ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು 12 ಜನ ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದರು ಎನ್ನಲಾದ ಹೆಲಿಕಾಪ್ಟರ್ ಹಾರಾಟದ ಕೊನೆಯ ದೃಶ್ಯಾವಳಿಗಳನ್ನು ಸೆರೆ ಹಿಡಿದ್ದ ವ್ಯಕ್ತಿಯ ಮೊಬೈಲನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ ಕೊಯಮತ್ತೂರಿನ ಮದುವೆ ಛಾಯಾಗ್ರಾಹಕ ಜೋ ಅವರು ಡಿಸೆಂಬರ್ 8 ರಂದು ತಮ್ಮ ಸ್ನೇಹಿತ ನಜರ್ ಮತ್ತು ಅವರ ಕೆಲವು ಕುಟುಂಬ ಸದಸ್ಯರೊಂದಿಗೆ ಗುಡ್ಡಗಾಡು ನೀಲಗಿರಿ ಜಿಲ್ಲೆಯ ಕಟ್ಟೇರಿ ಪ್ರದೇಶಕ್ಕೆ ಫೋಟೋಗಳನ್ನು ಕ್ಲಿಕ್ಕಿಸಲು ಹೋಗಿದ್ದರು. ಈ ವೇಳೆ ಕುತೂಹಲದಿಂದ ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಹೆಲಿಕಾಪ್ಟರ್‌ನ ವೀಡಿಯೊವನ್ನು ರೆಕಾರ್ಡ್ ಮಾಡಿದ್ದರು, ಬಳಿಕ ಅದು ಕೆಲವೇ ಕ್ಷಣಗಳಲ್ಲಿ ಅದು ಪತನಕ್ಕೀಡಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post