ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ನಮ್ಮ ಬಂದು ಬಳಗವನ್ನು ನಾವು ಈ ಕೋವಿಡ್ ವೈರಸ್ ನಿಂದ ಕಳೆದುಕೊಂಡಿದ್ದೇವೆ. ಅನೇಕ ಬಡ ಕುಟುಂಬಗಳಿಗೆ ಅಣ್ಣಂನಂತೆ ನೇರವಾಗಲು ಯಡಿಯೂರಪ್ಪನವರು ಆರ್ಥಿಕ ನೆರವನ್ನು ನೀಡುವ ಮೂಲಕ ಆಧಾರವಾಗಿದ್ದಾರೆ ಎಂದು ಸಂಸದ ಬಿ. ವೈ. ರಾಘವೇಂದ್ರ ಅವರು ತಿಳಿಸಿದರು.
ಶಿಕಾರಿಪುರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಪುರಸಭೆ ಕಾರ್ಯಾಲಯ ಹಾಗೂ ವಿವಿಧ ಇಲಾಖೆಗಳು
ಇವರ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಕೋವಿಡ್-19 ಮೃತರ ಕುಟುಂಬದ ಸದಸ್ಯರಿಗೆ ಹಾಗೂ ಪ್ರಕೃತಿ ವಿಕೋಪದಿಂದ ಮನೆಹಾನಿಯಾದ ಸಂತ್ರಸ್ಥರಿಗೆ ಪರಿಹಾರ ಚೆಕ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೈತರಿಗೆ. ಚಾಲಕರಿಗೆ. ಬೀದಿ ಬದಿ ವ್ಯಾಪಾರಿಗಳಿಗೆ ಹೀಗೆ ಅಸಂಘಟಿತ ಕಾರ್ಮಿಕ ವರ್ಗ ಕಾರ್ಮಿಕರಿಗೆ ಧನ ಸಹಾಯವನ್ನು ಮಾಡಿದ್ದಾರೆ. ಜೊತೆಗೆ ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು 46 ಬಿಪಿಎಲ್ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ 1 ಲಕ್ಷ, ಕೇಂದ್ರದಿಂದ 50 ಸಾವಿರ, 45 ಕುಟುಂಬಗಳಿಗೆ 50 ಸಾವಿರ ರೂ ಪಡೆಯುತ್ತಿದ್ದಾರೆ. ಮಳೆ, ಪ್ರಕೃತಿ ವಿಕೋಪ 1 ಕೋಟಿ 23 ಲಕ್ಷ ರೂ ಅನುದಾನ ಕೊಡಿಸಿದ್ದಾರೆ. 3471 ಕುಟುಂಬಗಳಿಗೆ 1 ಕೋಟಿ 9 ಲಕ್ಷ ರೂ ಡಿಬಿಟಿ ಮೂಲಕ ಜಮಾ ಮಾಡಲಾಗಿದೆ ಎಂದು ತಿಳಿಸಿದರು.
ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ. ವೈ. ರಾಘವೇಂದ್ರ ಶಿಕಾರಿಪುರದ ತಾಲೂಕು ಕಚೇರಿಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಕುಟುಂಬಕ್ಕೆ.ಪ್ರಕೃತಿ ವಿಕೋಪದಿಂದ ಮನೆಹಾನಿಯಾದ ಸಂತ್ರಸ್ಥರಿಗೆ ಪರಿಹಾರ ಚೆಕ್ ಹಸ್ತಾಂತರಿಸಿದರು
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರುದ್ರೇಗೌಡರು, ಆಯನೂರು ಮಂಜುನಾಥ್ಡಿ, ಸಿಸಿ ಬ್ಯಾಂಕ್ ನ ಅಧ್ಯಕ್ಷ ಚೆನ್ನವೀರಣ್ಣ. ತಹಶಿಲ್ದಾರ್ ಕವಿರಾಜ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post