ್ಯೆ 246ಕ್ಕೆ ಭೇಟಿ ನೀಡಿ, 246ರ ಬೂತ್ ನ ಅಧ್ಯಕ್ಷ ಮಹೇಶ್ ಮತ್ತು 122ರ ಬೂತ್ ನ ಅಧ್ಯಕ್ಷ ಪಿ. ರವಿಕುಮಾರ್ ಅವರಿಗೆ ಅಭಿನಂದಿಸಿ ನಾಮಫಲಕ ಅನಾವರಣ ಮಾಡಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿಯು “ಕಾರ್ಯಕರ್ತರ ಪಕ್ಷ” ಎನ್ನುವುದು ನಮ್ಮೆಲ್ಲರಿಗೂ ಗೌರವದ ಸಂಗತಿಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೊತೆಗೆ ಪಕ್ಷದ ಸಂಪರ್ಕವನ್ನು ಸಾಧಿಸುವ ಬೂತ್ ಕಾರ್ಯಕರ್ತರ ಪರಿಶ್ರಮಗಳೇ ಸಂಘಟನೆಯ ಆಧಾರ. ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಒಂದು ವೈಶಿಷ್ಟ್ಯಪೂರ್ಣವಾದ ಯೋಜನೆಯಂತೆ ಬೂತ್ ಅಧ್ಯಕ್ಷರ ನಾಯಕತ್ವದ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಈ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಗರಾಧ್ಯಕ್ಷ ಜಗದೀಶ್, ಮಹಾನಗರ ಪಾಲಿಕೆಯ ಸದಸ್ಯರಾದ ಕಲ್ಪನಾ ರಮೇಶ್, ಜಿಲ್ಲಾ ಖಜಾಂಚಿ ರಾಮಣ್ಣ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಮತ್ತು ಮಹಾನಗರ ಪಾಲಿಕೆ ಸದಸ್ಯರಾದ ಪಿ. ಪ್ರಭಾಕರ್, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ಭಜರಂಗದಳದ ಮುಖಂಡರಾದ ಮಾಲತೇಶ್, ವಾರ್ಡ್ ಅಧ್ಯಕ್ಷರಾದ ಅಜಯ್ ಸೇರಿದಂತೆ ನಗರ ಸಮಿತಿ ಸದಸ್ಯರು ಬೂತ್ ನ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post