ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಸಾಮಗಾನದ ವತಿಯಿಂದ ಅ.30ರಂದು ಬೆಳಿಗ್ಗೆ 10.30ಕ್ಕೆ ರವೀಂದ್ರ ನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ದೇಶಭಕ್ತಿ ಗೀತೆಯ ಸಮೂಹ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಾಮಗಾನ ಸಂಸ್ಥೆಯು ಮಹಿಳಾ ಭಜನಾ ತಂಡಗಳಿಗಾಗಿ `ದೇಶಭಕ್ತಿ ಗೀತೆಯ ಸಮೂಹ ಗಾಯನ ಸ್ಪರ್ಧೆ’ ಏರ್ಪಡಿಸಿದ್ದು, ಈ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಪ್ರಥಮ ಬಹುಮಾನವಾಗಿ ಎಂಟು ಸಾವಿರ, ದ್ವಿತೀಯ ಐದು ಸಾವಿರ ಹಾಗೂ ತೃತೀಯ ಬಹುಮಾನ ಮೂರು ಸಾವಿರಗಳಿದೆ.
ಸ್ಪರ್ಧೆಯ ನಿಯಮಗಳು:
ಕನಿಷ್ಟ ಎಂಟು ಮಂದಿ ಮಹಿಳೆಯರು ತಂಡ ದೇಶಭಕ್ತಿ ಗೀತೆಯನ್ನೇ ಹಾಡಬೇಕು, ರಾಗ, ತಾಳ ಹಾಗೂ ಸಮೂಹದ ಹೊಂದಾಣಿಕೆಯನ್ನು ತೀರ್ಪಿನ ಅಂಶವಾಗಿ ಪರಿಗಣಿಸಲಾಗುವುದು. ರಂಗಪ್ರಸ್ತುತಿಯ ವಿಶೇಷತೆಗೆ ಒತ್ತು ಕೊಡಲಾಗುವುದು. ಒಂದು ಗೀತೆಗೆ ಐದು ನಿಮಿಷಗಳ ಕಾಲಾವಕಾಶವಿದ್ದು, ಕರೋಕೆ ಹಾಗೂ ಪಕ್ಕ ವಾದ್ಯಗಳನ್ನು ಒಳಸುವಂತಿಲ್ಲ, ಸ್ಪರ್ಧಾಳುಗಳೇ ತಾಳ ಹಾಗೂ ಶೃತಿಯ ವಾದ್ಯಗಳನ್ನು ಬೇಕಾದಲ್ಲಿ ನುಡಿಸಬಹುದು. ತೀರ್ಪುಗಾರರ ತೀರ್ಮಾನವೇ ಅಂತಿಮ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9964072793, 8310876277 ಸಂಪರ್ಕಿಸುವಂತೆ ಸಾಮಗಾನ ಸಂಸ್ಥೆಯ ಗೌರವಾಧ್ಯಕ್ಷ ಕೆ.ಈ. ಕಾಂತೇಶ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post