ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸುಮಾರು ಮೂರು ವರ್ಷಗಳಿಂದ ಭಾರೀ ಪ್ರಮಾಣದ ತೆರಿಗೆಯನ್ನು ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಮಂತ್ರಿ ಮಾಲ್’ಗೆ ಮತ್ತೆ ಬೀಗ ಹಾಕಲಾಗಿದೆ.
ಸುಮಾರು ಮೂರು ವರ್ಷಗಳಿಂದ 27 ಕೋಟಿ 77 ಲಕ್ಷ ರೂ.ಗಳಷ್ಟು ತೆರಿಗೆಯನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ತೆರಿಗೆ ಪಾವತಿಸುವಂತೆ ನೋಟೀಸ್ ನೀಡಿದ್ದರು ಇದನ್ನು ಮಾಲ್ ಮುಖ್ಯಸ್ಥರು ನಿರ್ಲಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಪಶ್ಚಿಮ ವಲಯದ ಅಧಿಕಾರಿಗಳು ಇಂದು ಸ್ಥಳಕ್ಕೆ ತೆರಳಿ ಬೀಗ ಹಾಕಿ, ಸೀಲ್ ಮಾಡಿದ್ದಾರೆ. ಈ ಮೂಲಕ ಒಂದೇ ವರ್ಷದಲ್ಲಿ ಮಂತ್ರಿ ಮಾಲ್’ಗೆ ಮೂರನೆಯ ಬಾರಿ ಬೀಗ ಹಾಕಿದಂತಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post