ಕಲ್ಪ ಮೀಡಿಯಾ ಹೌಸ್
ಚನ್ನಗಿರಿ: ಸದ್ಯದ ಕೋವಿಡ್ ಪರಿಸ್ಥಿತಿಯಲ್ಲಿ ಅವರವರ ಆಸಕ್ತಿಗೆ ಅನುಗುಣವಾದ ಹವ್ಯಾಸಗಳಿಂದ ಜನಜಂಗುಳಿಯಲ್ಲಿ ಬೆರೆಯದೇ ಇರಲು ಸಾಹಿತ್ಯ, ಸಂಗೀತದ ಅಭ್ಯಾಸ ಮನೆಯ ಆವರಣದಲ್ಲೇ ನಡೆಬೇಕಿದ್ದು, ಇಂತಹವುಗಳಕ್ಕೆ ಪೋಷಕವಾಗಿ ಭಜನಾ ಸಾಹಿತ್ಯವೂ ಪೂರಕವಾಗಿದೆ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ತಿರುಮಲ ರಾವ್ ಅಭಿಪ್ರಾಯಪಟ್ಟರು.
ಸಂಶೋಧಕ, ಲೇಖಕ ಸಂತೇಬೆನ್ನೂರು ಸುಮತೀಂದ್ರ ನಾಡಿಗರು ಸಂಗ್ರಹಿಸಿರುವ ಶ್ರೀರಾಮ ಭಜನಾ ಪುಸ್ತಕವನ್ನು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಇಂದಿನ ಕಾಲಘಟ್ಟ ಹಾಗೂ ಪರಿಸ್ಥಿತಿಯಲ್ಲಿ ಸಾಹಿತ್ಯ, ಸಂಗೀತದ ಅಭ್ಯಾಸ ಮನೆಯ ಆವರಣದಲ್ಲೇ ನಡೆಬೇಕಿದೆ. ಇದಕ್ಕೆ ಅಗತ್ಯವಾಗುವಂತೆ ಶ್ರೀರಾಮ ಭಜನೆ ಸಂಗ್ರಹವನ್ನು ಪುನಃ ಪ್ರಕಟಿಸಿ ಈ ಕೊರತೆ ನೀಗಿಸಿದ್ದಾರೆ. ನಾವೆಲ್ಲರೂ ಇದರ ಪ್ರಯೋಜನ ಪಡೆಯೋಣ ಎಂದರು.
ಶ್ರೀರಾಘವೇಂದ್ರ ಸೇವಾ ಟ್ರಸ್ಟಿನ ಅಧ್ಯಕ್ಷ ಶ್ರೀಕೃಷ್ಣ ಉಪಾಧ್ಯ ಮಾತನಾಡಿ, ಲೇಖಕ ಸುಮತೀಂದ್ರ ನಾಡಿಗರು ಪ್ರಸ್ತುತ ಭಜನಾ ಸಂಗ್ರಹ ಚನ್ನಗಿರಿ ಪ್ರದೇಶದ ಸುತ್ತಮುತ್ತಲ ಭಜನಾ ಕಾರ್ಯಕರ್ತರಿಗೆ ಅವಶ್ಯವಾಗಿ ಬೇಕಾಗಿತ್ತು. ಆದರೆ ಪ್ರತಿಗಳ ಕೊರತೆಯಿಂದಾಗಿ ಅವರೆಲ್ಲರ ಬೇಡಿಕೆಯಂತೆ ಮತ್ತಷ್ಟು ಭಜನೆ ಪದಗಳನ್ನು ಸೇರಿಸಿ ಮುದ್ರಣ ಮಾಡಿರುವುದಾಗಿ ಹೇಳಿದರು.
ಚನ್ನಗಿರಿಯ ಶ್ರೀ ರಾಘವೇಂದ್ರ ಸ್ವಾಮಿಗಳವರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಈ ಭಜನೆ ಪುಸ್ತಕ ಬಿಡುಗಡೆಯಾಗಿರುವುದು ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಟ್ರಸ್ಟಿನ ಸದಸ್ಯ ರಾಮಮೂರ್ತಿ, ಸಹೃದಯರಾದ ಪ್ರಕಾಶ್ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post