ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಲಯನ್ಸ್ ಕ್ಲಬ್ ಬಿ.ಆರ್. ಪ್ರಾಜೆಕ್ಟ್ ವತಿಯಿಂದ ಲಕ್ಕವಳ್ಳಿಯ ಶ್ರೀಮಹಾಗಣಪತಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಬೆಂಗಳೂರಿನ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ನಿರ್ದೇಶಕ ಡಾ. ಕೆ.ಪಿ. ಪುತ್ತೂರಾಯ ಉದ್ಘಾಟಿಸಿದರು.
ಸಾರ್ಥಕ ಜೀವನ ನಡೆಸುವುದು ಹೇಗೆ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ನೆರೆದಿದ್ದವರನ್ನು ತಮ್ಮ ಹಾಸ್ಯದ ಮೂಲಕ ರಂಜಿಸಿದರು.
ಈ ಸಂದರ್ಭದಲ್ಲಿ ಕ್ಲಬ್‌ನ ಅಧ್ಯಕ್ಷ ಲಯನ್ ಮಹೇಶ್, ಕಾರ್ಯದರ್ಶಿ ಜೆ.ಬಿ. ತಮ್ಮಣ್ಣ, ಖಜಾಂಚಿ ಅರವಿಂದ್, ಸ್ವರೂಪ್ ಜೈನ್, ಹೆಬ್ಬಂಡಿ ನಾಗರಾಜ್, ವೀರಭದ್ರಪ್ಪ, ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ, ಕ್ಲಬ್‌ನ ಸದಸ್ಯರು, ಸಿಬ್ಬಂದಿಗಳು ಮತ್ತು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
ನಂತರ ಪುತ್ತೂರಾಯರು ಭದ್ರಾ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಕೆಲವು ಸಮಯ ಕಳೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post