ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಬಿಜೆಪಿ ವತಿಯಿಂದ ಲಸಿಕಾ ವಾರಿಯರ್ಸ್ ಗಳಿಗೆ ಹಮ್ಮಿಕೊಂಡಿದ್ದ ಲಸಿಕಾ ಅಭಿನಂದನಾ ಅಭಿಯಾನದ ನಿಮಿತ್ತ ಇಂದು ಶಿವಮೊಗ್ಗ ನಗರದ ಬಾಪೂಜಿನಗರದ ನಗರ ಆರೋಗ್ಯ ಕೇಂದ್ರದ ವೈದ್ಯಕೀಯ ಮತ್ತು ಇನ್ನಿತರ ಸಿಬ್ಬಂದಿಗಳ ಪಾದಗಳನ್ನು ತೊಳೆದು ಪುಷ್ಪರ್ಚನೆ ಮಾಡುವ ಮೂಲಕ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮೀಣಾಭಿರುದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹಾಗೂ ಕೊರೋನ ಲಸಿಕಾ ಅಭಿಯಾನದ ಶಿವಮೊಗ್ಗ ಜಿಲ್ಲಾ ಸಂಚಾಲಕರು ಹಾಗೂ KSSIDC ಯ ಉಪಾಧ್ಯಕ್ಷ ಎಸ್. ದತ್ತಾತ್ರಿ ಉಪಸ್ಥಿತರಿದ್ದು ಎಲ್ಲಾ ಸಿಬ್ಬಂದಿಗಳನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರ ವೈದ್ಯಧಿಕಾರಿಗಳಾದ ಕೆ.ಆರ್. ಡಾ. ರೇಣುಕಾ, ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ಸುರೇಖಾ ಮುರಳಿಧರ್, ಪಾಲಿಕೆ ಸದಸ್ಯರಾದ ಧೀರರಾಜ್, ಆರತಿ ಅ.ಮಾ ಪ್ರಕಾಶ್, ಮಹಾಶಕ್ತಿಕೇಂದ್ರದ ಹಿಂದಿನ ಅಧ್ಯಕ್ಷರಾದ ನಾಗರಾಜ್ ರವರು ಸೇರಿದಂತೆ ಸಿಬ್ಬಂದಿಗಳಾದ ಜಯಮ್ಮ, ನಿರ್ಮಲಾ, ದಿವ್ಯಾ, ರಾಕೇಶ್, ರೋಹನ್, ಸ್ವಾತಿ, ಸಂದ್ಯಾ, ಜ್ಯೋತಿ, ಶ್ವೇತ, ಹರ್ಷಿತ, ಧನಂಜಯ, ಶೃತಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post