No Result
View All Result
Minister Somanna Inspects & Inaugurates Road Under Bridges in Tumkur District eliminating level Crossing gates
English Articles

Minister Somanna Inspects & Inaugurates Road Under Bridges in Tumkur District eliminating level Crossing gates

by ಕಲ್ಪ ನ್ಯೂಸ್
February 26, 2026
0

Kalpa Media House  |  Bengaluru  | Union Minister of State for Railways and Jal Shakti, V. Somanna, today inaugurated three...

Read moreDetails
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
Amazon Opens Its Second Largest Office in Asia in Bengaluru

Amazon Opens Its Second Largest Office in Asia in Bengaluru

February 24, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

SWR Opens Makajipalli–Dharmavaram Double Line Project

February 23, 2026
  • Advertise With Us
  • Grievances
  • About Us
  • Contact Us
Thursday, February 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ: ರಕ್ತದಾನದ ಜಾಗೃತಿ ಅಭಿಯಾನ ಹೆಚ್ಚಲಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 1, 2021
in Special Articles
0
ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ: ರಕ್ತದಾನದ ಜಾಗೃತಿ ಅಭಿಯಾನ ಹೆಚ್ಚಲಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಅಕ್ಟೋಬರ್ 1: ಪ್ರತಿ ವರ್ಷ ಆಚರಿಸಲಾಗುವ ಸ್ವಯಂಪ್ರೇರಿತ ರಕ್ತದಾನಿಗಳ ದಿನ.

ಭಾರತದಲ್ಲಿ ವರ್ಗಾವಣೆ ಔಷಧದ ಪಿತಾಮಹ ಎಂದು ಪರಿಗಣಿಸಲಾಗಿರುವ ಭಾರತೀಯ ವೈದ್ಯರೊಬ್ಬರು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಕ್ತದ ವರ್ಗಾವಣೆ ಕುರಿತಾಗಿ ಮಾಡಿರುವ ಸಂಶೋಧನೆ ಹಾಗೂ ಭಾರತದಲ್ಲಿ ಪ್ರಥಮ ಬಾರಿಗೆ ಟ್ರಾನ್ಸ್ಫ್ಯೂಷನ್ ಮೆಡಿಸಿನ್’ನಲ್ಲಿ ಸ್ನಾತಕೋತ್ತರ ಪದವಿಗಳನ್ನು ಪರಿಚಯಿಸಿ ರಕ್ತನಿಧಿ ಎಂದು ಕರೆಸಿಕೊಳ್ಳುವ ಬ್ಲಡ್ ಬ್ಯಾಂಕ್’ಗಳ ಹುಟ್ಟಿಗೆ ಕಾರಣಕರ್ತರೆನಿಸಿ, ಸಾರ್ವಜನಿಕರಲ್ಲಿ ರಕ್ತದಾನ ಕುರಿತು ಇದ್ದ ಮಿಥ್ಯಗಳನ್ನು ನಿವಾರಿಸಿ ಜಾಗೃತಿ ಮೂಡಿಸುವಲ್ಲಿ ಶ್ರಮ ವಹಿಸಿ, ಅವರು ಭಾರತಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸುವ ಸಂಪ್ರದಾಯದ ಭಾಗವಾಗಿ ಈ ದಿನವನ್ನು 1975 ರಿಂದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾರತದಲ್ಲಿ ರಕ್ತವು ಮಾರುವ ಅಥವಾ ಕೊಳ್ಳುವ ಒಂದು ವಸ್ತುವಲ್ಲ ಎಂದು ಪ್ರತಿಪಾದಿಸಿ ಈ ಅಂಶಗಳನ್ನು ಭಾರತ ಸರ್ಕಾರವು ಭಾರತದ ರಾಷ್ಟ್ರೀಯ ರಕ್ತ ನೀತಿಗೆ ಸೇರಿಸುವಲ್ಲಿ ಅಪಾರ ಶ್ರಮ ವಹಿಸಿದ ಡಾ.ಜೈಗೋಪಾಲ್ ಜಾಲಿಯವರ ಜನ್ಮದಿನವನ್ನು ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನಿಗಳ ದಿನವನ್ನಾಗಿ ಆಚರಿಸಿ ಅವರ ಕೊಡುಗೆಯನ್ನು ಭಾರತ ಸರ್ಕಾರವು ಸ್ಮರಿಸುತ್ತಿದೆ.


ನಮ್ಮ ಶಿವಮೊಗ್ಗದ ಇತಿಹಾಸವನ್ನು ಶೋಧಿಸಿದರೆ, ನಗರದ ಜೆಪಿಎನ್ ರಸ್ತೆಯಲ್ಲಿದ್ದ ವೆಲ್ಡನ್ ಲ್ಯಾಬೊರೇಟೊರಿಯು ದಾನಿಗಳ ರಕ್ತದ ಸ್ಯಾಂಪಲ್ ಪಡೆದು ಗುಂಪನ್ನು ಪತ್ತೆ ಹಚ್ಚಿ ನಂತರ ವಿವಿಧ ಅಗತ್ಯ ಪರೀಕ್ಷೆಗಳನ್ನು ನಡೆಸಿ, ರಕ್ತವನ್ನು ಪಡೆಯಲು ಯೋಗ್ಯವೆಂದು ಖಾತ್ರಿಯಾದ ಮೇಲಷ್ಟೇ ದಾನಿಗಳಿಂದ ರಕ್ತ ಪಡೆದು ಅಗತ್ಯವಿದ್ದವರಿಗೆ ನೀಡುವ ಹೊತ್ತಿಗೆ ಅರ್ಧ ದಿನ ಕಳೆದು ಹೋಗಿರುತ್ತಿತ್ತು.

ರಕ್ತ ಸಂಗ್ರಹ ಮಾಡಲು ಅಗತ್ಯ ಯಂತ್ರೋಪಕರಣಗಳು ಇಲ್ಲದಿದ್ದ ಆ ಸಮಯದಲ್ಲಿ ವೆಲ್ಡನ್ ಲ್ಯಾಬಿನ ಅಂದಿನ ಸೇವೆ ಅತೀ ಮಹತ್ವದ್ದಾಗಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ. 1997ರಲ್ಲಿ ಅಂತಾರಾಷ್ಟ್ರೀಯ ರೋಟರಿ ಸೇವಾ ಸಂಸ್ಥೆಯ ಭಾಗವಾದ ಶಿವಮೊಗ್ಗದ ರೋಟರಿ ಮಿಡ್ ಟೌನ್ ಸಂಸ್ಥೆಯ ಆಸಕ್ತಿಯ ಫಲವಾಗಿ ರೋಟರಿ ಬ್ಲಡ್ ಬ್ಯಾಂಕ್ ಸ್ಥಾಪನೆಗೊಂಡು ಅಂದಿನಿಂದ ಇಂದಿನವರೆಗೂ ಎಡಬಿಡದೇ ಕಾರ್ಯನಿರ್ವಹಿಸುತ್ತಾ ಲಕ್ಷಾಂತರ ಜನರ ಪ್ರಾಣ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವುದು ಶಿವಮೊಗ್ಗದ ಜನರಿಗೆ ಅರಿಯದ ವಿಷಯವೇನಲ್ಲ. ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಶಿವಮೊಗ್ಗದ ಶಾಖೆಯಾದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶಿವಮೊಗ್ಗ 2006ರಲ್ಲಿ ಪ್ರಾರಂಭಗೊಂಡು ನಿರಂತರ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ ರಕ್ತದಾನ ಕುರಿತಾಗಿ ಜಾಗೃತಿ ಮೂಡಿಸುತ್ತ ರಕ್ತದಾನದ ಮಹತ್ವವನ್ನು ಸಾರುತ್ತಿದೆ. ಅಷ್ಟೇ ಅಲ್ಲದೇ ಶಾಲಾ ಮಕ್ಕಳಿಗೆ ರಕ್ತದ ಗುಂಪು ಪತ್ತೆ ಹಚ್ಚುವ ಶಿಬಿರಗಳನ್ನು ಆಯಾ ಶಾಲೆಗಳ ಮುಖ್ಯೋಪಾಧ್ಯಾಯರ ವಿನಂತಿಯ ಮೇರೆಗೆ ಉಚಿತವಾಗಿ ನಡೆಸಿಕೊಡುತ್ತಾ ಶಾಲಾ ಮಕ್ಕಳಲ್ಲಿ ರಕ್ತದಾನದ ಮಹತ್ವವನ್ನು ತಿಳಿಸಿಕೊಡುವಲ್ಲಿ ಯಶಸ್ವಿಯಾಗಿದೆ.ಇತ್ತೀಚೆಗೆ ವಿಶ್ವವು ಎದುರಿಸಿದ ಭೀಕರ ಕೊರೋನಾಘಾತದಲ್ಲಿಯೂ ರಕ್ತದಾನ ಸೇವಾ ಸಂಸ್ಥೆಗಳು ಹೆಚ್ಚು ಹೆಚ್ಚು ರಕ್ತ ಸಂಗ್ರಹಣೆಗೆ ಒತ್ತು ನೀಡಿದ್ದವಾದರೂ ಸಾರ್ವಜನಿಕರಲ್ಲಿ ಉಂಟಾಗಿದ್ದ ಕೊರೋನಾ ಭಯದಿಂದ ಒಂದಷ್ಟು ಹಿನ್ನಡೆ ಅನುಭವಿಸಬೇಕಾಗಿ ಬಂದು ರೋಗಿಗಳು ತಮ್ಮ ರಕ್ತದ ಅವಶ್ಯಕತೆಗೆ ಪರದಾಡಿದ್ದನ್ನು ಮನಗಂಡು ದಾಳಿಗಳಲ್ಲಿ ವಿಶೇಷ ಮನವಿ ಮಾಡಿ ರಕ್ತನಿಧಿ ಕೇಂದ್ರಗಳಿಗೆ ಬರುವಂತೆ ಪ್ರೇರೇಪಣೆ ನೀಡಿ ಸಾಕಷ್ಟು ಜೀವಗಳನ್ನು ಉಳಿಸಿದ ತೃಪ್ತಿ ತಮಗಿದೆ ಎನ್ನುತ್ತಾರೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶಿವಮೊಗ್ಗದ ಮುಖ್ಯಸ್ಥರಾದ ಧರಣೇಂದ್ರ ದಿನಕರ್. ಯುವ ಸಮುದಾಯದಲ್ಲಿ ರಕ್ತದಾನದ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ ಎನ್ನುತ್ತಾರೆ.

ಪ್ರಸ್ತುತ ರೋಟರಿ ಬ್ಲಡ್ ಬ್ಯಾಂಕ್ ಶಾಖೆಯಲ್ಲಿ ಪ್ರತಿ ತಿಂಗಳಿಗೆ ಅಂದಾಜು 900 ಯೂನಿಟ್ ಸಂಗ್ರಹವಾಗುತ್ತಿದ್ದು ರೆಡ್ ಕ್ರಾಸ್ ಶಿವಮೊಗ್ಗದಲ್ಲಿ ಅಂದಾಜ 700 ಯೂನಿಟ್ ಪ್ರತಿ ತಿಂಗಳಿಗೆ ಸಂಗ್ರಹವಾಗುತ್ತಿದೆ. ಇನ್ನುಳಿದಂತೆ ನಗರದ ಮೆಗಾನ್ ಆಸ್ಪತ್ರೆಯ ರಕ್ತನಿಧಿಯಲ್ಲಿ ಸುಮಾರು ಒಂದು ಸಾವಿರ ಯೂನಿಟ್’ಗಳಷ್ಟು ಸಂಗ್ರಹವಾದರೆ ಇತರೆ ಆಸ್ಪತ್ರೆಗಳಲ್ಲಿ ಒಂದು ಸಾವಿರ ಯೂನಿಟ್’ಗಳಷ್ಟು ಸಂಗ್ರಹ ಸೇರಿ ಶಿವಮೊಗ್ಗದ ಒಟ್ಟಾರೆ ರಕ್ತದ ಯೂನಿಟ್ ಸಂಗ್ರಹ ಸಾಮರ್ಥ್ಯವು ಪ್ರತಿ ತಿಂಗಳಿಗೆ ಸುಮಾರು 3500 ದಿಂದ 4000 ಎಂದು ಅಂದಾಜಿಸಬಹುದು. ಆದರೂ ಈ ಸಂಖ್ಯೆಯು ಶಿವಮೊಗ್ಗದ ಒಟ್ಟು ಅಗತ್ಯಕ್ಕಿಂದ ಕಡಿಮೆ ಎನ್ನುವುದು ಗಮನಿಸಬೇಕಾದ ಬಹುಮುಖ್ಯ ಅಂಶ. ಈ ನಿಟ್ಟಿನಲ್ಲಿ ಎನ್’ಎಸ್’ಎಸ್, ಎನ್’ಸಿಸಿ, ಯಂಗ್ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್, ಎಲ್ಲಾ ಕಾಲೇಜುಗಳ ಪ್ರತಿನಿಧಿಗಳು, ಯುವಜನರು ಸಕ್ರಿಯರಾಗಿ ತಾವೂ ರಕ್ತದಾನ ಮಾಡಿ ಇತರರಿಗೂ ಪ್ರೇರಣೆ ನೀಡುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯಬೇಕಿದೆ.ಇತ್ತೀಚೆಗೆ ಯುವಜನರು ಹುಟ್ಟು ಹಬ್ಬಗಳಂದು, ವಿವಾಹ ಮಹೋತ್ಸವದಂದು ಹಾಗೂ ಇತರೆ ವಿಶೇಷ ದಿನಗಳಂದು ರಕ್ತದಾನ ಮಾಡುವ ಹವ್ಯಾಸ ಬೆಳೆಯುತ್ತಿದ್ದು ಜಾಗೃತಿ ಮೂಡಿಸುವಲ್ಲಿ ಪರಿಣಾಮಕಾರಿಯಾಗಿದೆ. ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ ರಕ್ತದಾನದ ಬಗ್ಗೆ ಅತಿ ಹೆಚ್ಚು ಜಾಗೃತಿಯ ಅಗತ್ಯವಿದ್ದು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನದಿಂದ ಆರೋಗ್ಯ ವೃದ್ದಿಸುವುದಲ್ಲದೇ ದೇಹದಲ್ಲಿ ಹೊಸ ರಕ್ತಕಣಗಳ ಉತ್ಪಾದನೆಯು ಹೆಚ್ಚು ಲವಲವಿಕೆಯಿಂದಿರಲು ಸಹಾಯಕಾರಿಯಾಗುತ್ತದೆ ಎಂಬ ವೈದ್ಯರ ಅಭಿಪ್ರಾಯವನ್ನು ನಾವುಗಳು ಅರಿಯಬೇಕಿದೆ. ಪ್ರತಿ ರಕ್ತದಾನವು ಒಂದೊಂದು ಜೀವವನ್ನು ಉಳಿಸಬಲ್ಲದು ಎಂದಾದರೆ ಮನುಷ್ಯನ ಜೀವಿತಾವಧಿಯಲ್ಲಿ ಅದೆಷ್ಟು ಜೀವಗಳನ್ನು ಉಳಿಸಬಲ್ಲೆವು ಅಲ್ಲವೇ? ಬನ್ನಿ ಕಾರ್ಯಪ್ರವೃತ್ತರಾಗೋಣ…

ರಕ್ತದಾನ ಶಿಬಿರಗಳನ್ನು ಆಯೋಜಿಸಲು, ಶಾಲಾ ಮಕ್ಕಳಿಗೆ ರಕ್ತದ ಗುಂಪು ಪತ್ತೆ ಹಚ್ಚುವ ಶಿಬಿರಗಳು ಮತ್ತಿತರ ರಕ್ತದಾನದ ಯಾವುದೇ ಮಾಹಿತಿಗಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶಿವಮೊಗ್ಗದ ಶ್ರೀಧರಣೇಂದ್ರ ದಿನಕರ್ ಇವರನ್ನು ಸಂಪರ್ಕಿಸಬಹುದಾಗಿದೆ. ಇವರ ಮೊಬೈಲ್ ಸಂಖ್ಯೆ: 9481210866.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Blood DonationBlood GroupKannada News WebsiteLatest News KannadaLocal NewsMalnad NewsNagaraj ShetterNational Voluntary Blood Donors Dayರಕ್ತದಾನರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆರೋಟರಿ ಮಿಡ್ ಟೌನ್ಶಿವಮೊಗ್ಗ
Share201Tweet123Send
Previous Post

ಸಾಗರ: ಹಾವು ಕಡಿದು ಬಾಲಕಿ ಸಾವು…

Next Post

ದೆಹಲಿಯಲ್ಲಿನ ಪ್ರತಿಭಟನಾಕಾರ ರೈತರಿಗೆ ಸುಪ್ರೀಂ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದು ಯಾಕೆ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ದೆಹಲಿಯಲ್ಲಿನ ಪ್ರತಿಭಟನಾಕಾರ ರೈತರಿಗೆ ಸುಪ್ರೀಂ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದು ಯಾಕೆ?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಮನೆ ನಿರ್ಮಾಣ ಸಾಮಗ್ರಿ ಕಳ್ಳತನ | ಓರ್ವನ ಬಂಧನ

ಮನೆ ನಿರ್ಮಾಣ ಸಾಮಗ್ರಿ ಕಳ್ಳತನ | ಓರ್ವನ ಬಂಧನ

February 26, 2026
Minister Somanna Inspects & Inaugurates Road Under Bridges in Tumkur District eliminating level Crossing gates

Minister Somanna Inspects & Inaugurates Road Under Bridges in Tumkur District eliminating level Crossing gates

February 26, 2026
ಟಿಕೆಟ್ ಟು ಹಾಲಿವುಡ್ | ಬೆಂಗಳೂರಿನ 2026ರ ಅತಿದೊಡ್ಡ ಹೋಳಿ ಸಂಭ್ರಮದ ಟಿಕೆಟ್‌ಗಳು ಈಗ ಬುಕ್‌ಮೈಶೋನಲ್ಲಿ!

ಟಿಕೆಟ್ ಟು ಹಾಲಿವುಡ್ | ಬೆಂಗಳೂರಿನ 2026ರ ಅತಿದೊಡ್ಡ ಹೋಳಿ ಸಂಭ್ರಮದ ಟಿಕೆಟ್‌ಗಳು ಈಗ ಬುಕ್‌ಮೈಶೋನಲ್ಲಿ!

February 26, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ | ಅತ್ಯಂತ ಕಠಿಣ ಶಿಕ್ಷೆಗೆ ಸಂಸದ ರಾಘವೇಂದ್ರ ಆಗ್ರಹ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ | ಅತ್ಯಂತ ಕಠಿಣ ಶಿಕ್ಷೆಗೆ ಸಂಸದ ರಾಘವೇಂದ್ರ ಆಗ್ರಹ

February 26, 2026
ಸುಸ್ಥಿರ ಕೃಷಿಗೆ ಜೇನು ಸಾಕಾಣೆ ಸಹಕಾರಿ: ಗೌತಮ ಬಿಚ್ಚುಗತ್ತಿ

ಸುಸ್ಥಿರ ಕೃಷಿಗೆ ಜೇನು ಸಾಕಾಣೆ ಸಹಕಾರಿ: ಗೌತಮ ಬಿಚ್ಚುಗತ್ತಿ

February 26, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL