ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಎಪಿಎಂಸಿ ನೂತನ ಅಧ್ಯಕ್ಷರಾಗಿ ಜಗದೀಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಒಡಂಬಡಿಕೆಯಂತೆ ಈ ಬಾರಿ ಜಗದೀಶ್ ಆಯ್ಕೆಯಾಗಿದ್ದಾರೆ.
ದುಗ್ಗಪ್ಪಗೌಡ ಅವರ ಅವಧಿಯ ನಂತರ ಎರಡು ಪಕ್ಷಗಳ ಒಡಂಬಡಿಕೆಯಂತೆ ಅಧ್ಯಕ್ಷರಾಗಿ ಮಹೇಶ್ ಅವಧಿ ಮಗಿದಿದ್ದು, ಈ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆದಿದೆ.
ಇದೇವೇಳೆ ಉಪಧ್ಯಾಕ್ಷರಾಗಿ ಬಾಲಕೃಷ್ಣ ಭಟ್ ಅವರೇ ಮುಂದುವರೆದಿದ್ದಾರೆ. ಅಧ್ಯಕ್ಷರ ಆಯ್ಕೆ ವೇಳೆ ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಪ್ರಮುಖರಾದ ಎನ್.ಜೆ. ರಾಜಶೇಖರ್ ಸೇರಿದಂತೆ ಜೆಡಿಎಸ್‌ನ ಪ್ರಮುಖರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post