ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ರಾಜ್ಯದಲ್ಲಿ ನಿನ್ನೆ 5 ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಇದರಲ್ಲಿ ಭದ್ರಾವತಿಯ ಓರ್ವ ಯುವತಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
Five cases of Omicron have been confirmed on Dec 19th:
🔹 Dharwad: 54 yr male
🔹 Bhadravathi: 20 yr female
🔹 Udupi: 82 yr male and 73 yr female
🔹 Mangaluru: 19 yr female#Omicronindia #Covid_19 @BSBommai
— Dr Sudhakar K (@mla_sudhakar) December 20, 2021
ಈ ಕುರಿತಂತೆ ಸ್ವತಃ ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಒಟ್ಟು 5 ಓಮಿಕ್ರಾನ್ ಹೊಸ ಪ್ರಕರಣ ಪತ್ತೆಯಾಗಿದೆ. ಇದರಲ್ಲಿ ಭದ್ರಾವತಿಯ 20 ವರ್ಷದ ಓರ್ವ ಯುವತಿಯಲ್ಲೂ ಸಹ ಸೋಂಕು ದೃಢಪಟ್ಟಿದೆ ಎಂದಿದ್ದಾರೆ.ಕಳೆದ ಎರಡು ವಾರಗಳ ಹಿಂದೆ ನಗರದ ಖಾಸಗಿ ನರ್ಸಿಂಗ್ ಕಾಲೇಜಿನ 24 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿ ಕಾಲೇಜು ಹಾಸ್ಟೆಲ್ ಹಾಗೂ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಇವರ ದ್ರವವನ್ನು ಉನ್ನತ ಪರೀಕ್ಷೆಗಾಗಿ ಬೆಂಗಳೂರಿಗೆ ರವಾನಿಸಲಾಗಿತ್ತು. ಇದರ ವರದಿ ನಿನ್ನೆ ರಾತ್ರಿ ಬಂದಿದ್ದು, ಈ ಸೋಂಕಿತ ವಿದ್ಯಾರ್ಥಿಗಳಲ್ಲಿ 20 ವರ್ಷದ ಓರ್ವ ವಿದ್ಯಾರ್ಥಿನಿಗೆ ಓಮಿಕ್ರಾನ್ ದೃಢಪಟ್ಟಿದೆ ಎಂದು ಹೇಳಲಾಗಿದ್ದರೂ, ಸ್ಥಳೀಯ ಅಧಿಕೃತ ಮೂಲಗಳು ಇದನ್ನು ಖಚಿತಪಡಿಸಿಲ್ಲ. ಸೋಂಕಿತ ವಿದ್ಯಾರ್ಥಿನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ ಎನ್ನುವ ಮಾಹಿತಿಯೂ ಸಹ ಇರುವುದು ಆತಂಕಕ್ಕೆ ಕಾರಣವಾಗಿದೆ.
ನಾಗರಿಕರೇ ಎಚ್ಚರಿಕೆ ವಹಿಸಿ, ನಿರ್ಲಕ್ಷಿಸಬೇಡಿ
ತಾಲೂಕಿನ ನಾಗರಿಕರೇ ಈಗ ಪತ್ತೆಯಾಗಿರುವ ಓಮಿಕ್ರಾನ್ ಸೋಂಕಿನ ಕುರಿತಾಗಿ ಆತಂಕಪಡಬೇಡಿ. ಆದರೆ, ಮುಂಜಾಗ್ರತೆ ವಹಿಸಿ.
ಸರ್ಕಾರ ಹಾಗೂ ಸ್ಥಳೀಯ ಆಡಳಿತ ಕೊರೋನಾ ಕುರಿತಾಗಿ ಮುಂಜಾಗ್ರತೆ ವಹಿಸುವಂತೆ ಸಾರ್ವಜನಿಕರಿಗೆ ನಿರಂತರವಾಗಿ ತಿಳುವಳಿಕೆ ನೀಡುತ್ತಲೇ ಬಂದಿದೆ. ನಗರ ಸೇರಿದಂತೆ ತಾಲೂಕಿನಲ್ಲಿ ಕೊರೋನಾ ಕಣ್ಮರೆಯಾಗಿದೆ ಎಂಬ ಹಿನ್ನೆಲೆಯಲ್ಲಿ ನಾಗರಿಕರು ನಿರ್ಲಕ್ಷದ ಧೋರಣೆ ತೋರುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಾಣೆಯಾಗಿದ್ದು, ಈ ರೀತಿಯ ವರ್ತನೆ ಮುಂದಿನ ದಿನಗಳಲ್ಲಿ ಮತ್ತೆ ಸೋಂಕು ಹೆಚ್ಚಾಗುವುದಕ್ಕೆ ಕಾರಣವಾಗಬಹುದು.
ದಯಮಾಡಿ, ಸಾಂಕ್ರಾಮಿಕ ರೋಗದ ವಿಚಾರದಲ್ಲಿ ನಿರ್ಲಕ್ಷ ಬೇಡ. ಮನೆಯಿಂದ ಹೊರಕ್ಕೆ ಬರುವಾಗ ತಪ್ಪದೇ ಮಾಸ್ಕ್ ಧರಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಯಂ ಪ್ರೇರಿತವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಸ್ಯಾನಿಟೈಸರ್ ಬಳಸಿ, ಜ್ವರ-ಶೀತ ಸೇರಿದಂತೆ ಈ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ. ಅತ್ಯಂತ ಮುಖ್ಯವಾಗಿ 18 ವರ್ಷ ದಾಟಿದ ಪ್ರತಿಯೊಬ್ಬರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ.
ತಾಲೂಕಿನಲ್ಲಿ ಕೊರೋನಾ ಸೋಂಕು ಸಂಪೂರ್ಣ ನಿಯಂತ್ರಣದಲ್ಲಿದೆ. ಆದರೆ, ಸಾರ್ವಜನಿಕರು ನಿರ್ಲಕ್ಷ ವಹಿಸಿದರೆ ಮತ್ತೆ ಪರಿಸ್ಥಿತಿ ಹದಗೆಡುವ ಸಾಧ್ಯತೆಯಿರುತ್ತದೆ. ಹೀಗಾಗಿ, ಎಚ್ಚರಿಕೆ ವಹಿಸಿ… ಭದ್ರಾವತಿಯನ್ನು ಸೋಂಕು ಮುಕ್ತವಾಗಿರುವಂತೆ ಎಲ್ಲರೂ ಸರ್ಕಾರದೊಂದಿಗೆ ಕೈಜೋಡಿಸೋಣ ಎನ್ನುವುದು ಕಲ್ಪ ಮೀಡಿಯಾ ಹೌಸ್ ಕಳಕಳಿ…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post