ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಹಳೇನಗರ ವೀರಶ್ಯೆವ ಸೇವಾ ಸಮಿತಿಯ ಆಶ್ರಯದಲ್ಲಿ ಇಂದು ಪುರಾತನ ಕಾಲದ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ಜಯಂತೋತ್ಸವ ಪ್ರಯುಕ್ತ ವಿಶೇಷ ಪೊಜೆಯೊಂದಿಗೆ ರುದ್ರಾಭೀಷೆಕವನ್ನು ಏರ್ಪಡಿಸಲಾಗಿತ್ತು.
ಸಮಿತಿಯ ಅಧ್ಯಕ್ಷ ಆರ್. ಮಹೇಶ ಕುಮಾರ್ ಮಾತನಾಡಿ, ಹಲವು ಮಠಾಧೀಶರು ಹಾಗೂ ವೀರಶೈವ ಸಂಘಟನೆಗಳ ವಿನಂತಿಯಂತೆ ಇನ್ನು ಮುಂದೆ ಸಮಿತಿಯ ಆಶ್ರಯದಲ್ಲಿ ಪ್ರತಿ ವರ್ಷವೂ ಅತಿ ವಿಜೃಂಭಣೆಯಿಂದ ಆಚರಿಸುವುದರೊಂದಿಗೆ ತಾಲೂಕು ಮಟ್ಟದಲ್ಲಿ ವೀರಗಾಸೆಯ ಸ್ಪರ್ಧೆಯನ್ನು ಹಮ್ಮಿಕೊಳ್ಳುವ ಮೂಲಕ ವೀರಗಾಸೆ ಕಲಾವಿದರಿಗೆ ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆರ್. ಮಹೇಶ ಕುಮಾರ್, ಚಿನ್ನಯ್ಯ ಹಿರೇಮಠ, ಶಂಕರಯ್ಯ ಶಾಸ್ತ್ರಿ, ಸಿ.ಎಂ. ಮಹೇಶ್ವರ ಮೂರ್ತಿ ಈ ಪೂಜೆಯ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಂಗಮ ಸಂಘದ ಆದ್ಯಕ್ಷ ಅಡವೀಶಯ್ಯ, ಜೆ. ಶಿವಕುಮಾರ, ಎಂ. ವಾಗೀಶ ಕೋಠಿ, ಚಂದ್ರಶೇಖರ ಕೆಇಬಿ, ಪಿ.ಹೆಚ್. ಜಗದೀಶ, ಜಿ.ಆರ್. ಸತೀಶ, ಅನುಪಮ ಚನ್ನೇಶ, ವಿ.ಟಿ.ನಾಗರತ್ನ, ಆರ್.ಎಸ್. ಶೋಭ, ರೂಪ, ಪ್ರಕಾಶ ಆರ್‌ಎಮ್‌ಸಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post