ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕು ಭಾರತೀಯ ಜನತಾ ಪಕ್ಷದ ವತಿಯಿಂದ ನಡೆದ ಸೇವಾ ಮತ್ತು ಸಮರ್ಪಣಾ ಕಾರ್ಯಕ್ರಮದ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಪಂಜಿನ ಮೆರವಣಿಗೆ ನಡೆಸಲಾಯಿತು.
ಹಿರೇಶಕುನ ಶ್ರೀಮಾರಿಕಾಂಬ ದೇವಸ್ಥಾನದಿಂದ ಸೊರಬ ಮುಖ್ಯ ರಸ್ತೆಯ ಮುಖಾಂತರ ಶ್ರೀ ರಂಗನಾಥ ದೇವಸ್ಥಾನವರೆಗೆ ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಗುರುಪ್ರಸನ್ನಗೌಡ ಬಾಸೂರು ಇವರ ನೇತೃತ್ವದಲ್ಲಿ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಮುಖಂಡ ಹೆಚ್.ಎಸ್. ಮಂಜಪ್ಪ, ಪಾಣಿ ರಾಜಪ್ಪ, ಗಜಾನನ ರಾಯರು, ದ್ವಾರಳ್ಳಿ ಮಲ್ಲಿಕಾರ್ಜುನ್, ಗೀತಾ ಮಲ್ಲಿಕಾರ್ಜುನ್, ಎ. ಎಲ್. ಅರವಿಂದ್, ನಿರಂಜನ ಕುಪ್ಪಗಡ್ಡೆ, ಯೋಗೇಶ್, ಎಂ. ಆರ್. ಪಾಟೀಲ್, ನಾಗಪ್ಪ, ಪುರಸಭೆ ಸದಸ್ಯರಾದ ವೀರೇಶ್ ಮೇಸ್ತ್ರಿ, ಪ್ರಭು ಮೇಸ್ತ್ರಿ, ಮಧುರಾಯ್ ಜಿ, ಶೇಟ್, ನಟರಾಜ ಉಪ್ಪಿನ್, ಜಯಲಕ್ಷ್ಮಿ, ಪರಮೇಶ್, ವಿಹೆಚ್‌ಪಿ ಅಧ್ಯಕ್ಷ ಕಾಳಿಂಗರಾಜ್, ಗೌರಮ್ಮ ಭಂಡಾರಿ, ತಾಲ್ಲೂಕು ಮತ್ತು ಜಿಲ್ಲಾ ಮುಖಂಡರು, ಎಲ್ಲ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಪದಾಧಿಕಾರಿಗಳು, ಯುವ ಬ್ರಿಗೇಡ್ ಅಧ್ಯಕ್ಷ ಮಹೇಶ್ ಕರ್ವೆ, ಬೂತ್ ಪ್ರಮುಖರು, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.



ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















