ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ತಾಲ್ಲೂಕು ಗೌರಸಮುದ್ರ ಮಾರಮ್ಮ ದೇವಸ್ಥಾನದಲ್ಲಿ ಹುಂಡಿ ಎಣಿಕೆಯು ತಹಶೀಲ್ದಾರ್ ಎನ್. ರಘುಮೂರ್ತಿ ನೇತೃತ್ವದಲ್ಲಿ ನಡೆಯಿತು. ಈ ಹುಂಡಿಯಲ್ಲಿ 2,30,599 ರೂ.ಗಳು ಸಂಗ್ರಹವಾಗಿತ್ತು.


ಇದೇ ಸೆ.13 ರಿಂದ 15ರವರೆಗೆ ಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆಯ ಸರಳವಾಗಿ ನಡೆಯಲಿದ್ದು, ಇಂದು ಗೌರಸಮುದ್ರ ಮಾರಮ್ಮ ದೇವಿಯ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು, ಗೌರಸಮುದ್ರ ಮಾರಮ್ಮ ದೇವಿಯ ಹುಂಡಿಯಲ್ಲಿ ಒಟ್ಟು 2.30,599 ರೂಗಳು ಸಂಗ್ರಹವಾಗಿದೆ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ತಿಳಿಸಿದ್ದಾರೆ.



ಈ ವೇಳೆ ಮೊಳಕಾಲ್ಮೂರು ಸಿಪಿಐ ರಮಾಕಾಂತ್, ಕಂದಾಯ ಅಧಿಕಾರಿ ರಫೀ, ರೈತಮುಖಂಡ ಕೆ.ಪಿ,ಭೂತಯ್ಯ ಹಾಗೂ ಗ್ರಾಮಸ್ಥರು ಇದ್ದರು.

ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















