ಕಲ್ಪ ಮೀಡಿಯಾ ಹೌಸ್ | ಆಗುಂಬೆ |
ಆಗುಂಬೆ ಘಾಟಿಯ 9ನೆಯ ತಿರುವಿನಲ್ಲಿ ಲಾರಿಯೊಂದು ನಿಯಂತ್ರಣ ತಪ್ಪಿ ನಾಲ್ಕು ಮಂದಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಕ್ಯಾಂಟರ್ ಲಾರಿಯೊಂದು ಘಾಟಿ ಇಳಿಯುವಾಗ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಐವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.


ಲಾರಿಯೂ ಪ್ರಪಾತಕ್ಕೆ ಮುಗಿಚಿ ಬಿದ್ದಿದ್ದು, ಮೃತದೇಹಗಳನ್ನು ಮೇಲೆತ್ತಲು ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ. ಹೆಬ್ರಿ ಮತ್ತು ಆಗುಂಬೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಈ ಹಿಂದೆ ಎರಡು ಲಾರಿಗಳು ಪ್ರಪಾತಕ್ಕೆ ಮುಖ ಮಾಡಿ ಸಾವಿನ ಮುನ್ಸೂಟಚನೆ ನೀಡಿದ್ದವು. ಆದಾದ ಬಳಿಕ ಭೀಕರ ಅಪಘಾತವೇ ಘಾಟಿಯಲ್ಲಿ ಸಂಭವಿಸಿದೆ.



ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















