ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಛಾಯಾಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸಿ ಲೆಕ್ಕವಿಲ್ಲದಷ್ಟು ಚಿನ್ನದ ಪದಕ ಗೆದ್ದಿರುವ, ಸಂಕೋಚದ ಸ್ವಭಾವದ ಅದ್ಭುತ ಛಾಯಾಗ್ರಾಹಕರ ಬಗ್ಗೆ ಒಂದು ಸಣ್ಣ ಪರಿಚಯ ಹೀಗಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಹೌದು… ಎಂ. ಮಹೇಶ್ವರಯ್ಯ ಹಿರಿಯ ಛಾಯಾಗ್ರಾಹಕರಾದ ಇವರು ಪ್ರಚಾರಕ್ಕೆ ಆಸೆ ಪಡದೇ ಎಲೆಮರೆಯ ಕಾಯಿಯಂತಿದ್ದಾರೆ. ಪ್ರತಿಷ್ಠಿತ ದೇಶಗಳ ಫೋಟೋಗ್ರಫಿ ಸಂಸ್ಥೆಗಳಿಂದ ಸುವರ್ಣ ಪದಕ ಹಾಗೂ ತೀರ್ಪುಗಾರರ ಮೆಚ್ಚಿಗೆ ಪಡೆದ ಹೆಮ್ಮೆಯ ಸಾಧಕ ಬಿರುದುಗಳಿಗೆ ಇವರು ಭಾಜನರಾಗಿದ್ದಾರೆ.
ಇತ್ತೀಚೆಗಷ್ಟೇ ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕದಿಂದ ಸುವರ್ಣಪದಕ ಪಡೆದಿರುವ ಮಹೇಶ್ವರಯ್ಯ ಅವರನ್ನು ಹಿರಿಯ ಚಿಂತಕ, ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಅಭಿನಂದಿಸಿ ಸಂದರ್ಶಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಳ್ಮೆ ಮತ್ತು ಪರಿಶ್ರಮದಿಂದ ಮಾತ್ರ ಉತ್ತಮ ಛಾಯಾಚಿತ್ರ ತೆಗೆಯಲು ಸಾಧ್ಯ. ಉತ್ತಮ ಗುಣಮಟ್ಟದ ಕ್ಯಾಮೆರಾ ಮತ್ತು ಲೆನ್ಸ್‌ಗಳಿಂದ ಒಳ್ಳೆಯ ಛಾಯಾಚಿತ್ರಗಳನ್ನು ಸೆರೆಹಿಡಿಯಲು ಸಹಾಯವಾಗುತ್ತದೆ. ಪ್ರಸ್ತುತ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಚ್ಚಿನ ಸಾಧನೆಗೆ ತೊಡಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಜಿಲ್ಲಾಧ್ಯಕ್ಷ ಡಾ.ಸುಧೀಂದ್ರ ಹಾಗೂ ಸಿಹಿಮೊಗೆ ಸಂಯುಕ್ತ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಕೆ. ಜಿ. ಮಂಜುನಾಥ ಶರ್ಮ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post