ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪುನೀತ್ ಗೆ ನಾನು ಹುಟ್ಟಿನಲ್ಲಿ ಅಣ್ಣನಾಗಿರಬಹುದು, ಆತನ ಸಾಧನೆ, ಸೇವೆ, ವ್ಯಕ್ತಿತ್ವದ ಹಿಂದೆ ಚಿಕ್ಕವನ್ನು ಈ ಹಿನ್ನಲೆಯಲ್ಲಿ ಅಪ್ಪು ನನಗಿಂತ ಹಿರಿಯ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಾವುಕರಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈಡಿಗ ಸಂಘದ ವತಿಯಿಂದ ನಡೆದ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಾ. ರಾಜ್ ಕುಮಾರ್ ಮಕ್ಕಳಾದ ನಾವು ಮೂವರು ಎಂದಿಗೂ ಒಂದು ದಿವಸ ಜಗಳವಾಡಿದ ಉದಾಹರಣೆಯೇ ಇಲ್ಲ. ಬೇಕಾದರೆ ನನ್ನ ಅಕ್ಕ, ತಂಗಿಯ ಜತೆ ಆಗ್ಗಾಗ್ಗೆ ಜಗಳವಾಡಿದ್ದೇನೆ. ಪುನೀತ್ ಯಾವಗಲೂ ಶಿವಣ್ಣ ಎಂದೇ ನನಗೆ ಗೌರವ ಕೊಡುತ್ತಿದ್ದ. ಸಾವಿರಾರು ಮಂದಿ ಪುನೀತ್ ರಾಜ್ ಕುಮಾರ್ ಅವರನ್ನು ಹುಟ್ಟು ಹಾಕಿದ್ದಾನೆ. ಕೊನೆಯವರೆಗೂ ಅಭಿಮಾನಿಗಳ ಹೃದಯದಲ್ಲಿ ಅಜರಾಮರನಾಗಿರಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯೆ, ಮಾಜಿ ಸಚಿವೆ ಜಯಮಾಲಾ ಮಾತನಾಡಿ, ಡಾ. ರಾಜ್ ಕುಮಾರ್ ಮೂವರು ಮಕ್ಕಳು ರತ್ನಗಳಿದ್ದಂತೆ. ಯಾರೊಂದಿಗೂ ಅಹಂಕಾರದಿಂದ ನಡೆದುಕೊಂಡಿಲ್ಲ. ಅವರು ಯಾವುದೇ ವಿಚಾರಕ್ಕಾಗಿ ಅಣ್ಣ ತಮ್ಮಂದಿರು ಜಗಳವಾಡಿದ್ದು. ನೋಡಿಯೇ ಇಲ್ಲ. ಮಾದರಿಯಾಗಿ ಬದುಕಿ ತೋರಿಸಿದವರು. ಪುನೀತ್ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಏನು ಸಾಧಿಸಬೇಕೋ ಅದನ್ನು ಸಾಧಿಸಿ ತೋರಿಸಿದರು ಅವರು ಇನ್ನಷ್ಟು ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಬೇಕೆಂಬುದು ನಮ್ಮೆಲ್ಲರ ಆಶಯವಾಗಿತ್ತು ಆದರೆ ವಿಧಿಯಾಟ. ಲಕ್ಷಾಂತರ ಅಭಿಮಾನಿಗಳ ದುಃಖದ ಮೂಲಕ ಅಜರಾಮರ ಎಂಬುದನ್ನು ತೋರಿಸಿದ್ದಾರೆ ಎಂದು ತಿಳಿಸಿದರು.
ನಿರ್ಮಾಪಕ ಚಿನ್ನೇ ಗೌಡ ಮಾತನಾಡಿ, ಪುನೀತ್ ರಾಜ್ ಕುಮಾರ್ ಅವರ ಬಾಲ್ಯದ ದಿನಗಳನ್ನು ಸ್ಮರಿಸಿದರು.
ಮುಖ್ಯಮಂತ್ರಿ ಗಳ ಜಂಟಿ ಕಾರ್ಯದರ್ಶಿ ಜಿ. ಜಗದೀಶ್ ಮಾತನಾಡಿ, ಪುನೀತ್ ರಾಜ್ ಕುಮಾರ್ ಎಲ್ಲ ಸಮಾಜದ ಮನಸ್ಸನ್ನು ಗೆದ್ದ ಮಹಾನ್ ನಟ. ಇನ್ನೂ ಹತ್ತಾರು ಸಿನಿಮಾಗಳನ್ನು ನೀಡಬೇಕಿತ್ತು. ಆದರೆ ವಿಧಿಯಾಟ. ಅವರ ಅಂತ್ಯ ಸಂಸ್ಕಾರವನ್ನು ಮುಖ್ಯ ಮಂತ್ರಿಗಳ ನಿರ್ದೇಶನ, ರಾಜ್ಯ ಸರ್ಕಾರದ ಕರ್ತವ್ಯದಂತೆ ಅಚ್ಚುಕಟ್ಟಾಗಿ ನಡೆಸಿಕೊಡಲಾಯಿತು ಎಂದರು.
ಈಡಿಗ ಸಂಘದ ರಾಜ್ಯಾಧ್ಯಕ್ಷ ತಿಮ್ಮೇ ಗೌಡ ಮಾತನಾಡಿ, ಇತೀಚೆಗೆ ನನ್ನ 75 ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಅಪ್ಪು ವಿಡಿಯೋ ಮೂಲಕ ಹಾರೈಸಿ, ನೀವು ಇನ್ನಷ್ಟು ನೂರು ಕಾಲ ಬಾಳಿ ಎಂದು ತನ್ನ ಆಯಸ್ಸೆಲ್ಲ ನಮ್ಮಗೆ ನೀಡಿ ನಮ್ಮನೆಲ್ಲ ಆಗಲಿ ಹೋದ ಎಂದು ಗದ್ಗದಿತವಾಗಿ ನುಡಿದರು.
ಈಡಿಗ ಮಹಾಸಂಸ್ಥಾನದ ವಿಖ್ಯಾತನಂದ ಸ್ವಾಮಿ ಪುನೀತ್ ನಿಧನ ಕುರಿತು ಕಂಬನಿ ಮಿಡಿದು, ಆಶೀರ್ವಚನ ನೀಡಿದರು.
ಸ್ಮರಣಾಂಜಲಿ:
ಕಾರ್ಯಕ್ರಮದ ಅಧ್ಯಕ್ಷ, ವಾಸನ್ ಮಾತನಾಡಿ, ಪುನೀತ್ ರಾಜ್ ಕುಮಾರ್ ನಿಧನ ಇಡೀ ರಾಜ್ಯಕ್ಕೆ ನೋವುಂಟು ಮಾಡಿದೆ. ಲಕ್ಷಾಂತರ ಅಭಿಮಾನಿಗಳು ಇಂದಿಗೂ ನೋವಲ್ಲಿದ್ದಾರೆ. ಈಡಿಗ ಸಮಾಜದ ಹಮ್ಮೆಯ ಪುತ್ರನನ್ನು ಕಳೆದು ಕೊಂಡಿರುವುದು ಅತ್ಯಂತ ದುಃಖ ತಂದಿದೆ. ಸಮಾಜದ ವತಿಯಿಂದ ಸ್ಮರಣಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋರಿಂಗ್ ಸ್ಟಾರ್ ಮುರಳಿ, ನಟ ವಿಜಯ್ ರಾಘವೇಂದ್ರ, ಪುನೀತ್ ರಾಜ್ ಕುಮಾರ್ ಅವರ ರಾಜ್ ಕುಮಾರ್ ಚಲನಚಿತ್ರದ ಬೊಂಬೆ ಹೇಳುತೈತೆ ಗೀತೆ ಮೂಲಕ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಪುನೀತ್ ಸ್ಮರಣೆಗಾಗಿ ಲಯನ್ಸ್ ಕ್ಲಬ್ ವತಿಯಿಂದ ರಕ್ತದಾನ ಶಿಬಿರ, ನೇತ್ರದಾನ ನೋಂದಣಿ ಶಿಬಿರವನ್ನು ಆಯೋಜಿಸಲಾಗಿತ್ತು.
ಅಬಕಾರಿ ಉಪ ಆಯುಕ್ತ ಜಗದೀಶ್ ನಾಯಕ್ , ಚಲನಚಿತ್ರ ನಿರ್ಮಾಪಕ ಗೋವಿಂ ರಾಜ್, ಡಾ. ರಾಜ್ ಕುಮಾರ್ ಹಿರಿಯ ಪುತ್ರಿ ಪೂರ್ಣಿಮಾ, ಸ್ಮರಣಾಂಜಲಿ ಕಾರ್ಯಕ್ರಮದ ಜಂಟಿ ಕಾರ್ಯದರ್ಶಿ ಬಾಬು ಸೇರಿದಂತೆ ಅನೇಕರು ಹಾಜರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post