No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Saturday, October 3, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ಶಿವಮೊಗ್ಗದಲ್ಲಿ ಕಾರ್ಡಿಯಾಕ್ ಬೈಪಾಸ್ ಸರ್ಜರಿ ಸಿಗುವಂತೆ ಕ್ರಮ ವಹಿಸಿ | ಡಾ.ಧನಂಜಯ ಸರ್ಜಿ ಆಗ್ರಹ

ರಾಜ್ಯದಲ್ಲಿ ಹೆಚ್ಚುತ್ತಿರುವ ಹಠಾತ್ ಹೃದಯಾಘಾತ ಪ್ರಕರಣ : ಸದನದಲ್ಲಿ ಅಂಕಿಅಂಶ ಸಹಿತ ಧ್ವನಿ ಎತ್ತಿದ ಡಾ.ಸರ್ಜಿ

kalpa News by kalpa News
August 18, 2025
in ಬೆಂಗಳೂರು ನಗರ, ಶಿವಮೊಗ್ಗ
0
ಶಿವಮೊಗ್ಗದಲ್ಲಿ ಕಾರ್ಡಿಯಾಕ್ ಬೈಪಾಸ್ ಸರ್ಜರಿ ಸಿಗುವಂತೆ ಕ್ರಮ ವಹಿಸಿ | ಡಾ.ಧನಂಜಯ ಸರ್ಜಿ ಆಗ್ರಹ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಹೃದಯಾಘಾತವಾದಂತಹ ಸಂದರ್ಭದಲ್ಲಿ ಇ.ಸಿ.ಜಿ ಪರೀಕ್ಷೆ ಮಾಡಲಾಗುತ್ತದೆ. ಆದರೆ ಇ.ಸಿ.ಜಿ ಪರೀಕ್ಷೆಯಿಂದ ಸ್ಪಷ್ಟವಾಗಿ ದೃಢವಾಗುವುದಿಲ್ಲ, ಹೃದಯ ಸಂಬಂಧಿ ಕಾಯಿಲೆ ಇದ್ದು ಧೂಮಪಾನದ ಅಭ್ಯಾಸವಿದ್ದರೆ ಟಿ.ಎಂ.ಟಿ ಮಾಡಬೇಕು ಆದರೆ ರಾಜ್ಯದ ಯಾವ ತಾಲೂಕು ಆಸ್ಪತ್ರೆಯಲ್ಲೂ ಟಿ.ಎಂ.ಟಿ ವ್ಯವಸ್ಥೆ ಇಲ್ಲ. ಹೃದಯಾಘಾತದ ಲಕ್ಷಣ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನೂ ಗುರುತಿಸುವುದಕ್ಕೆ ಟ್ರೋಪೋನಿನ್ ಐ ಪರೀಕ್ಷೆ ಮಾಡಲಾಗುತ್ತದೆ ಆದರೆ ರಾಜ್ಯದ ಆದರೆ ಟ್ರೋಪೋನಿನ್ ಐ ರಾಜ್ಯದ ಯಾವ ತಾಲೂಕು ಆಸ್ಪತ್ರೆಯಲ್ಲಿ ಲಭ್ಯವಿಲ್ಲ ಎಂದು ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಸೋಮವಾರ ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡು ರಾವ್ ಅವರಿಗೆ ಹೇಳಿದರು.

ಆರೋಗ್ಯ ಸಚಿವರ ಉಲ್ಲೇಖದ ಪ್ರಕಾರ ರಾಜ್ಯದಲ್ಲಿ 2022ರಲ್ಲಿ 5,800 ಜನ, 2023ರಲ್ಲಿ 15,000 ಜನ, 2024 ರಿಂದ 2025 ರೊಳಗೆ 17,000 ಜನ ಕಾರ್ಡಿಯಾಕ್ ನಿಂದ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 61,299 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರ ವರದಿಯ ಪ್ರಕಾರ ಶೇ 60% ಧೂಮಪಾನದಿಂದ, ಡಯಾಬಿಟೀಸ್ ಶೇ 10%, ಒತ್ತಡದಿಂದ ಶೇ 10 %, ಬೊಜ್ಜಿನಿಂದ ಶೇ 10%, ತಂದೆ-ತಾಯಿಗಳಿಂದ ಶೇ 10 % ಎಂದು ವರದಿ ಹೇಳುತ್ತದೆ. ಈ ವರದಿಯನ್ನು ನೋಡಿದರೇ ಕೇವಲ ಇ.ಸಿ.ಜಿ ಯಿಂದ ಮಾತ್ರ ಹೃದಯಾಘಾತ ಇರುವುದು ದೃಢವಾಗುವುದಿಲ್ಲ. ಹೃದಯಘಾತವನ್ನು ಕಂಡುಹಿಡಿಯಲು ಉತ್ತಮ ಪರೀಕ್ಷೇ ಎಂದರೆ ಟಿ.ಎಂ.ಟಿ ಪರೀಕ್ಷೆ, ರಾಜ್ಯದ ಯಾವ ತಾಲೂಕು ಆಸ್ಪತ್ರೆಯಲ್ಲೂ ಟಿ.ಎಂ.ಟಿ ಪರೀಕ್ಷೆ ಲಭ್ಯವಿಲ್ಲ, ಟಿ.ಎಂ.ಟಿ ಪರೀಕ್ಷೆ ಮಾಡುವುದಕ್ಕೆ ಕಷ್ಟವಾದರೆ ಎಲ್ಲಿ ಕ್ಯಾತ್ ಲ್ಯಾಬ್ ವ್ಯವಸ್ಥೆ ಇದೆ ಆ ಸ್ಥಳಗಳಲ್ಲಿ ರಾಜ್ಯ ಸರ್ಕಾರ ಟಿ.ಎಂ.ಟಿ ಪರೀಕ್ಷೆಯನ್ನು ಆಯುಷ್ಮಾನ್ ಮತ್ತು ಎ.ಬಿ.ಆರ್.ಕೆ ಯೋಜನೆ ಅಡಿ ಉಚಿತವಾಗಿ ಮಾಡಲಿ ಎಂದು ಒತ್ತಾಯಿಸಿದರು.
ಹೃದಯಾಘಾತವನ್ನು ಕಂಡು ಹಿಡಿಯಲು ಇನ್ನೊಂದು ಉತ್ತಮ ಪರೀಕ್ಷೆ ಎಂದರೆ ಟ್ರೋಪೋನಿನ್ ಐ ಪರೀಕ್ಷೆ, ಟ್ರೋಪೋನಿನ್ ಐ ಎನ್ನುವುದು ಹೃದಯ ಸ್ನಾಯು ಮತ್ತು ಅಸ್ಥಿಪಂಜರದ ಸ್ನಾಯುಗಳಲ್ಲಿ ಕಂಡುಬರುವ ಒಂದು ಪ್ರೋಟೀನ್ ಅಂಶ, ಹೃದಯಾಘಾತದ ಸಂಧರ್ಭದಲ್ಲಿ ಈ ಪ್ರೋಟೀನ್ ಹೆಚ್ಚಾಗುತ್ತದೆ. ಹೃದಯಾಘಾತವಾದಾಗ ಅವರ ರಕ್ತದಲ್ಲಿ ಈ ಪ್ರೊಟೀನ್ ಪರೀಕ್ಷೆ ಮಾಡಬೇಕು, ಆ ಪ್ರೋಟೀನ್ ಹೆಚ್ಚಿದ್ದರೆ ಅವರಿಗೆ ಹೃದಯಾಘಾತ ಆಗಿದೆ ಎಂದು ದೃಢವಾಗುತ್ತದೆ. ಆದ್ದರಿಂದ ಟ್ರೋಪೋನಿನ್ ಐ ಪರೀಕ್ಷೆ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಲಭ್ಯವಿರುವ ವ್ಯವಸ್ಥೆಯನ್ನು ಸರ್ಕಾರ ಮತ್ತು ಆರೋಗ್ಯ ಇಲಾಖೆ ಮಾಡಬೇಕು ಎಂದರು.

ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಅಂತ ಹೃದಯಾಘಾತವಾದ ಸಂದರ್ಭದಲ್ಲಿ ಈ ಇಂಜೆಕ್ಷನ್ ನೀಡಿದರೆ ಪ್ರಾಣ ಉಳಿಸಬಹುದು, ಈ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಕೆಲವೊಂದು ತಾಲೂಕುಗಳಲ್ಲಿ ಮಾತ್ರ ಲಭ್ಯವಿದೆ. ಆದರಿಂದ ಯಾವ ಯಾವ ಜಿಲ್ಲೆಗಳಲ್ಲಿ ಸ್ಟಂಟ್ ಹಾಕುವ ವ್ಯವಸ್ಥೆ ಇಲ್ಲ ಉದಾಹರಣೆಗೆ ಹಾವೇರಿ, ಸಿರಸಿ ಮತ್ತು ಮಡಿಕೇರಿ ಚಾಮರಾಜನಗರ ಇಂತಹ ಜಿಲ್ಲೆಗಳಲ್ಲಿ ಸ್ಟಂಟ್ ಹಾಕುವ ವ್ಯವಸ್ಥೆ ಇಲ್ಲ ಅದಕ್ಕಾಗಿ ಈ ಎಲ್ಲ ತಾಲೂಕುಗಳಲ್ಲಿ ಈ ಇಂಜೆಕ್ಷನ್ ಸಿಗುವಂತೆ ಮಾಡಬೇಕು. ಹೃದಯಾಘಾತವದ ಶೇ 10 % ರೋಗಿಗಳಿಗೆ ಕಾರ್ಡಿಯಾಕ್ ಬೈ ಪಾಸ್ ಸರ್ಜರಿ ಮಾಡಬೇಕಾದ ಅವಶ್ಯಕತೆ ಇರುತ್ತದೆ. ಬೆಂಗಳೂರಿನ ಜಯದೇವ ಆಸ್ಪತ್ರೆ ಮತ್ತು ಗುಲ್ಬರ್ಗದಲ್ಲಿ ಮಾತ್ರ ಈ ವ್ಯವಸ್ಥೆ ಇದೆ, ಮಧ್ಯ ಕರ್ನಾಟಕದಿಂದ 500 ಕಿ ಮೀ ದೂರ ಈ ಚಿಕಿತ್ಸೆಗೆ ಹೋಗಬೇಕು. ಆದ್ದರಿಂದ ಮಧ್ಯ ಕರ್ನಾಟಕದಲ್ಲಿ ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ಕಾರ್ಡಿಯಾಕ್ ಬೈಪಾಸ್ ಸರ್ಜರಿ ಸಿಗುವಂತೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದರು.
ಯಾವ ಯಾವ ಜಿಲ್ಲೆಗಳಲ್ಲಿ ಕ್ಯಾತ್ ಲ್ಯಾಬ್ ವ್ಯವಸ್ಥೆ ಇಲ್ಲ ಉದಾಹರಣೆಗೆ ಚಾಮರಾಜನಗರ, ಚಿಕ್ಕಮಗಳೂರು, ಹಾವೇರಿ, ಶಿರಸಿ ಅದೇ ರೀತಿ ಯಾವ ಯಾವ ಜಿಲ್ಲೆಯಲ್ಲಿ ರೋಗಿಗಳು ಹೆಚ್ಚಿದ್ದಾರೆ. ಉದಾಹರಣೆಗೆ ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಿಗೆ ಕ್ಯಾತ್ ಲ್ಯಾಬ್ ವ್ಯವಸ್ಥೆ ಕಲ್ಪಿಸಬೇಕು ಅಥವಾ ಎಲ್ಲ ಸರ್ಕಾರೀ ಮೆಡಿಕಲ್ ಕಾಲೇಜು ಗಳಲ್ಲಿ ಈ ವ್ಯವಸ್ಥೆ ಸಿಗುವಂತೆ ವ್ಯವಸ್ಥೆ ಮಾಡಬೇಕು,

ಮುಂದುವರೆದು ಗ್ಯಾರಂಟೀ ಯೋಜನೆಗಳ ಜಾಹಿರಾತಿಗೆ ಸರ್ಕಾರ ಕೋಟಿಗಟ್ಟಲೆ ದುಡ್ಡನ್ನು ವ್ಯಯಿಸುತ್ತಿದೆ. ಅದರ ಬದಲಾಗಿ ಸರ್ಕಾರ ರಾಜ್ಯದಲ್ಲಿ ಹೃಧಯಾಘಾತ ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಜ್ಯದ ಪತ್ರಿಕೆಗಲ್ಲಿ, ಮಾಧ್ಯಮಗಳಲ್ಲಿ ಮತ್ತು ಸಿನಿಮಾ ಮಂದಿರಗಳಲ್ಲಿ ಜಾಹಿರಾತು ನೀಡಿ, ಆರೋಗ್ಯ ಜಾಗೃತಿ ಮೂಡಿಸಲಿ ಇದರಿಂದ ರಾಜ್ಯದ ಜನತೆಯ ಆರೋಗ್ಯ ಕಾಪಾಡಬಹುದು ಎಂದು ಒತ್ತಾಯಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡು ರಾವ್, ಆಯುಷ್ಮಾನ್ ಯೋಜನೆ ಅಡಿ ವೈದ್ಯಕೀಯ ವ್ಯವಸ್ಥೆಯನ್ನು ನೀಡಲು ಪ್ರಯತ್ನ ಮಾಡುತ್ತೇವೆ, ಟ್ರೋಪೋನಿನ್ ಐ ಪರೀಕ್ಷೆ ಎಲ್ಲ ಆಸ್ಪತ್ರೆಗಳಲ್ಲೂ ಸಿಗುವಂತೆ ಅವಕಾಶ ಮಾಡಿಕೊಡುತ್ತೇವೆ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ರಾಜ್ಯದ 86 ತಾಲೂಕು ಆಸ್ಫತ್ರೆಗಳಲ್ಲಿ ಲಭ್ಯವಿದೆ ಇದನ್ನು ಪ್ರತಿ ತಾಲೂಕಿನಲ್ಲಿ ಲಭ್ಯವಿರುವಂತೆ ವ್ಯವಸ್ಥೆ ಕಲ್ಪಿಸುತ್ತೇವೆ. ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ಅವರ ಜೊತೆಗೆ ಚರ್ಚೆ ನಡೆಸಿ ಎಲ್ಲೆಲ್ಲಿ ಕ್ಯಾತ್ ಲ್ಯಾಬ್ ವ್ಯವಸ್ಥೆ ಬೇಕಾಗುತ್ತದೆ ಅಲ್ಲಿ ಸಿಗುವಂತೆ ಮಾಡಿತ್ತೇವೆ ಎಂದರು. ಗೃಹ ಆರೋಗ್ಯ ಯೋಜನೆ ಅಡಿ ಹೃದಯ ಸಂಬಂಧಿ ಕಾಯಿಲೆ ಇರುವ ರೋಗಿಗಳನ್ನು ಪತ್ತೆ ಹಚ್ಚಲು ಮತ್ತು ಈ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸುತ್ತಿದೆ ಎಂದು ಹೇಳಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4

Tags: BangaloreKannada NewsKannada News LiveKannada News Online ShivamoggaKannada WebsiteKannadaNewsWebsiteLatest News KannadaLatestNewsKannadaLocalNewsMalnadNewsNews in KannadaNews KannadaShimogaShivamoggaNewsಬೆಂಗಳೂರುಮಲೆನಾಡು_ಸುದ್ಧಿಶಿವಮೊಗ್ಗ_ನ್ಯೂಸ್
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕುಂಭದ್ರೋಣ ಮಳೆ ಮುಂದುರಿಕೆ | ಶಿವಮೊಗ್ಗ ಸೇರಿ ಐದು ಜಿಲ್ಲೆಗಳಿಗೆ ರೆಡ್ ಅಲರ್ಟ್ | ಎಲ್ಲೆಲ್ಲಿ ವರುಣನ ಆರ್ಭಟ?

Next Post

ಮಹೇಶ್ ತಿಮರೋಡಿ ವಿರುದ್ಧ ಕ್ರಮಕ್ಕೆ ಗೃಹ ಸಚಿವ ಪರಮೇಶ್ವರ್ ಸೂಚನೆ | ಸಂಜೆಯೊಳಗೆ ಬಂಧನ?

kalpa News

kalpa News

Next Post
ಮಹೇಶ್ ತಿಮರೋಡಿ ವಿರುದ್ಧ ಕ್ರಮಕ್ಕೆ ಗೃಹ ಸಚಿವ ಪರಮೇಶ್ವರ್ ಸೂಚನೆ | ಸಂಜೆಯೊಳಗೆ ಬಂಧನ?

ಮಹೇಶ್ ತಿಮರೋಡಿ ವಿರುದ್ಧ ಕ್ರಮಕ್ಕೆ ಗೃಹ ಸಚಿವ ಪರಮೇಶ್ವರ್ ಸೂಚನೆ | ಸಂಜೆಯೊಳಗೆ ಬಂಧನ?

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL