ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯೋಗ ಶಿಕ್ಷಣ ಮತ್ತು ಆಯುರ್ವೇದ ಇವು ವಿಶೇಷವಾದ ಶಕ್ತಿ ಇದನ್ನು ನಮ್ಮ ಪೂರ್ವಜರು ನಮಗೆ ಕೊಟ್ಟು ಹೋಗಿದ್ದಾರೆ ಇದನ್ನು ನಾವು ಬೆಳೆಸಬೇಕು ಮತ್ತು ಉಳಿಸಬೇಕು. ನಿತ್ಯ ನಿರ್ದಿಷ್ಟ ಸಮಯ ಯೋಗ ಮಾಡುವ ಮೂಲಕ ದೇಹವನ್ನು, ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಲು ಸಹಕಾರಿ ಎಂದು ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದರು.
ಯೋಗ ಶಿಕ್ಷಣ ಸಮಿತಿ ಶಿವಮೊಗ್ಗ, ವಿಕಾಸ ಟ್ರಸ್ಟ್ ಮತ್ತು ಆರೋಗ್ಯ ಭಾರತಿ ಇವರ ಸಹಯೋಗದಲ್ಲಿ ನಡೆದ ಧನ್ವಂತರಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯ ಸೊಗನೆಯಲ್ಲಿ ಆಯುರ್ವೇದ ಯೂನಿವರ್ಸಿಟಿಗೆ 100 ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ, DRDO ವಿಭಾಗದ ಸಂಶೋಧನ ಕೇಂದ್ರವನ್ನು ಸ್ಥಾಪಿಸಲು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರಿಗೆ ಪ್ರಸ್ತಾವನೆಯನ್ನು ನೀಡಿದ್ದೇವೆ. ಶೀಘ್ರವೇ ಇದಕ್ಕೆ ಶುಭ ಸೂಚನೆ ದೊರೆಯಲಿದೆ ಎಂದರು.
ಕೇಂದ್ರ ಸರ್ಕಾರ ಯೋಗ ಮತ್ತು ಆಯುರ್ವೇದ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವನ್ನು ಕೊಡುತ್ತಿದೆ. ನಗರ ಪ್ರದೇಶದಲ್ಲಿರುವ ನಾವು ಪ್ರಕೃತಿದತ್ತವಾದ ಪರಿಸರದಲ್ಲಿ ಇದ್ದರೆ ಆರೋಗ್ಯವಂತ ಜೀವನ ನೆಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಯೋಗ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಭ.ಮ ಶ್ರೀಕಂಠ ಇವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಡಾ ಸಂಜಯ್ ಕುಮಾರ್, ಅಥರ್ವ ಆಯುರ್ಧಾಮಯ ಸಂಸ್ಥಾಪಕರಾದ ಡಾ| ಮಲ್ಲಿಕಾರ್ಜುನ ಡಂಬಳ. ಮನೆ ಔಷಧಿ ತಜ್ಞರಾದ ಎಸ್. ಏನ್ ಸೀತಾರಾಮ. ಸಂಜಯ್ ಕುಮಾರ್ ಮತ್ತಿತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post