ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ದುರಸ್ತಿಗೀಡಾಗಿರುವ ಎಂಆರ್‌ಐ ಯಂತ್ರ ರಿಪೇರಿಗೆ ನೆದರ್‌ಲ್ಯಾಂಡ್‌ನಿಂದ ಶಿವಮೊಗ್ಗಕ್ಕೆ ತಂತ್ರಜ್ಞರು ಆಗಮಿಸಿದ್ದಾರೆ.
ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿದ್ದ ಎಂಆರ್‌ಐ ಯಂತ್ರವು ಕಳೆದ ಜೂನ್ ತಿಂಗಳಲ್ಲಿ ಹಾಳಾಗಿತ್ತು. ದುರಸ್ತಿಗೆ ವಿಶೇಷ ತಜ್ಞರ ಅವಶ್ಯಕತೆಯಿತ್ತು. ಸದರಿ ಯಂತ್ರ ಸರಿಪಡಿಸಲು ಪಿಲಿಪ್ಸ್ ಕಂಪನಿಯ ನೆದರ್ ಲ್ಯಾಂಡ್ ತಂತ್ರಜ್ಞರು, ನ.26ರಂದು ನಗರಕ್ಕೆ ಆಗಮಿಸಿದ್ದು, 4 ವಾರಗಳಲ್ಲಿ ಯಂತ್ರವನ್ನು ಸರಿಪಡಿಸಲಿದ್ದಾರೆ ಎಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post