ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹೊಸಮನೆ ರಾಜಕಾಲುವೆ ತುಂಬಿ ಮನೆಗಳಿಗೆ ನೀರು ನುಗ್ಗಿದ್ದು, ಶಿವಮೊಗ್ಗ ಗ್ಯಾಸ್ ಏಜೆನ್ಸಿ ಹಿಂಭಾಗದ ರಸ್ತೆಗಳು ಸೇರಿದಂತೆ ಸುಮಾರು 70 ಮನೆಗಳು ಜಲಾವೃತವಾಗಿದೆ.
ಹೊಳೆ ಬಸ್ ನಿಲ್ದಾಣದ ಬಳಿ ರಾಜೀವ್ ಗಾಂಧಿ ಬಡಾವಣೆ ಹತ್ತಿರ ತುಂಗಾ ನದಿಯಲ್ಲಿ ಕಾಲು ಜಾರಿ ಬಿದ್ದು, ವೃದ್ಧ ಸಾವನ್ನಪ್ಪಿದ ಘಟನೆ ನಡೆದಿದ್ದು, ಸ್ವಲ್ಪ ದೂರದಲ್ಲೇ ಮೃತದೇಹ ಪತ್ತೆಯಾಗಿದೆ.
ಕೋಟೆ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ವೃದ್ಧನ ಗುರುತು ತಿಳಿದುಬಂದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post